ರಮೇಶ್ ಜಾರಕಿಹೊಳಿ ವಿರುದ್ಧ ಮತ್ತೊಂದು ದೂರು
News

ರಮೇಶ್ ಜಾರಕಿಹೊಳಿ ವಿರುದ್ಧ ಮತ್ತೊಂದು ದೂರು

March 17, 2021

ಬೆಂಗಳೂರು,ಮಾ.16-ಸಿಡಿ ಪ್ರಕರಣದಲ್ಲಿ ಈಗಾಗಲೇ ಸಂಕಷ್ಟಕ್ಕೆ ಸಿಲುಕಿ ಸಚಿವ ಸ್ಥಾನ ಕಳೆದುಕೊಂಡಿರುವ ರಮೇಶ್ ಜಾರಕಿಹೊಳಿ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ. ಸಿಡಿಯಲ್ಲಿ ಸಂತ್ರಸ್ತ ಯುವತಿಯೊಂದಿಗೆ ಸಂಭಾಷಣೆ ನಡೆಸಿರುವ ರಮೇಶ್ ಜಾರಕಿಹೊಳಿ ಕನ್ನಡಿಗರ ಬಗ್ಗೆ ಅವಹೇಳನ ಕಾರಿಯಾಗಿ ಮಾತನಾಡಿದ್ದಾರೆ. ಈ ಮೂಲಕ ಕನ್ನಡಿಗರಿಗೆ ಅಪಮಾನ ಮಾಡಿದ್ದಾರೆ ಎಂದು ಕನ್ನಡಿಗರ ರಕ್ಷಣಾ ವೇದಿಕೆ ಕಬ್ಬನ್ ಪಾರ್ಕ್ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.

ಕರ್ನಾಟಕದಲ್ಲಿ ಹುಟ್ಟಿ, ಬೆಳೆದು ಕನ್ನಡಿಗರ ಬಗ್ಗೆ ರೀತಿ ಹೇಳುವುದು ಅವರಿಗೆ ಶೋಭೆಯಲ್ಲ. ಕೂಡಲೇ ಅವರನ್ನ ರಾಜ್ಯ ಸರ್ಕಾರ ಶಾಸಕ ಸ್ಥಾನದಿಂದ ವಜಾ ಮಾಡಬೇಕು. ಅವರ ವಿರುದ್ಧ ಕಠಿಣವಾದ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ವಿಭಾಗ ಡಿಸಿಪಿ ಅನುಚೇತ್ ಅವರಿಗೆ ದೂರು ನೀಡಿದ್ದಾರೆ. ಇಷ್ಟೇ ಅಲ್ಲದೇ ಕನ್ನಡಿಗರ ಬಗ್ಗೆ ಅಪಮಾನವಾಗುವಂತಹ ಹೇಳಿಕೆ ನೀಡಿದ ಅವರು, ಬೇಷರತ್ ಕ್ಷಮೆ ಯಾಚಿಸಬೇಕು. ಒಂದು ವೇಳೆ ಜಾರಕಿಹೊಳಿ ಕನ್ನಡಿಗರಿಗೆ ಕ್ಷಮೆ ಯಾಚಿಸದಿದ್ದರೆ, ಅವರ ಮನೆಯ ಬಳಿ ಮಹಿಳಾ ಕಾರ್ಯಕರ್ತೆಯರು ಧರಣಿ ಕೂರುವುದು ನಿಶ್ಚಿತ ಎಂದು ಎಚ್ಚರಿಕೆ ನೀಡಿದರು.
ಸಿಡಿಯಲ್ಲಿ ಸಂತ್ರಸ್ತ ಯುವತಿ ಜೊತೆ ಸಂಭಾಷಣೆ ವೇಳೆ ಬೆಳಗಾವಿ ಪ್ರತ್ಯೇಕ ರಾಜ್ಯ ಎಂದಿದ್ದರು. ಅಲ್ಲದೇ ಕನ್ನಡಿಗರನ್ನು ಕಡೆಗಣಿಸುವಂತೆ ಮಾತನಾಡಿದ್ದರು. ರಮೇಶ್ ಜಾರಕಿಹೊಳಿ ಅವರ ಈ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, ಕಾಂಗ್ರೆಸ್ ಕೂಡ ಕಿಡಿಕಾರಿದೆ. ಕನ್ನಡಿಗರನ್ನು ಅಪಮಾನಿಸಿದ ರಮೇಶ್ ಜಾರಕಿಹೊಳಿ ಯವರನ್ನು ಪಕ್ಷದಿಂದ ಉಚ್ಛಾಟಿಸಬೇಕು ಎಂದು ಟ್ವೀಟ್ ಮೂಲಕ ಆಗ್ರಹಿಸಿದ್ದರು. ಈ ಹಿಂದೆ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಎಐಸಿಸಿ ವಕ್ತಾರ ಬ್ರಿಜೇಶ್ ಕಾಳಪ್ಪ, ಕನ್ನಡಿಗರ ಬಗ್ಗೆ ಕೀಳು ಹೇಳಿಕೆ ನೀಡಿದ ರಮೇಶ್ ಜಾರಕಿಹೊಳಿ ಅವರನ್ನು ಗಡಿಪಾರು ಮಾಡಬೇಕು. ಈ ಹಿಂದೆ ಗುಜರಾತ್‍ನಲ್ಲಿ ಇಂತಹ ಪ್ರಕರಣ ನಡೆದಾಗ ಪ್ರಧಾನಿ ಮೋದಿ ಅವರು ಕಠಿಣ ಕ್ರಮ ಕೈಗೊಂಡಿದ್ದರು. ಅದೇ ರೀತಿ ರಮೇಶ್ ಜಾರಕಿಹೊಳಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು.

Translate »