ಖಾಸಗಿ ಶಿಕ್ಷಣ ಸಂಸ್ಥೆಗಳ ತೆರಿಗೆ ಮನ್ನಾಗೆ ಮನವಿ
ಮೈಸೂರು

ಖಾಸಗಿ ಶಿಕ್ಷಣ ಸಂಸ್ಥೆಗಳ ತೆರಿಗೆ ಮನ್ನಾಗೆ ಮನವಿ

June 19, 2020

ಬೆಂಗಳೂರು, ಜೂ.18-ಖಾಸಗಿ ಶಾಲೆಗಳ ವಿದ್ಯುತ್ ಬಿಲ್ ಆಸ್ತಿ ತೆರಿಗೆ ಹಾಗೂ ಶಾಲಾ ವಾಹನಗಳ ರಸ್ತೆ ತೆರಿಗೆ ಮನ್ನಾ ಮಾಡಬೇಕೆಂದು ಮೈಸೂರು ಜಿಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಧಾಕರ್ ಎಸ್.ಶೆಟ್ಟಿ ಕಂದಾಯ ಸಚಿವ ಆರ್.ಅಶೋಕ್ ಅವರಿಗೆ ಮನವಿ ಮಾಡಿದರು. ಬೆಂಗಳೂರಿನಲ್ಲಿ ಸಚಿವರೊಂದಿಗಿನ ಸಭೆಯಲ್ಲಿ ಮಾತ ನಾಡಿದ ಅವರು, ಖಾಸಗಿ ಶಿಕ್ಷಣ ಸಂಸ್ಥೆಗಳು ಸಂಕಷ್ಟ ಪರಿ ಸ್ಥಿತಿಯಲ್ಲಿರುವುದನ್ನು ವಿವರಿಸಿದರು. ಮೈಸೂರು, ಚಾಮ ರಾಜನಗರ, ಕೊಡಗು, ಹಾಸನ ಹಾಗೂ ಮಂಡ್ಯ ಜಿಲ್ಲೆಗಳ ಶಿಕ್ಷಣ ಸಂಸ್ಥೆಗಳು ವಿದ್ಯುತ್ ಬಿಲ್, ಆಸ್ತಿ ತೆರಿಗೆ ಮತ್ತು ಶಾಲಾ ವಾಹನಗಳ ರಸ್ತೆ ತೆರಿಗೆ ಪಾವತಿಸಲು ಸಾಧ್ಯವಾಗದಂತಹ ದುಸ್ಥಿತಿ ನಿರ್ಮಾಣವಾಗಿದೆ ಎಂದು ವಿವರಿಸಿದರು.

ಆನ್‍ಲೈನ್ ಶಿಕ್ಷಣ ನಿಷೇಧಿಸಿರುವ ಸರ್ಕಾರವು ವಿದೇಶಿ ಆನ್‍ಲೈನ್ ಆ್ಯಪ್‍ಗಳಿಗೆ ಪ್ರೋತ್ಸಾಹ ನೀಡುತ್ತಿದೆ. ಉದಾ ಹರಣೆಗೆ ಬೈಜು, ಕಿಡೋಪಿಯಾ ಮುಂತಾದ ವಿದೇಶಿ ಆ್ಯಪ್‍ಗಳಿಗೆ ಪ್ರೋತ್ಸಾಹ ನೀಡುತ್ತಿರುವುದರಿಂದ ರಾಜ್ಯದ ಶಿಕ್ಷಣ ಸಂಸ್ಥೆಗಳು ಅವನತಿ ಹಾದಿ ಹಿಡಿಯುವ ಅಪಾಯ ವಿದೆ ಎಂದು ಸುಧಾಕರ್ ಶೆಟ್ಟಿ ಆತಂಕ ವ್ಯಕ್ತಪಡಿಸಿದರು.
ಈ ಎಲ್ಲಾ ವಿಷಯಗಳ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದರು

Translate »