ಕೋವಿಡ್-19 ಸುರಕ್ಷತಾ ಕಾರ್ಯಕ್ರಮಕ್ಕೆ ನಿಯೋಜನೆಗೊಂಡ ಬೋಧಕ, ಬೋಧಕೇತರ ಸಿಬ್ಬಂದಿಯನ್ನು ಇಲಾಖೆ ಕರ್ತವ್ಯಕ್ಕೆ ಹಿಂದಿರುಗಿಸಿ
ಮೈಸೂರು

ಕೋವಿಡ್-19 ಸುರಕ್ಷತಾ ಕಾರ್ಯಕ್ರಮಕ್ಕೆ ನಿಯೋಜನೆಗೊಂಡ ಬೋಧಕ, ಬೋಧಕೇತರ ಸಿಬ್ಬಂದಿಯನ್ನು ಇಲಾಖೆ ಕರ್ತವ್ಯಕ್ಕೆ ಹಿಂದಿರುಗಿಸಿ

June 12, 2020

ಶಿಕ್ಷಣ ಸಚಿವರಿಗೆ ಎಂಎಲ್‍ಸಿ ಮರಿತಿಬ್ಬೇಗೌಡ ಆಗ್ರಹ

ಮೈಸೂರು, ಜೂ. 11(ಪಿಎಂ)- ಕೋವಿಡ್-19 ಸುರಕ್ಷತಾ ಕಾರ್ಯಕ್ರಮಗಳಿಗೆ ನಿಯೋಜನೆಗೊಂಡಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯ ಬೋಧಕ, ಬೋಧಕೇತರ ವರ್ಗದವರನ್ನು ಇಲಾಖೆ ಕರ್ತವ್ಯಕ್ಕೆ ಮರಳಿಸಲು ಸೂಕ್ತ ಆದೇಶ ನೀಡುವಂತೆ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್‍ಕುಮಾರ್ ಅವರಿಗೆ ದಕ್ಷಿಣ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಒತ್ತಾಯಿಸಿದ್ದಾರೆ.

ಜೂನ್ 8ರಿಂದಲೇ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜುಗಳ ಬೋಧಕ ಹಾಗೂ ಬೋಧಕೇತರರು ಕರ್ತವ್ಯಕ್ಕೆ ಹಾಜರಾಗುವಂತೆ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಅದರಂತೆ ಶಾಲಾ ಕಾಲೇಜುಗಳ ಕಚೇರಿಗಳನ್ನು ತೆರೆಯಲಾಗಿದೆ. ಸದರಿ ಸಿಬ್ಬಂದಿ ಶಾಲಾ ಕಾಲೇಜುಗಳಿಗೆ ಕಡ್ಡಾಯವಾಗಿ ಹಾಜರಾಗಬೇಕಾದ ಹಿನ್ನೆಲೆ ಯಲ್ಲಿ ಕೋವಿಡ್-19 ಸುರಕ್ಷತಾ ಕಾರ್ಯಕ್ರಮಗಳಿಗೆ ನಿಯೋಜಿಸಲಾದ ಬೋಧಕ ಹಾಗೂ ಬೋಧಕೇತರರರನ್ನು ಕೂಡಲೇ ಇಲಾಖೆಗೆ ಹಿಂದಿರುಗಲು ಸಂಬಂಧಿಸಿದವ ರಿಗೆ ಸೂಕ್ತ ಆದೇಶ ನೀಡಬೇಕಾಗಿ ಮರಿತಿಬ್ಬೇಗೌಡ ಅವರು ಕೋರಿದ್ದಾರೆ.

Translate »