ಕೆರೆಕಟ್ಟೆ ತುಂಬಿಸಿ, ಅಂತರ್ಜಲ ವೃದ್ಧಿಸಿ ರೈತರ ಬಾವಿ ಬತ್ತದಿರಲಿ
ಮೈಸೂರು

ಕೆರೆಕಟ್ಟೆ ತುಂಬಿಸಿ, ಅಂತರ್ಜಲ ವೃದ್ಧಿಸಿ ರೈತರ ಬಾವಿ ಬತ್ತದಿರಲಿ

July 10, 2022

ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಅಧಿಕಾರಿಗಳಿಗೆ ಸಲಹೆ; ರಾಜ್ಯಾದ್ಯಂತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಹೆಚ್ಚು ಒತ್ತು

ಇಲವಾಲ ಸಮೀಪ ಆನಂದೂರು ಗ್ರಾಮದ ಬಳಿ ಏತ ನೀರಾವರಿ ಯೋಜನೆ ಕಾಮಗಾರಿ ಪರಿಶೀಲನೆ

ಚಾಮುಂಡೇಶ್ವರಿ ಕ್ಷೇತ್ರದ ಶಾಸಕರೂ ಆದ ಮಾಜಿ ಸಚಿವ ಜಿ.ಟಿ.ದೇವೇಗೌಡ ಉಪಸ್ಥಿತಿ

ಮೈಸೂರು ತಾಲೂಕು ಇಲವಾಲ ಸಮೀಪ ಆನಂದೂರು ಗ್ರಾಮದ ಬಳಿ ಕೆಆರ್‌ಎಸ್ ಹಿನ್ನೀರಿನಲ್ಲಿ ನಿರ್ಮಿಸುತ್ತಿರುವ ಈರಪ್ಪನಕೊಪ್ಪಲು ಏತ ನೀರಾವರಿ ಯೋಜನೆ ಮತ್ತು ಮೈದನಹಳ್ಳಿ ಏತ ನೀರಾವರಿ ಯೋಜನೆ ಕಾಮಗಾರಿಗಳನ್ನು ಶಾಸಕ ಜಿ.ಟಿ.ದೇವೇಗೌಡರ ಉಪಸ್ಥಿತಿಯಲ್ಲಿ ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಶನಿವಾರ ಪರಿಶೀಲಿಸಿದರು.

ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡರಿಂದ ಮನವಿ ಸಲ್ಲಿಕೆ
ಮೈಸೂರು,ಜು.೯(ಪಿಎಂ)- ಕೆರೆ ಕಟ್ಟೆಗಳನ್ನು ತುಂಬಿಸಿ, ಅಂತರ್ಜಲ ವೃದ್ಧಿಸುವ ಮೂಲಕ ರೈತರ ಕೊಳವೆ ಬಾವಿಗಳು ಬತ್ತದಂತೆ ಕಾಪಾಡುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದ ಸಣ್ಣ ನೀರಾವರಿ ಸಚಿವರೂ ಆದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ಈ ಉದ್ದೇಶದಿಂದ ರಾಜ್ಯಾದ್ಯಂತ ನೀರಾವರಿ ಯೋಜನೆ ಗಳ ಅನುಷ್ಠಾನಕ್ಕೆ ಹೆಚ್ಚು ಒತ್ತು ನೀಡಲಾಗಿದೆ ಎಂದು ಇದೇ ವೇಳೆ ಮಾಧ್ಯಮವರಿಗೆ ಪ್ರತಿಕ್ರಿಯೆ ನೀಡಿದರು. ಮೈಸೂರು ತಾಲೂಕು ಇಲವಾಲ ಸಮೀಪ ಆನಂದೂರು ಗ್ರಾಮದ ಬಳಿಯ ಕೆಆರ್‌ಎಸ್ ಹಿನ್ನೀರಿನಲ್ಲಿ ಕೈಗೆತ್ತಿಕೊಂಡಿರುವ ಈರಪ್ಪನಕೊಪ್ಪಲು ಏತ ನೀರಾವರಿ ಯೋಜನೆ ಮತ್ತು ಮೈದನಹಳ್ಳಿ ಏತ ನೀರಾವರಿ ಯೋಜನೆ ಕಾಮಗಾರಿಗಳನ್ನು ಶಾಸಕ ಜಿ.ಟಿ.ದೇವೇಗೌಡರ ಉಪಸ್ಥಿತಿಯಲ್ಲಿ ಪರಿಶೀಲಿಸಿ ಬಳಿಕ ಮಾಧ್ಯಮ ದವರೊಂದಿಗೆ ಅವರು ಮಾತನಾಡಿದರು.

ರೈತರ ಬೆಳೆಗಳಿಗೆ ನೀರುಣ ಸಲು ಸದ್ಯ ಸಾವಿರ ಅಡಿ ಬೋರ್‌ವೆಲ್ ಕೊರೆಯುವ ಪರಿಸ್ಥಿತಿ ಇದೆ. ಇದನ್ನು ನಿವಾರಿಸಬೇಕಿದ್ದು, ಆ ಮೂಲಕ ಅಂತರ್ಜಲ ವೃದ್ಧಿಯಾಗಿ ೩೦೦-೪೦೦
ಅಡಿಗಳಿಗೆ ನೀರು ದೊರೆಯುವಂತಾಗಬೇಕು. ಈ ನಿಟ್ಟಿನಲ್ಲಿ ಅಂತರ್ಜಲ ಪುನಶ್ವೇತನ ಕ್ಕಾಗಿ ನೀರಾವರಿ ಯೋಜನೆಗಳಿಗೆ ರಾಜ್ಯದಲ್ಲಿ ಹೆಚ್ಚು ಒತ್ತು ನೀಡಲಾಗಿದೆ ಎಂದರು.

ಚಾಮರಾಜನಗರ ಜಿಲ್ಲೆಯ ಮೂರು ತಾಲೂಕುಗಳಲ್ಲಿ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗಿದೆ. ಕೊಳ್ಳೇಗಾಲ, ಹನೂರು, ಗುಂಡ್ಲುಪೇಟೆ ತಾಲೂಕುಗಳ ಕೆರೆಗಳಿಗೆ ಕಬಿನಿ ಜಲಾಶಯದಿಂದ ನೀರು ತುಂಬಿಸಲು ೨೦೦ ಕೋಟಿ ರೂ. ವೆಚ್ಚದ ಯೋಜನೆ ಸಂಬAಧ ಡಿಪಿಆರ್ (ವಿಸ್ತೃತ ಯೋಜನಾ ವರದಿ) ಸಿದ್ಧಗೊಂಡಿದೆ ಎಂದರು. ತುಮಕೂರು ಜಿಲ್ಲೆಯಲ್ಲಿ ಮೂರು ಮತ್ತು ಬೆಳಗಾವಿಯಲ್ಲಿ ಆರೇಳು ನೀರಾವರಿ ಯೋಜನೆ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗಿದೆ. ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡದಲ್ಲಿ ಹರಿಯುವ ನೀರಿಗೆ ಸಂಬAಧಿಸಿದAತೆ ಬ್ರಿಡ್ಜ್ ಕಮ್ ಬ್ಯಾರಿಯರ್ ಮಾದರಿಯಲ್ಲಿ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.

ಇದಲ್ಲದೇ ಬೆಂಗಳೂರಿನ ಸೀವೇಜ್ ವಾಟರ್ ಟ್ರಿಟ್‌ಮೆಂಟ್ ಪ್ಲಾಂಟ್‌ನಿAದ ಶುದ್ಧೀಕರಿ ಸಿದ ನೀರನ್ನು ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಕೆರೆಗೆ ತುಂಬಿಸುವ ಯೋಜನೆ ಕೈಗೆತ್ತಿಕೊಂಡಿದ್ದು, ಇದರ ೨ನೇ ಹಂತದ ಯೋಜನೆಯ ಕಾಮಗಾರಿ ಮುಂದುವರೆದಿದೆ. ಅಲ್ಲದೆ, ನೆಲಮಂಗಲ, ತುಮಕೂರು ಭಾಗದ ಕೆರೆಗಳಿಗೆ ಪುಷ್ಪಾವತಿ ವ್ಯಾಲಿಯಿಂದ ನೀರು ತುಂಬಿಸಲು ೮೦೦ ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು.

ಚೆಕ್‌ಡ್ಯಾAಗೆ ಹಣದ ಕೊರತೆಯಿಲ್ಲ: ನರೇಗಾ ಯೋಜನೆಯಡಿ ಚೆಕ್‌ಡ್ಯಾಂ ನಿರ್ಮಾಣ ಕ್ಕಾಗಿ ಪ್ರತಿ ಗ್ರಾಪಂನಲ್ಲಿ ೪೦ರಿಂದ ೪೫ ಲಕ್ಷ ರೂ. ಅನುದಾನವಿದೆ. ಅದನ್ನು ಬಳಕೆ ಮಾಡಿದರೆ ಸರ್ಕಾರ ಮತ್ತಷ್ಟು ಅನುದಾನ ಬಿಡುಗಡೆ ಮಾಡಲಿದೆ. ಹಳ್ಳಕೊಳ್ಳಗಳಿಗೆ ಚೆಕ್‌ಡ್ಯಾಂ ನಿರ್ಮಾಣ ಮಾಡುವ ಹೊಣೆಯನ್ನು ಸಣ್ಣ ನೀರಾವರಿ ಇಲಾಖೆ ಹೊಂದಿದ್ದು, ಹೊಲ-ಗದ್ದೆ ವ್ಯಾಪ್ತಿಯಲ್ಲಿ ಕೃಷಿ ಇಲಾಖೆ ಚೆಕ್‌ಡ್ಯಾಂ ನಿರ್ಮಾಣ ಮಾಡಲಿದೆ ಎಂದು ಜೆ.ಸಿ.ಮಾಧುಸ್ವಾಮಿ ತಿಳಿಸಿದರು. ರೈತರು ೧,೮೦೦ರಿಂದ ೨ ಸಾವಿರ ರೂ. ಪಾವತಿಸಿದರೆ, ೩೦ ಸಾವಿರ ರೂ. ಬೆಲೆಬಾಳುವ ತುಂತುರು ನೀರಾವರಿ ಪದ್ಧತಿಗೆ ಬಳಕೆ ಮಾಡುವ ಸ್ಪಿçಂಕ್ಲರ್‌ಗಳನ್ನು ನೀಡಲಾಗುತ್ತದೆ. ಅಲ್ಲದೆ ಹನಿ ನೀರಾವರಿ ಸಾಧನಗಳಿಗೂ ಸಬ್ಸಿಡಿ ನೀಡಲಾಗುತ್ತದೆ ಎಂದರು. ಮೇಕೆದಾಟು ಹೊರತಾಗಿ ಬೇರೆ ಡ್ಯಾಂ ನಿರ್ಮಿಸುವ ಚಿಂತನೆ ಸರ್ಕಾರದಲ್ಲಿ ಇಲ್ಲ. ಬಗರ್‌ಹುಕುಂ ಸಾಗುವಳಿದಾರರಿಗೆ ಜಮೀನು ನೀಡುವ ಸಂಬAಧ ಈಗಾಗಲೇ ಮೂರು ಬಾರಿ ಅರ್ಜಿ ಸ್ವೀಕರಿಸಿ ಪ್ರಕ್ರಿಯೆ ನಡೆಸಲಾಗಿದೆ. ೨೦೦೨ರ ಹಿಂದೆ ಜಮೀನಿಗೆ ಅರ್ಜಿ ಹಾಕಿಕೊಂಡಿದ್ದವರು ಮತ್ತೆ ಅರ್ಜಿ ಸಲ್ಲಿಕೆಗೆ ಇನ್ನು ಒಂದು ವರ್ಷ ಸಮಯಾವಕಾಶ ನೀಡಲಾಗಿದೆ ಎಂದು ಪ್ರಶ್ನೆಗಳಿಗೆ ಉತ್ತರಿ ಸಿದರು. ಮಾಜಿ ಶಾಸಕ ವಾಸು, ಹಿರಿಯ ವಕೀಲ ಚಂದ್ರಮೌಳಿ, ಸಣ್ಣ ನೀರಾವರಿ ಇಲಾಖೆ ಕಾರ್ಯದರ್ಶಿ ಮೃತ್ಯುಂಜಯಸ್ವಾಮಿ, ಎರಡೂ ಏತ ನೀರಾವರಿ ಯೋಜನೆಗಳ ಗುತ್ತಿಗೆದಾರ ಕೆ.ಬಿ.ಕುಮಾರ್ ಮತ್ತಿತರರು ಹಾಜರಿದ್ದರು.

Translate »