ಮೈಸೂರಲ್ಲಿ ಮಳೆಯ ಅವಾಂತರಕ್ಕೆವಿಶೇಷ ಟಾಸ್ಕ್ಫೋರ್ಸ್ ರಚನೆ
ಮೈಸೂರು

ಮೈಸೂರಲ್ಲಿ ಮಳೆಯ ಅವಾಂತರಕ್ಕೆವಿಶೇಷ ಟಾಸ್ಕ್ಫೋರ್ಸ್ ರಚನೆ

July 9, 2022

ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು ಸೂಚನೆ

ಪಾಲಿಕೆ, ಮುಡಾ ಅಧಿಕಾರಿಗಳೊಂದಿಗೆ ಸಭೆ

ದಸರಾ ವೇಳೆಗೆ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳಿಸಲು ಸೂಚನೆ

ಸ್ವಚ್ಛ ಮೈಸೂರು, ಹಸಿರು ಮೈಸೂರಿಗೆ ಆಧ್ಯತೆ ನೀಡಲು ಸಲಹೆ

ಮೈಸೂರು ನಗರಪಾಲಿಕೆ ಸಭಾಂಗಣದಲ್ಲಿ ಶುಕ್ರವಾರ ನಡೆದ ಪ್ರಗತಿಪರಿಶೀಲನಾ ಸಭೆಯಲ್ಲಿ ನಗರಾಭಿವೃದ್ಧಿ
ಸಚಿವ ಭೈರತಿ ಬಸವರಾಜು,ಆಯುಕ್ತ ಜಿ.ಲಕ್ಷಿ÷್ಮÃಕಾಂತ್ ರೆಡ್ಡಿ, ಹೆಚ್ಚುವರಿ ಆಯುಕ್ತರಾದ ಎಂ.ಜೆ.ರೂಪ, ಎಂ.ಕೆ.ಸವಿತ,
ಅಧೀಕ್ಷಕ ಅಭಿಯಂತರ ಮಹೇಶ್, ಮುಡಾ ಕಾರ್ಯದರ್ಶಿ ವೆಂಕಟರಾಜು, ಪಾಲಿಕೆ ಕೌನ್ಸಿಲ್ ಕಾರ್ಯದರ್ಶಿ ರಂಗಸ್ವಾಮಿ ಹಾಜರಿದ್ದರು.
ಮೈಸೂರು,ಜು.೮(ಎಂಟಿವೈ)-ಮೈಸೂರು ನಗರದಲ್ಲಿ ಮಳೆಯ ಅವಾಂತರ ತಡೆಗೆ ವಿಶೇಷ ಟಾಸ್ಕ್ಫೋರ್ಸ್ ರಚನೆ ಮಾಡುವಂತೆ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು ಸೂಚಿಸಿದ್ದಾರೆ.
ಮೈಸೂರು ಮಹಾನಗರ ಪಾಲಿಕೆಯ ಹಳೆ ಕೌನ್ಸಿಲ್ ಸಭಾಂಗಣದಲ್ಲಿ ಶುಕ್ರವಾರ ಮೈಸೂರು ನಗರದ ಅಭಿವೃದ್ಧಿ ಕಾಮಗಾರಿಗಳ ಕುರಿತಂತೆ ಪಾಲಿಕೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಪ್ರಗತಿಯಲ್ಲಿರುವ ವಿವಿಧ ಕಾಮಗಾರಿ ಗಳ ಮಾಹಿತಿ ಸಂಗ್ರಹಿಸಿದ ಬಳಿಕ ಮಾತನಾಡಿ, ಕಳೆದ ಕೆಲವು ದಿನಗಳಿಂದ ಉತ್ತಮ ಮಳೆಯಾ ಗುತ್ತಿದೆ. ಮುಂಬರುವ ದಿನಗಳಲ್ಲಿ ಮಳೆ ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆಯಿದೆ. ಮಳೆಯ ಅವಾಂತರ ತಡೆಗೆ ಮೊದಲೇ ಸಜ್ಜಾಗಬೇಕು. ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿ ಉಂಟು ಮಾಡುವ ಹಾನಿ ತÀಡೆಗೆ ಕ್ರಮ ಕೈಗೊಳ್ಳಬೇಕು. ಅದಕ್ಕಾಗಿ ವಿಶೇಷ ಟಾಸ್ಕ್ಫೋರ್ಸ್ ರಚಿಸಬೇಕು. ಹಗಲು, ರಾತ್ರಿ ವೇಳೆ ಪ್ರತ್ಯೇಕವಾಗಿ ಕಾರ್ಯ ನಿರ್ವಹಿಸಲು ಎರಡು ತಂಡ ರಚಿಸಬೇಕು. ರಕ್ಷಣಾ ಕಾರ್ಯಕ್ಕೆ ಬೇಕಾದ ಸಲ ಕರಣೆಗಳಿರ ಬೇಕು. ಇದರÀಲ್ಲಿ ಪಾಲಿಕೆ, ಮುಡಾ ಅಧಿಕಾರಿಗಳು, ಸಿಬ್ಬಂದಿ ಇರಬೇಕು. ಮಳೆಯಿಂದ ಹಾನಿಗೊಳ ಗಾದ ಬಗ್ಗೆ ದೂರು ಬಂದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ, ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು. ಮಳೆ ನೀರು ಹರಿದುಹೋಗುವಂತೆ ಚರಂಡಿಗಳನ್ನು ಸ್ವಚ್ಛ ಮಾಡಿಸಬೇಕು. ಕಾಲುವೆಗಳ ಮೂಲಕ ಕೆರೆಗಳಿಗೆ ನೀರು ಸರಾಗವಾಗಿ ಹರಿದುಹೋಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ದಸರಾ ವೇಳೆಗೆ ಕಾಮಗಾರಿ ಪೂರ್ಣ ಗೊಳಿಸಿ: ನಾಡಹಬ್ಬ ಸಮೀಪಿಸುತ್ತಿದೆ. ಈಗಾ ಗಲೇ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಗುಣಮಟ್ಟ
ಕಾಯ್ದುಕೊಂಡು ಪೂರ್ಣಗೊಳಿಸಬೇಕು. ದಸರಾ ವೇಳೆಗೆ ಆದÀ್ಯತೆ ಮೇರೆಗೆ ಎಲ್ಲಾ ಕಾಮಗಾರಿ ಪೂರ್ಣಗೊಳಿಸಿ, ಸ್ವಚ್ಛ ಮೈಸೂರಾಗಿ ಮಾರ್ಪಡಿಸ ಬೇಕು. ಬಾಕಿಯಿರುವ ವಿದ್ಯುತ್ ಕಂಬಗಳಿಗೆ ಎಲ್‌ಇಡಿ ಬಲ್ಬ್ ಅಳವಡಿಸುವ ಕಾರ್ಯ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.
ಕಳೆದ ಕೆಲವು ದಿನಗಳಿಂದ ಉತ್ತಮ ಮಳೆ ಬೀಳುತ್ತಿದೆ. ಈ ಸಂದರ್ಭ ಉಪಯೋಗಿಸಿಕೊಂಡು ಮೈಸೂರಲ್ಲಿ ಗಿಡ ನೆಡಲು ಕ್ರಮ ಕೈಗೊಳ್ಳಬೇಕು. ಈಗಲೇ ಗಿಡ ನಡೆಲು ಮುಂದಾದರೆ ಮುಂಬರುವ ದಿನಗಳಲ್ಲಿ `ಹಸಿರು ಮೈಸೂರು’ ಹೆಗ್ಗಳಿಕೆ ಸಾಧ್ಯವಾಗಲಿದೆ ಎಂದರು.

ಕಡ್ಡಾಯವಾಗಿ ಗ್ಲೌಸ್ ಧರಿಸಬೇಕು: ನಗರದಲ್ಲಿ ಸ್ವಚ್ಛತೆಯನ್ನು ಕಾಪಾಡು ವುದರೊಂದಿಗೆ ಸ್ವಚ್ಛ ಸರ್ವೆಕ್ಷಣೆ ಅಭಿಯಾನದಲ್ಲಿ ಪ್ರಥಮ ಸ್ಥಾನ ಪಡೆಯಲು ಕೆಲಸ ಮಾಡಬೇಕು. ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಮುಷ್ಕರ ನಡೆಸಿದ ಪೌರಕಾರ್ಮಿಕರ ಮುಖಂಡರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪೌರಕಾರ್ಮಿಕರಿಗೆ ಸ್ವಚ್ಛತಾ ಕೆಲಸ ಮಾಡಲು ಗ್ಲೌಸ್, ಗಮ್‌ಬೂಟ್ ನೀಡಿಲ್ಲ ಎಂದು ಆರೋಪ ಮಾಡಿದ್ದಾರೆ. ಬರೀ ಕೈಯ್ಯಲ್ಲಿ ಸ್ವಚ್ಛತೆ ಮಾಡಿ ಎಂದೂ ಸರ್ಕಾರ ಎಂದು ಹೇಳಿಲ್ಲ. ಸ್ಥಳೀಯ ಸಂಸ್ಥೆಗಳು ಗ್ಲೌಸ್, ಬೂಟ್ ನೀಡಿದರೂ ಅದನ್ನು ಪೌರಕಾರ್ಮಿ ಕರು ಬಳಸುತ್ತಿಲ್ಲ. ಇನ್ನು ಮುಂದೆ ಕಡ್ಡಾಯವಾಗಿ ಗ್ಲೌಸ್, ಗಮ್‌ಬೂಟ್ ಧರಿಸುವಂತೆ ಪೌರಕಾರ್ಮಿಕರಿಗೆ ತಿಳಿಸಬೇಕು. ಪಾಲಿಕೆ ವತಿಯಿಂದ ಪೌರಕಾರ್ಮಿಕರಿಗೆ ಏನೆಲ್ಲಾ ಸಲಕರಣೆ ನೀಡಿದರೂ, ದಾಖಲೀಕರಿಸಿ ಸಂಘದ ಮುಖಂಡರ ಗಮನಕ್ಕೆ ತರುವಂತೆ ಸೂಚಿಸಿದರು.

ಆರೋಗ್ಯ ತಪಾಸಣೆ ಮಾಡಿಸಿ: ಕಾಲಕಾಲಕ್ಕೆ ಪೌರ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ಮಾಡಿಸಬೇಕು. ನಾವು ಪೌರಕಾರ್ಮಿಕರಿಗೆ ಕೊಡುವ ಸವಲತ್ತುಗಳು ಬಳಕೆಯಾಗುವಂತೆ ಆರೋಗ್ಯಾಧಿಕಾರಿಗಳು ಕೆಲಸ ಮಾಡಬೇಕು. ಪೌರಕಾರ್ಮಿಕರನ್ನು ನಮ್ಮವರೆಂದು ತಿಳಿದು ಅವರ ಹಿತಕಾಯಬೇಕು ಎಂದು ತಿಳಿ ಹೇಳಿದರು.

ಉದ್ಯಾನವನ ನಿರ್ವಹಣೆ: ಕಾಮಗಾರಿಯಲ್ಲಿ ಅನಗತ್ಯ ವಿಳಂಬ ಆಗÀಬಾರದು. ಅಧಿಕಾರಿಗಳು ಕಚೇರಿಯಲ್ಲಿ ಕೂರದೇ ಸ್ಥಳಕ್ಕೆ ತೆರಳಿ ಜನರ ಸಮಸ್ಯೆಗಳನ್ನು ಬಗೆಹರಿಸಬೇಕು. ನಗರದ ಉದ್ಯಾನಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು. ಒಳಚರಂಡಿ ನೀರನ್ನು ಶುದ್ಧೀಕರಿಸಿ ಅದನ್ನು ಉದ್ಯಾನ ನಿರ್ವಹಣೆಗೆ ಉಪಯೋಗಿಸಲು ಕ್ರಮ ಕೈಗೊಳ್ಳÀಬೇಕು ಎಂದು ನಿರ್ದೇಶನ ನೀಡಿದರು.

ಅಗತ್ಯ ಕ್ರಮ ಕೈಗೊಳ್ಳಲಾಗಿದೆ: ಪಾಲಿಕೆ ಆಯುಕ್ತ ಜಿ.ಲಕ್ಷಿö್ಮÃಕಾಂತರೆಡ್ಡಿ ಮಾತನಾಡಿ, ಪಾಲಿಕೆ ವತಿಯಿಂದ ಪೌರಕಾರ್ಮಿಕರಿಗೆ ಗುಣಮಟ್ಟದ ಸಮವಸ್ತç, ಗ್ಲೌಸ್, ಬೂಟ್, ರೈನ್‌ಕೋಟ್ ನೀಡಲಾಗಿದೆ. ಮೈಸೂರಲ್ಲಿ ೨೨ ಕಡೆಗಳಲ್ಲಿ ಪೌರಕಾರ್ಮಿಕರಿಗಾಗಿ ವಿಶ್ರಾಂತಿ ಗೃಹ ನಿರ್ಮಿಸಲು ಸ್ಥಳ ಗುರುತಿಸಿ, ಕೆಲವು ಕಡೆಗಳಲ್ಲಿ ಕಾಮಗಾರಿಗೆ ವರ್ಕ್ ಆರ್ಡರ್ ಕೊಡಲಾಗಿದೆ. ಉಳಿದ ವಾರ್ಡ್ಗಳಲ್ಲೂ ಸ್ಥಳ ಗುರುತಿಸುವ ಪ್ರಕ್ರಿಯೆ ನಡೆಯುತ್ತಿದೆ
ಆದಾಯ ಹೆಚ್ಚಳಕ್ಕೆ ಕ್ರಮ: ತೆರಿಗೆ ಸಂಗ್ರಹದಲ್ಲಿ ನಗರ ಪಾಲಿಕೆ ಗಣನೀಯ ಸಾಧನೆ ಮಾಡಿದೆ. ಕಳೆದ ಬಾರಿ ೧೬೨ ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹಿ ಸಲಾಗಿತ್ತು. ಆಸ್ತಿ ತೆರಿಗೆ ಸಂಗ್ರಹದಲ್ಲಿ ಶೇ.೩೫ ರಿಂದ ೪೦ ರಷ್ಟು ಏರಿಕೆ ಕಂಡಿದೆ. ಕಳೆದ ಮೂರು ತಿಂಗಳ ಅವಧಿಯಲ್ಲಿ ೧೦೪ ಕೋಟಿ ರೂ. ತೆರಿಗೆ ಸಂಗ್ರಹಿಸಲಾಗಿದೆ. ಉದ್ದಿಮೆ ಪರವಾನಗಿಯಿಂದ ಕಳೆದ ಬಾರಿ ೮ ಕೋಟಿ ರೂ. ಸಂಗ್ರಹಿಸ ಲಾಗಿದ್ದು, ಈ ಬಾರಿ ೧೨ ಕೋಟಿ ರೂ. ಸಂಗ್ರಹಿಸುವ ಗುರಿ ಇದೆ ಎಂದರು.

ನೀರಿನ ಸಂಪರ್ಕ ಕಡಿತ: ನಗರದಲ್ಲಿ ೪೦ ಸಾವಿರ ಅನಧಿಕೃತ ಕುಡಿಯುವ ನೀರಿನ ಸಂಪರ್ಕವಿದ್ದು, ಅವುಗಳ ಕಡಿತಗೊಳಿಸುವ ಕಾರ್ಯಾಚರಣೆ ಮುಂದುವರೆಸಲಾಗಿದೆ. ಇದರಿಂದ ನೀರಿನ ಹೊಸ ಸಂಪರ್ಕ ಪಡೆಯಲು ತಿಂಗಳಿಗೆ ೨ ಸಾವಿರ ಅರ್ಜಿ ಸಲ್ಲಿಕೆಯಾಗುತ್ತಿದೆ. ಕಳೆದ ಮೂರು ತಿಂಗಳಿAದ ೭೫೦೦ ಹೊಸ ಸಂಪರ್ಕ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಕಾರ್ಯಾ ಚರಣೆ ಮುಂದುವರೆಸಲಾಗುತ್ತದೆ ಎಂದು ತಿಳಿಸಿದರು.

ವಾಹನ ಸಮಸ್ಯೆ ನಿವಾರಣೆÀ: ನಗರದಲ್ಲಿ ಸ್ವಚ್ಛತೆ ಕಾಪಾಡಲು ೨೮೫ ಆಟೋ ಟಿಪ್ಪರ್, ವಾರ್ಡಿಗೊಂದು ಟ್ರಾಕ್ಟರ್, ೧೨ ಕಾಂಪಾಕ್ಟರ್ ಸೇರಿದಂತೆ ಇನ್ನಿತರ ಮೂಲ ಸೌಕರ್ಯ ಕಲ್ಪಿಸಲಾಗಿದೆ. ರಾಯನಕೆರೆ, ಕೆಸರೆ,ವಿದ್ಯಾರಣ್ಯ ಪುರಂನಲ್ಲಿ ಘನತ್ಯಾಜ್ಯ ನಿರ್ವಹಣಾ ಘಟಕವನ್ನು ನಿರ್ಮಾಣ ಮಾಡಲು ಅನುದಾನ ಮಂಜೂರಾಗಿದ್ದು, ಫೈನಾನ್ಷಿಯಲ್ ಬಿಡ್‌ಗೆ ಅನುಮೋದನೆ ನೀಡಬೇಕಿದೆ. ಅದೇ ರೀತಿ ೨೫ ಕೋಟಿ ರೂ.ವೆಚ್ಚದಲ್ಲಿ ಪೌರ ಕಾರ್ಮಿಕರ ಗೃಹಭಾಗ್ಯ ಯೋಜನೆಯಡಿ ಮನೆಗಳನ್ನು ನಿರ್ಮಿಸಲು ಟೆಕ್ನಿಕಲ್ ಬಿಡ್‌ಗೆ ಅನುಮತಿ ಸಿಕ್ಕಿದ್ದು, ಫೈನಾನ್ಷಿಯಲ್ ಬಿಡ್‌ಗೆ ಅನುಮೋದನೆ ದೊರೆಯಬೇಕಿದೆ ಎಂದರು.

ಈಗಾಗಲೇ ೫೦ಸಾವಿರ ಬಲ್ಭ್ಗಳನ್ನು ಅಳವಡಿಸಿದ್ದು, ಉಳಿದ ೧೦ ಸಾವಿರ ಬಲ್ಬ್ಗಳನ್ನು ಅಳವಡಿಸುತ್ತೇವೆ. ಅದೇ ರೀತಿ ನಗರಪಾಲಿಕೆ ವತಿಯಿಂದ ರಿಂಗ್ ರಸ್ತೆಯಲ್ಲಿ ದೀಪಗಳನ್ನು ಅಳವಡಿಸಲು ಟೆಂಡರ್ ಕರೆಯಲಾಗಿದೆ. ನಗರದಲ್ಲಿ ಎಲ್‌ಇಡಿ ಬೀದಿ ದೀಪಗಳ ಅಳವಡಿಕೆ ಕಾರ್ಯ ನಡೆಯುತ್ತಿದ್ದು, ಇನ್ನು ಎರಡರಿಂದ ಮೂರು ತಿಂಗಳ ಒಳಗೆ ಎಲ್ಲ ಕಡೆಗಳಲ್ಲಿ ಎಲ್‌ಇಡಿ ದೀಪ ಅಳವಡಿಸಲಾಗುವುದು ಎಂದು ಹೇಳಿದರು.

ಬಿ ಖಾತೆ ಸಮಸ್ಯೆ: ಪಾಲಿಕೆ ವ್ಯಾಪ್ತಿಯಲ್ಲಿ ೫೦ ಸಾವಿರ ಕಂದಾಯ ನಿವೇಶನಗಳಲ್ಲಿ ನಿರ್ಮಾಣಗೊಂಡಿರುವ ಮನೆಗಳಿಗೆ `ಬಿ ಖಾತಾ’ ನೀಡಲು ಅನುಮೋದನೆಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಬಿ ಖಾತಾ ನೀಡು ವುದರಿಂದ ಪಾಲಿಕೆಯ ಆದಾಯ ಹೆಚ್ಚಾಗಲಿದೆ ಎಂದು ಹೇಳಿದರು. ಈ ಕುರಿತು ಪ್ರತಿಕ್ರಿಯಿಸಿದ ಸಚಿವ ಬೈರತಿ ಬಸವರಾಜ್, ಬಿ ಖಾತಾ ನೀಡಲು ಸರ್ಕಾರ ಈಗಾಗಲೇ ನಿರ್ಣಯ ಕೈಗೊಂಡಿದ್ದು, ಈ ಕುರಿತು ಸದ್ಯದಲ್ಲಿಯೇ ಸರ್ಕಾರದ ಆದೇಶ ಪಾಲಿಕೆ ಕೈ ಸೇರಲಿದೆ. ನೀರಿನ ಶುಲ್ಕದ ಬಾಕಿ ವಸೂಲಾತಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.

ಮುಡಾ ಆಯುಕ್ತ ಜಿ.ಟಿ.ದಿನೇಶ್ ಕುಮಾರ್ ಮಾತನಾಡಿ, ಮುಡಾ ಬಡಾವಣೆಗಳಲ್ಲಿ ೧೦೨ ವಿವಿಧ ಕಾಮಗಾರಿಗಳು ನಡೆಯುತ್ತಿವೆ. ಗುಂಪು ವಸತಿ ಯೋಜನೆಯಡಿ ವಿಜಯನಗರ ೪ನೇ ಹಂತ, ದಟ್ಟಗಳ್ಳಿಯಲ್ಲಿ ೩೪೧ ಕೋಟಿ ರೂ.ವೆಚ್ಚದಲ್ಲಿ ೯೫೨ ಮನೆಗಳ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾ ಗಿದೆ. ಕೇಂದ್ರದ ಸಚಿವ ನಿತಿನ್ ಗಡ್ಕರಿ ಅವರು ಬಂದಿದ್ದಾಗ ಸಂಸದ ಪ್ರತಾಪ ಸಿಂಹ ನೇತೃತ್ವದಲ್ಲಿ ಫೆರಿಫೆರಲ್ ರಸ್ತೆ ನಿರ್ಮಾಣಕ್ಕೆ ಮನವಿ ಸಲ್ಲಿಸಲಾಯಿತು. ಅದಕ್ಕೆ ರಾಜ್ಯ ಸರ್ಕಾರದ ಮೂಲಕ ಡಿಪಿಆರ್ ತಯಾರಿಸಿ ರಾಜ್ಯ ಸರ್ಕಾರಕ್ಕೆ ಸಲ್ಲಿಸುವಂತೆ ಸಲಹೆ ನೀಡಿದ್ದಾರೆ. ಅದಕ್ಕಾಗಿ ಮುಡಾ ಸಭೆಯಲ್ಲಿ ಅನುಮೋಧನೆ ಪಡೆದು, ಸರ್ಕಾರಕ್ಕೆ ಕಳುಹಿಸಲಾಗಿದೆ ಎಂದರು. ಸಭೆಯಲ್ಲಿ ಹೆಚ್ಚುವರಿ ಆಯುಕ್ತರಾದ ಎಂ.ಜೆ.ರೂಪ, ಎಂ.ಕೆ.ಸವಿತಾ, ಅಧೀಕ್ಷಕ ಅಭಿಯಂತರ ಮಹೇಶ್, ಮುಡಾ ಕಾರ್ಯದರ್ಶಿ ವೆಂಕಟರಾಜು, ಪಾಲಿಕೆ ಕೌನ್ಸಿಲ್ ಕಾರ್ಯದರ್ಶಿ ರಂಗಸ್ವಾಮಿ, ಆರೋಗ್ಯಾಧಿಕಾರಿ ಡಾ.ಡಿ.ಜಿ. ನಾಗರಾಜ್, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಎಇಇ ಆಸೀಫ್, ವಾಣ ವಿಲಾಸ ನೀರು ಸರಬರಾಜು ಕೇಂದ್ರದ ಕಾರ್ಯಪಾಲಕ ಅಭಿಯಂತರರಾದ ಸುವರ್ಣ ಇನ್ನಿತರರು ಹಾಜರಿದ್ದರು.

Translate »