ಜಾನಪದ ವಿವಿ ಜಾಗವನ್ನು ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರಕ್ಕೆ ನೀಡದಂತೆ ಮುಖ್ಯಮಂತ್ರಿಗೆ ಮನವಿ
ಮೈಸೂರು

ಜಾನಪದ ವಿವಿ ಜಾಗವನ್ನು ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರಕ್ಕೆ ನೀಡದಂತೆ ಮುಖ್ಯಮಂತ್ರಿಗೆ ಮನವಿ

June 12, 2020

ಮೈಸೂರು, ಜೂ.11-ಮಲೈಮಹ ದೇಶ್ವರ ಬೆಟ್ಟದಲ್ಲಿ ಜಾನಪದ ವಿವಿಗೆ ನೀಡ ಲಾಗಿರುವ ಜಾಗವನ್ನು ಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರಕ್ಕೆ ವಾಪಸ್ ನೀಡಬಾರ ದೆಂದು ಕರ್ನಾಟಕ ಜಾನಪದ ವಿವಿ ಸಿಂಡಿ ಕೇಟ್ ಸದಸ್ಯ ಡಾ. ಕೆ.ವಸಂತಕುಮಾರ್ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿದ್ದಾರೆ.

ತಾವು (ಯಡಿಯೂರಪ್ಪ) 2011ರಲ್ಲಿ ಮುಖ್ಯಮಂತ್ರಿಗಳಾಗಿದ್ದ ವೇಳೆ ಕರ್ನಾಟಕ ಜಾನಪದ ವಿವಿಯನ್ನು ಹಾವೇರಿಯಲ್ಲಿ ಪ್ರಾರಂಭ ಮಾಡಿ, ಈ ವಿವಿಯ ಪ್ರಾದೇಶಿಕ ಕಚೇರಿಗಳು ರಾಜ್ಯಾದ್ಯಂತ ಇರಬೇಕೆಂಬ ಉದ್ದೇಶದಿಂದ ಮಲೈಮಹದೇಶ್ವರ ಬೆಟ್ಟ ದಲ್ಲಿ ಜಾನಪದ ವಿವಿ ಪ್ರಾದೇಶಿಕ ಕಚೇರಿ ತೆರೆಯಲು ಸುಮಾರು 2 ಎಕರೆ ಜಾಗ ವನ್ನು ನೀಡಲಾಗಿತ್ತು. ಈಗಾಗಲೇ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರತಿ ವರ್ಷ ಜಾನ ಪದ ವಿಷಯಗಳಾದ ಡೊಳ್ಳು, ಕಂಸಾಳೆ, ಜಾನಪದ ಸಂಗೀತ ಕಲಿಯುತ್ತಿದ್ದಾರೆ. ಸುಸ ಜ್ಜಿತ ಕಚೇರಿ ಹಾಗೂ ತರಗತಿ ಕೊಠಡಿಗಳಿ ಗಾಗಿ ಜಾನಪದ ಮಾದರಿಯ ಕಟ್ಟಡವು ಜಾನಪದ ವಿವಿಯಿಂದ ರೂಪುಗೊಳ್ಳು ತ್ತಿದ್ದು, ಹಣಕಾಸಿನ ತೊಂದರೆಯಿಂದ ಕಾಮ ಗಾರಿ ಸ್ಥಗಿತಗೊಂಡಿದೆ ಎಂದು ವಿವರಿಸಿದ್ದಾರೆ.

ಇಂತಹ ಸಂದರ್ಭದಲ್ಲಿ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರವು ಜಾನಪದ ವಿವಿಯ 2 ಎಕರೆ ಜಾಗವನ್ನು ಪ್ರಾಧಿಕಾರಕ್ಕೆ ನೀಡಬೇ ಕೆಂದು ತಮಗೆ (ಮುಖ್ಯಮಂತ್ರಿಗಳು) ಪತ್ರ ಬರೆದಿದ್ದು, ಪ್ರಾಧಿಕಾರವು ವಿವಿಯ ಪ್ರಾದೇ ಶಿಕ ಕಚೇರಿಯನ್ನು ಮುಚ್ಚಲು ಹೊರಟಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಯಾವುದೇ ಕಾರಣಕ್ಕೂ ವಿವಿಯ ಜಾಗವನ್ನು ಮಹದೇಶ್ವರ ಅಭಿವೃದ್ಧಿ ಪ್ರಾಧಿ ಕಾರಕ್ಕೆ ನೀಡದಂತೆ ಹಾಗೂ ಅರ್ಧಕ್ಕೆ ನಿಂತಿರುವ ವಿವಿಯ ಪ್ರಾದೇಶಿಕ ಕಚೇರಿ ಕಾಮಗಾರಿ ಪೂರ್ಣಗೊಳಿಸಲು ಹಣ ಬಿಡುಗಡೆ ಮಾಡಬೇಕೆಂದು ಡಾ.ಕೆ. ವಸಂತಕುಮಾರ್ ಮನವಿ ಮಾಡಿದ್ದಾರೆ.

Translate »