ಮೈಸೂರು, ಆ.20(ಆರ್‍ಕೆಬಿ)- ದಿವಂಗತರಾಗಿರುವ ಮಾಜಿ ಮುಖ್ಯ ಮಂತ್ರಿ ಡಿ.ದೇವರಾಜ ಅರಸು ಮತ್ತು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಭಾರ ತದ ಪಥವನ್ನು ಬದಲಿಸಿದ ಮಹಾನ್ ನಾಯಕರು. ಇಬ್ಬರ ಜನ್ಮದಿನವೂ ಒಂದೇ ದಿನ ಬರುವುದು ವಿಶೇಷ. ದೇವರಾಜ ಅರಸರು ದನಿ ಇಲ್ಲದವರಿಗೆ ದನಿ ನೀಡಿ ದವರು. ಎಲ್ಲರ ವಿಶ್ವಾಸದ ನಡಿಗೆಯ ನಾಯಕರಾಗಿ ಜನಮಾನಸದಲ್ಲಿ ಉಳಿದು ಕೊಂಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಅಡಗೂರು ಹೆಚ್.ವಿಶ್ವನಾಥ್ ಇಂದಿಲ್ಲಿ ಅಭಿಪ್ರಾಯಪಟ್ಟರು.
ಮೈಸೂರಿನ ಕಲಾಮಂದಿರದ ಮನೆ ಯಂಗಳ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಹಿಂದುಳಿದ ವರ್ಗ ಗಳ ಇಲಾಖೆ ಜಂಟಿಯಾಗಿ ಗುರುವಾರ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ 105ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ದೇವರಾಜ ಅರಸು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.
ರಾಜೀವ್ ಗಾಂಧಿ ಎಲ್ಲಾ ಜಾತಿ, ವರ್ಗ ಗಳಿಗೂ ಯೋಜನೆಗಳನ್ನು ನೀಡಿದರು. ಅಂಬೇಡ್ಕರ್ ಅವರ ವಿಕೇಂದ್ರೀಕರಣ ಚಿಂತನೆಯನ್ನು ಜಾರಿಗೊಳಿಸಿದರು. ಇಡೀ ದೇಶವನ್ನು ಕ್ರಾಂತಿ ಮತ್ತು ಸಂವ ಹನ, ಆಟೋಮೊಬೈಲ್ ಇನ್ನಿತರ ಕಾರ್ಯ ಕ್ರಮಗಳ ಮೂಲಕ `ಮೇರಾ ಭಾರತ್ ಮಹಾನ್’ ಎಂದು ಸಾರಿದವರು. ಅರಸು ಮತ್ತು ರಾಜೀವ್ ಗಾಂಧಿ ಅವರು ಮಹಾತ್ಮ ಗಾಂಧಿ ಮತ್ತು ಡಾ.ಅಂಬೇಡ್ಕರ್ ಅವರ ಆಶಯಗಳನ್ನು ಈಡೇರಿಸಿದವರು. ಈ ಇಬ್ಬರನ್ನೂ ಸ್ಮರಣೆ ಮೂಲಕ ಗೌರವಿಸ ಬೇಕು ಎಂದು ಹೇಳಿದರು.
ಹುಣಸೂರು ಶಾಸಕ ಹೆಚ್.ಪಿ. ಮಂಜುನಾಥ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಮಂಗಳಾ, ಅಪರ ಜಿಲ್ಲಾಧಿ ಕಾರಿ ಮಂಜುನಾಥ್, ಜಿಲ್ಲಾ ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿ ಬಿಂದಿಯಾ, ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಂ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.