ಮೈಸೂರು ಪ್ರವಾಸೋದ್ಯಮದ ಮತ್ತೊಂದು ಆಕರ್ಷಣೆ ಕಾವೇರಿ ಕಲಾ ಗ್ಯಾಲರಿ: ಜು.13ಕ್ಕೆ ಉದ್ಘಾಟನೆ
ಮೈಸೂರು

ಮೈಸೂರು ಪ್ರವಾಸೋದ್ಯಮದ ಮತ್ತೊಂದು ಆಕರ್ಷಣೆ ಕಾವೇರಿ ಕಲಾ ಗ್ಯಾಲರಿ: ಜು.13ಕ್ಕೆ ಉದ್ಘಾಟನೆ

July 9, 2022

ಮೈಸೂರು, ಜು.೮(ಎಸ್‌ಬಿಡಿ)- ಮೈಸೂರಿನ ದಸರಾ ವಸ್ತುಪ್ರದರ್ಶನ ಆವರಣದಲ್ಲಿ ನಿರ್ಮಾಣ ವಾಗಿರುವ ಅತ್ಯಾಕರ್ಷಕ `ಕಾವೇರಿ ಕಲಾ ಗ್ಯಾಲರಿ’ ಜು.೧೩ಕ್ಕೆ ಉದ್ಘಾಟನೆಯಾಗಲಿದ್ದು, ಈ ಮೂಲಕ ನಗರದ ಪ್ರವಾಸಿ ಸ್ಥಳಗಳ ಪಟ್ಟಿಗೆ ಮತ್ತೊಂದು ಸೇರ್ಪಡೆಯಾಗಲಿದೆ.

ಪ್ರವಾಸೋದ್ಯಮ ಇಲಾಖೆ ಹಾಗೂ ಕರ್ನಾ ಟಕ ವಸ್ತುಪ್ರದರ್ಶನ ಪ್ರಾಧಿಕಾರದ ನೆರವಿನೊಂದಿಗೆ ರಾಷ್ಟಿçÃಯ ವಿಜ್ಞಾನ ಅಕಾಡೆಮಿಯ ಪರಿಕಲ್ಪನೆ ಯಂತೆ ಕೇಂದ್ರೀಯ ಸಂಸ್ಕöÈತಿ ಸಚಿವಾಲಯದ ರಾಷ್ಟಿçÃಯ ವಿಜ್ಞಾನ ವಸ್ತು ಸಂಗ್ರಹಾಲಯವು ಕಾವೇರಿ ನದಿ ಸಂಬAಧ ಸಂಶೋಧನೆ ನಡೆಸಿ, ವಸ್ತುಪ್ರದರ್ಶನ ಆವರಣದ ಕನ್ನಡ ಕಾರಂಜಿ ಕಟ್ಟಡದಲ್ಲಿ ನಿರ್ಮಿಸಿರುವ `ಕಾವೇರಿ ಕಲಾ ಗ್ಯಾಲರಿ’ ಯನ್ನು ಪ್ರವಾಸೋದ್ಯಮ
ಸಚಿವ ಆನಂದ್‌ಸಿAಗ್ ಸಮ್ಮುಖದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮ ಶೇಖರ್, ಜು.೧೩ರ ಬೆಳಗ್ಗೆ ೧೧ಕ್ಕೆ ಉದ್ಘಾಟಿಸಲಿದ್ದಾರೆ. ಇದರೊಂದಿಗೆ ವರ್ಷವಿಡೀ ಪ್ರವಾಸಿಗರ ವೀಕ್ಷಣೆಗೆ ಗ್ಯಾಲರಿ ಮುಕ್ತಗೊಳ್ಳಲಿದೆ. ಈ ಕಾರ್ಯಕ್ರಮದಲ್ಲಿ ಶಾಸಕರಾದ ಎಸ್.ಎ.ರಾಮದಾಸ್, ಜಿ.ಟಿ.ದೇವೇಗೌಡರು, ಎಲ್.ನಾಗೇಂದ್ರ, ತನ್ವೀರ್ ಸೇಠ್, ಸಂಸದರಾದ ಪ್ರತಾಪ್ ಸಿಂಹ, ವಿ.ಶ್ರೀನಿವಾಸ ಪ್ರಸಾದ್, ಸುಮಲತಾ ಅಂಬರೀಶ್, ಪ್ರಭಾರ ಮೇಯರ್ ಸುನಂದಾ ಪಾಲನೇತ್ರ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಲಿದ್ದಾರೆ.

ಗ್ಯಾಲರಿ ವಿಶೇಷ: ಕನ್ನಡ ನಾಡಿನ ಜೀವನದಿ `ಕಾವೇರಿ’ ಉಗಮ ಸ್ಥಾನದಿಂದ ಸಮುದ್ರಕ್ಕೆ ಸೇರುವವರೆವಿಗೂ ಸಂಪೂರ್ಣ ಚಿತ್ರಣವನ್ನೊಳಗೊಂಡ `ಕಾವೇರಿ ಕಲಾ ಗ್ಯಾಲರಿ’ ನಿರ್ಮಾಣ ನಾಲ್ಕೆöÊದು ವರ್ಷಗಳಿಂದ ನಡೆದಿತ್ತು. ಗ್ಯಾಲರಿ ಸಜ್ಜುಗೊಂಡು ವರ್ಷ ಕಳೆದಿದ್ದರೂ ಕೊರೊನಾ ಮತ್ತಿತರ ಕಾರಣಗಳಿಂದ ಅಧಿಕೃತವಾಗಿ ಉದ್ಘಾಟನೆ ಆಗಿರಲಿಲ್ಲ. ನೀರೆರೆಯುವ ಕಾವೇರಿ ವಿಗ್ರಹ, ಕಾವೇರಿ ಕೊಳ್ಳದ ಜನಾಂಗೀಯ ವೈವಿಧ್ಯತೆ, ಕೃಷಿಯ ಮಹತ್ವ, ಕಾವೇರಿ ಹಾದಿಯ ಆಸುಪಾಸಿನಲ್ಲಿರುವ ಸಾಂಸ್ಕೃತಿಕ ವೈಭವ, ವರ್ಚುವಲ್ ಬೋಟಿಂಗ್ ಮತ್ತಿತರ ವಿಶೇಷತೆಗಳಿವೆ. ಅಲ್ಲದೆ ೩ಡಿ ಸ್ಕಿçÃನ್ ಥಿಯೇಟರ್‌ನಲ್ಲಿ ಕಾವೇರಿ ನದಿ ಕುರಿತಾದ ೨೦ ನಿಮಿಷಗಳ ಕಿರುಚಿತ್ರ ಪ್ರಸಾರ ಮಾಡಲಾಗುತ್ತದೆ. ದೇಶದಲ್ಲಿ ಗಂಗಾ ಮತ್ತು ಬ್ರಹ್ಮಪುತ್ರ ನದಿಗಳ ಕುರಿತ ಗ್ಯಾಲರಿಗಳಿದ್ದು, ಮೂರನೆಯದಾಗಿ ಸಾಂಸ್ಕೃತಿಕ ನಗರಿ ಮೈಸೂರಿನ ಕಾವೇರಿ ಕಲಾ ಗ್ಯಾಲರಿ ಜನಾಕರ್ಷಣೆಯ ಕೇಂದ್ರವಾಗಲಿದೆ.

ವೀಕ್ಷಣೆಗೆ ಟಿಕೆಟ್: ಉದ್ಘಾಟನೆ ನಂತರ ಕಾವೇರಿ ಕಲಾ ಗ್ಯಾಲರಿಯನ್ನು ವೀಕ್ಷಣೆಗೆ ಮುಕ್ತಗೊಳಿಸಲಾಗುವುದು. ವಯಸ್ಕರಿಗೆ ೨೦ ಹಾಗೂ ಮಕ್ಕಳಿಗೆ ೧೦ ರೂ. ಪ್ರವೇಶ ಶುಲ್ಕ ಇರಲಿದೆ. ಸದ್ಯಕ್ಕೆ ಬೆಳಗ್ಗೆ ೧೦ರಿಂದ ಸಂಜೆ ೬ ಗಂಟೆವರೆಗೆ ಸಮಯ ನಿಗದಿಪಡಿಸಲಾಗಿದ್ದು, ಸಂದರ್ಭಾನುಸಾರ ಸಮಯದ ವಿಸ್ತರಣೆ ಮಾಡಿಕೊಳ್ಳಲಾ ಗುವುದು ಎಂದು ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಹೇಮಂತ್ ಕುಮಾರ್ ಗೌಡ `ಮೈಸೂರು ಮಿತ್ರ’ನಿಗೆ ತಿಳಿಸಿದರು.

 

Translate »