ಮೈಸೂರು,ಸೆ.20(ಆರ್‍ಕೆ)-ಮೈಸೂರು ತಾಲೂಕು ಕಸಬಾ ಹೋಬಳಿ ಕೆಸರೆ ಗ್ರಾಮದ ಬಳಿ 122 ನಿವೇ ಶನಗಳನ್ನು ಹಂಚಿಕೆ ಮಾಡಲು ಕರ್ನಾಟಕ ಗೃಹ ಮಂಡಳಿ ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಿದೆ.
ಈ ಕುರಿತಂತೆ ಮಂಡಳಿಯು ಆಗಸ್ಟ್ 26ರಂದು ಅಧಿಸೂಚನೆ ಹೊರಡಿಸಿದ್ದು, ಅಗತ್ಯ ಮೂಲ ಸೌಕರ್ಯ ಗಳೊಂದಿಗೆ ವಸತಿ ಬಡಾವಣೆಗಾಗಿ ವೇದಪುರಂನ ಎಂಆರ್‍ಪಿಎಲ್‍ನ ಸಹಭಾಗಿತ್ವದಲ್ಲಿ ಯೋಜನೆ ರೂಪಿಸಿದೆ. ಅದರಂತೆ ರಾಜೀವ್‍ನಗರ ಮೂರನೇ ಹಂತದ ಪಕ್ಕದಲ್ಲಿರುವ ಹಳೆಯ ಕೆಸರೆ ಗ್ರಾಮದ ಸರ್ವೆ ನಂ 278/1, 278/2, 279/2, 280/2, 281/1, 281/3, 282/1 ಹಾಗೂ 282/2ರಲ್ಲಿ ಒಟ್ಟು 122 ನಿವೇಶನಗಳನ್ನು ಹಂಚಿಕೆ ಮಾಡಲು ಮುಂದಾಗಿದೆ. ನಿವೇಶನಗಳಿಗೆ ಅಗತ್ಯ ದಾಖಲಾತಿಗಳನ್ನು ಸಲ್ಲಿಸಲು ಸೆ.25 ಕಡೇ ದಿನ ಎಂದು ಮಂಡಳಿ ಸೂಚಿಸಿದೆ.
6×9 ಮೀಟರ್‍ನ 38(ಇಡಬ್ಲ್ಯೂಎಸ್), 9×12 ಮೀಟರ್‍ನ 41(ಎಲ್‍ಐಜಿ), 12×18 ಮೀಟರ್‍ನ 42(ಎಚ್‍ಐಜಿ-1), 15×24 ಮೀಟರ್‍ನ 1(ಎಚ್‍ಐಜಿ-2) ನಿವೇಶನಗಳನ್ನಾಗಿ ವಿಂಗ ಡಿಸಲಾಗಿದ್ದು, ಪ್ರತಿಯೊಂದು ನಿವೇಶನಕ್ಕೂ ಪ್ರತ್ಯೇಕ ನೊಂದಣಿ ಮಾಡಲಾಗುವುದು. ಪ್ರತಿ ಚದರ ಅಡಿ ವಿಸ್ತೀ ರ್ಣಕ್ಕೆ 300 ರೂ.ಗಳಿಂದ 1500 ರೂ. ಹಾಗೂ 700 ರೂ.ರಿಂದ 1470 ರೂ. ಬೆಲೆಯನ್ನು ನಿಗದಿಪಡಿಸಲಾಗಿದೆ. ಇಡಬ್ಲ್ಯೂಎಸ್ ನಿವೇಶನಗಳಿಗೆ 25000 ರೂ, ಎಲ್‍ಐಜಿ ನಿವೇಶನಗಳಿಗೆ 50,000 ರೂ. ಹಾಗೂ ಉಳಿದ ವರ್ಗದ ನಿವೇಶನಗಳಿಗೆ 1,25000 ರೂ. ಗಳನ್ನು ಪ್ರಾರಂಭಿಕ ಠೇವಣಿಯಾಗಿ ಪಾವತಿಸಬೇಕಾಗುತ್ತದೆ. ಅರ್ಜಿಗಳನ್ನು ವಿಜಯನಗರ ಮೊದಲ ಹಂತದ ಬ್ಯಾಂಕ್ ಆಫ್ ಬರೊಡಾ (ಹಳೆ ವಿಜಯ ಬ್ಯಾಂಕ್), ಸರಸ್ವತಿಪುರಂನ ಕರ್ನಾಟಕ ಗೃಹಮಂಡಳಿ ಎಕ್ಸಿಕ್ಯುಟಿವ್ ಇಂಜಿನಿಯರ್ ಕಚೇರಿ ಹಾಗೂ ಬೆಂಗಳೂರಿನ ವಿಜಯ ನಗರ 3ನೇ ಕ್ರಾಸ್, 3ನೇ ಮೇನ್‍ನಲ್ಲಿರುವ ಕೆ.ಬಿ. ಸಂಗೀತ ಬಿಲ್ಡಿಂಗ್‍ನ ಬ್ಯಾಂಕ್ ಆಫ್ ಬರೊಡಾದಲ್ಲಿ ಅರ್ಜಿಗಳ ವಿತರಣೆ ಹಾಗೂ ಸ್ವೀಕರಣೆ ಮಾಡಲಾಗುತ್ತದೆ. 100 ರೂ. ಪಾವತಿಸಿ ಪಡೆದ ಅರ್ಜಿಗಳನ್ನು ಭರ್ತಿ ಮಾಡಿ ಅಗತ್ಯ ದಾಖಲಾತಿ ಹಾಗೂ ನೋಂದಣಿ ಶುಲ್ಕದ ಡಿಡಿ ಮತ್ತು ಪ್ರಾರಂಭಿಕ ಠೇವಣಿಯೊಂದಿಗೆ ಸೆ.25ರೊಳಗಾಗಿ ಪಾವತಿಸಬೇಕು. ಡಿಡಿಯನ್ನು ಕರ್ನಾ ಟಕ ಗೃಹಮಂಡಳಿ ಹಾಗೂ ಎಂಆರ್‍ಪಿಎಲ್ ವೇದ ಪುರಂ ಹೆಸರಿಗೆ ಪಡೆಯಬೇಕು ಎಂದು ಅಧಿ ಸೂಚನೆ ಯಲ್ಲಿ ತಿಳಿಸಲಾಗಿದೆ. ಹೆಚ್ಚುವರಿ ಮಾಹಿತಿಗಾಗಿ ಕರ್ನಾಟಕ ಗೃಹಮಂಡಳಿ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಕಚೇರಿ ದೂ.ಸಂ.-0821-2543 237 ಅಥವಾ ಬೆಂಗಳೂರಿನ ಕರ್ನಾಟಕ ಗೃಹಮಂಡಳಿ ನಿವೇಶನ ಹಂಚಿಕೆ ವಿಭಾಗದ ಕಂದಾಯಾಧಿಕಾರಿ ಕಚೇರಿ ದೂರವಾಣಿ ಸಂಖ್ಯೆ -080-22273511, 22273335 ಅನ್ನು ಸಂಪರ್ಕಿಸಲು ಕೋರಲಾಗಿದೆ.