ಕೃಷ್ಣರಾಜ ಕ್ಷೇತ್ರದಲ್ಲಿ ಮತ್ತೊಂದು ಕೊರೊನಾ ಸ್ವ್ಯಾಬ್ ಪರೀಕ್ಷಾ ಕೇಂದ್ರ
ಮೈಸೂರು

ಕೃಷ್ಣರಾಜ ಕ್ಷೇತ್ರದಲ್ಲಿ ಮತ್ತೊಂದು ಕೊರೊನಾ ಸ್ವ್ಯಾಬ್ ಪರೀಕ್ಷಾ ಕೇಂದ್ರ

August 21, 2020

ಮೈಸೂರು, ಆ.20(ಆರ್‍ಕೆಬಿ)- ದಿನೇ ದಿನೆ ಹೆಚ್ಚುತ್ತಿರುವ ಕೊರೊನಾ ಸೋಂಕು ನಿಯಂತ್ರಿಸಲು ಕೃಷ್ಣರಾಜ ಕ್ಷೇತ್ರದ ಕುವೆಂಪು ನಗರ ಸೋಮಾನಿ ಕಾಲೇಜಿನ ಹಿಂಭಾಗ ದಲ್ಲಿರುವ ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಸ್ವ್ಯಾಬ್ ಪರೀಕ್ಷಾ ಕೇಂದ್ರ ತೆರೆದಿದ್ದು, ಶಾಸಕ ಎಸ್.ಎ.ರಾಮದಾಸ್ ಗುರುವಾರ ಚಾಲನೆ ನೀಡಿದರು.

ಕುವೆಂಪುನಗರ, ಸರಸ್ವತಿಪುರಂ, ವಿವೇಕಾ ನಂದನಗರ, ಅರವಿಂದನಗರ, ಶ್ರೀರಾಮ ಪುರ, ಟಿ.ಕೆ.ಲೇಔಟ್, ಶಾರದಾದೇವಿನಗರ ಸುತ್ತ್ತಲಿನ ಪ್ರದೇಶಗಳ ಜನರಿಗೆ ಅನುಕೂಲ ವಾಗಲೆಂದು ಈ ಕೇಂದ್ರ ತೆರೆಯಲಾಗಿದೆ. ಸೋಂಕಿತರು, ಪ್ರಾಥಮಿಕ ಸಂಪರ್ಕ ಹೊಂದಿದವರ ಪರೀಕ್ಷೆಗಾಗಿ ಒಟ್ಟು 4 ಸ್ವ್ಯಾಬ್ ಕೇಂದ್ರಗಳನ್ನು ಕ್ಷೇತ್ರದಲ್ಲಿ ತೆರೆಯಲಾಗಿದೆ ಎಂದು ಶಾಸಕರು ಹೇಳಿದರು.

ಕ್ಷೇತ್ರದಲ್ಲಿ ಅತಿ ಹೆಚ್ಚು ಕೊರೊನಾ ಪ್ರಕರಣ ಕಂಡು ಬರುತ್ತಿದ್ದರೂ ಸಾವಿನ ಸಂಖ್ಯೆ ಕಡಿಮೆ ಇದೆ. ಮುಂಚಿತವಾಗಿಯೇ ಪರೀಕ್ಷೆ ನಡೆಸಿ ಆಗಬಹುದಾದ ಅನಾಹುತ ತಪ್ಪಿಸುತ್ತಿರು ವುದೇ ಇದಕ್ಕೆ ಕಾರಣ ಎಂದು ತಿಳಿಸಿದರು.

ಜೆ.ಪಿ.ನಗರ, ನಾಚನಹಳ್ಳಿ ಪಾಳ್ಯದಲ್ಲಿ ರ್ಯಾಂಡಮ್ ಟೆಸ್ಟಿಂಗ್ ಮಾಡಿಸಲು ನಿರ್ಧ ರಿಸಿದ್ದು, ಮುಂದಿನ ವಾರ ದಿನ ನಿಗದಿ ಪಡಿಸಲಾಗಿದೆ. ಸಾರ್ವಜನಿಕರು ಕೇಂದ್ರದ ಉಪಯೋಗ ಪಡೆಯಬೇಕು. ಪಾಸಿಟಿವ್ ವರದಿ ಬಂದಲ್ಲಿ ಆತಂಕಪಡದೇ ದೇಹ ದಲ್ಲಿನ ರೊಗ ನಿರೋಧಕ ಶಕ್ತಿ ವೃದ್ಧಿಸಿ ಕೊಳ್ಳಲು ಅಗತ್ಯ ಔಷಧಿ ತೆಗೆದುಕೊಳ್ಳಿ ಎಂದು ಸಲಹೆ ನೀಡಿದರು. ಪಾಲಿಕೆ ಸದಸ್ಯ ರಾದ ಗೀತಾಶ್ರೀ, ಎಂ.ಸಿ.ರಮೇಶ್, ಮಾಜಿ ಸದಸ್ಯರಾದ ಜೆ.ಸಿ.ಜಗದೀಶ್, ಆಶ್ರಯ ಸಮಿತಿ ಸದಸ್ಯರಾದ ಹೇಮಂತ್, ಭಾಷ್ಯಂ, ಶಾಂತವೀರಪ್ಪ, ರಮೇಶ್, ಮಧು, ಶಿವಣ್ಣ, ಗೋಪಾಲ್ ಇತರರು ಉಪಸ್ಥಿತರಿದ್ದರು.

Translate »