ರಂಗನತಿಟ್ಟು ಪಕ್ಷಿಧಾಮದ ದೋಣ ವಿಹಾರ ತಾತ್ಕಾಲಿಕ ಬಂದ್
ಮೈಸೂರು

ರಂಗನತಿಟ್ಟು ಪಕ್ಷಿಧಾಮದ ದೋಣ ವಿಹಾರ ತಾತ್ಕಾಲಿಕ ಬಂದ್

July 10, 2022

ಕೆಆರ್‌ಎಸ್ ಅಣೆಕಟ್ಟೆಯಿಂದ ಹೆಚ್ಚಿನ ಪ್ರಮಾಣದ ನೀರು ಕಾವೇರಿ ನದಿಗೆ ಬಿಟ್ಟಿರುವುದರಿಂದ ರಂಗನತಿಟ್ಟು ಪಕ್ಷಿಧಾಮದಲ್ಲಿ ದೋಣ ಯಾನ ಸ್ಥಗಿತಗೊಳಿಸಲಾಗಿದೆ.ಶ್ರೀರಂಗಪಟ್ಟಣ,ಜು.೯(ಎAಟಿವೈ)- ಕಾವೇರಿ ಕಣ ವೆಯಲ್ಲಿ ವ್ಯಾಪಕ ಮಳೆ ಬೀಳುತ್ತಿರುವ ಹಿನ್ನೆಲೆ ಯಲ್ಲಿ ಕೆಆರ್‌ಎಸ್ ಅಣೆಕಟ್ಟೆಯಿಂದ ನದಿಗೆ ಹೆಚ್ಚಿನ ಪ್ರಮಾಣದ ನೀರು ಬಿಡುತ್ತಿರುವ ಹಿನ್ನೆಲೆಯಲ್ಲಿ ಶ್ರೀರಂಗ ಪಟ್ಟಣ ತಾಲೂಕಿನ `ರಂಗನತಿಟ್ಟು’ ಪಕ್ಷಿಧಾಮದಲ್ಲಿ ದೋಣ ವಿಹಾರವನ್ನು ಶನಿವಾರದಿಂದ ತಾತ್ಕಾಲಿಕ ವಾಗಿ ಸ್ಥಗಿತಗೊಳಿಸಲಾಗಿದೆ. ಕೊಡಗು ಜಿಲ್ಲೆಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕೆಆರ್‌ಎಸ್ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಾಗಿದ್ದು, ಅಣೆಕಟ್ಟೆ ಭರ್ತಿಗೆ ಕೇವಲ ೨ ಅಡಿ ಮಾತ್ರ ಬಾಕಿ ಇದೆ. ಈ ಹಿನ್ನೆಲೆಯಲ್ಲಿ ಅಣೆಕಟ್ಟೆಯ ಭದ್ರತೆಯ ದೃಷ್ಟಿ ಯಿಂದ ಒಳಹರಿವಿನ ಪ್ರಮಾಣಕ್ಕೆ ಅನುಗುಣವಾಗಿ ನದಿಗೆ ನೀರು ಹರಿಸಲಾಗುತ್ತಿದೆ. ಹಿರಿಯ ಅಧಿಕಾರಿ ಗಳ ಸೂಚನೆ ಮೇರೆಗೆ ಇಂದು ಬೆಳಗ್ಗಿನಿಂದ ೧೩ ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದ್ದು, ನದಿ ಪಾತ್ರದ ಹಾಗೂ ತಗ್ಗು ಪ್ರದೇಶದ ಜನರು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ. ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ ಹಾಗೂ ಯಾವುದೇ ಸಂದರ್ಭದಲ್ಲೂ ಅಣೆಕಟ್ಟೆಯಿಂದ ಇನ್ನು ಅಧಿಕ ನೀರು ನದಿಗೆ ಬಿಡುವ ಸಾಧ್ಯತೆ ಇರುವುದರಿಂದ ಪ್ರವಾಸಿಗರ ಹಿತದೃಷ್ಟಿಯಿಂದ ರಂಗನತಿಟ್ಟು ಪಕ್ಷಿಧಾಮದಲ್ಲಿ ದೋಣ ವಿಹಾರ ಸ್ಥಗಿತಗೊಳಿಸುವಂತೆ ಸೂಚನೆ ನೀಡಲಾಗಿದೆ. ಮೈಸೂರು ವನ್ಯಜೀವಿ ವಿಭಾಗದ ಡಿಸಿಎಫ್ ಡಾ.ವಿ.ಕರಿಕಾಳನ್ ಸೂಚನೆ ಮೇರೆಗೆ ಬೆಳಗಿನಿಂದಲೇ ದೋಣ ವಿಹಾರ ಸ್ಥಗಿತಗೊಳಿಸಲಾಗಿದೆ. ಎಲ್ಲಾ ದೋಣ ಗಳನ್ನು ಸುರಕ್ಷಿತ ಸ್ಥಳದಲ್ಲಿ ಕಟ್ಟಿ ಹಾಕಲಾಗಿದ್ದು, ಮಳೆ ಹಾಗೂ ನದಿಯಲ್ಲಿ ನೀರಿನ ಪ್ರಮಾಣ ಕುಗ್ಗುವವರೆಗೂ ದೋಣ ಯಾನ ಆರಂಭಿಸದAತೆ ಸೂಚನೆ ನೀಡಲಾಗಿದೆ. ಆದರೆ ರಂಗನತಿಟ್ಟು ಉದ್ಯಾನವನಕ್ಕೆ ಭೇಟಿ ನೀಡಬಹುದಾಗಿದೆ. ಬ್ಯಾಟರಿ ಚಾಲಿತ ವಾಹನದಲ್ಲಿ ಪಕ್ಷಿಧಾಮವನ್ನು ಪ್ರದಕ್ಷಿಣೆ ಹಾಕಬಹುದಾಗಿದೆ. ಅಣೆಕಟ್ಟೆಯಿಂದ ೬೦ ಸಾವಿರ ಕ್ಯೂಸೆಕ್‌ಗಿಂತ ಹೆಚ್ಚಿನ ಪ್ರಮಾಣದ ನೀರು ನದಿಗೆ ಬಿಟ್ಟರೆ ಮಾತ್ರ, ಪಕ್ಷಿಧಾಮಕ್ಕೂ ಪ್ರವಾಸಿಗರ ಪ್ರವೇಶ ನಿರ್ಬಂಧಿಸಲಾಗುತ್ತದೆ.

ಹೈ ಅಲಾರ್ಟ್ಗೆ ಸೂಚನೆ: ರಂಗನತಿಟ್ಟು ಪಕ್ಷಿಧಾಮದ ಬಳಿ ನದಿಯಲ್ಲಿ ನೀರಿನ ಸ್ಥಿತಿಗತಿ ಪರಿಶೀಲಿಸುವಂತೆ ಆರ್‌ಎಫ್‌ಓ ಸಂತೋಷ್ ಹೂಗಾರ್, ಡಿಆರ್‌ಎಫ್‌ಓ ಎಂ.ಪುಟ್ಟಮಾದೇಗೌಡ ಸೇರಿದಂತೆ ಪಕ್ಷಿಧಾಮದ ಸಿಬ್ಬಂದಿ ಸೂಚನೆ ನೀಡಲಾಗಿದೆ. ಯಾವುದೇ ಕಾರಣಕ್ಕೂ ಪ್ರವಾಸಿಗರು ನದಿ ದಡದ ಬಳಿ ಹೋಗದಂತೆ ಕಟ್ಟೆಚ್ಚರ ವಹಿಸುವುದರೊಂದಿಗೆ ದಿನದ ೨೪ ಗಂಟೆಯೂ ನದಿಯಲ್ಲಿ ಹರಿಯುವ ನೀರಿನ ಪ್ರಮಾಣದ ಮೇಲೆ ಕಣ ್ಣಟ್ಟಿರುವಂತೆ ಸೂಚನೆ ನೀಡಲಾಗಿದೆ.

Translate »