ಧರ್ಮಗುರು ಕೆ.ಎ.ವಿಲಿಯಂರನ್ನು ಭೇಟಿ ಮಾಡಿದ ಮುಡಾ ಅಧ್ಯಕ್ಷ ರಾಜೀವ್
ಮೈಸೂರು

ಧರ್ಮಗುರು ಕೆ.ಎ.ವಿಲಿಯಂರನ್ನು ಭೇಟಿ ಮಾಡಿದ ಮುಡಾ ಅಧ್ಯಕ್ಷ ರಾಜೀವ್

September 21, 2020

ಮೈಸೂರು,ಸೆ.20(ಆರ್‍ಕೆಬಿ)- ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಅಧ್ಯಕ್ಷ ಹೆಚ್.ವಿ.ರಾಜೀವ್ ಅವರು ಭಾನು ವಾರ ಮೈಸೂರು ಕ್ರೈಸ್ತ ಧರ್ಮ ಪ್ರಾಂತ್ಯದ ಬಿಷಪ್ ಕೆ.ಎ.ವಿಲಿಯಂ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡರು.

ಅಧ್ಯಕ್ಷರಾದ ಬಳಿಕ ಎಲ್ಲಾ ಧರ್ಮ ಗುರುಗಳನ್ನು ಭೇಟಿಯಾಗುತ್ತಿರುವ ಮುಡಾ ಅಧ್ಯಕ್ಷರು ನಗರದ ಫೈವ್‍ಲೈಟ್ ವೃತ್ತದ ಬಳಿ ಇರುವ ಬಿಷಪ್ ನಿವಾಸಕ್ಕೆ ತೆರಳಿ, ಬಿಷಪ್ ಕೆ.ಎ.ವಿಲಿಯಂ ಅವರಿಗೆ ಫಲತಾಂಬೂಲ ನೀಡಿ, ಶಾಲು ಹೊದಿಸಿ ಗೌರವಿಸಿದರು. ಪ್ರತಿಯಾಗಿ ಬಿಷಪ್ ಅವರೂ ಹೆಚ್.ವಿ.ರಾಜೀವ್ ಅವರಿಗೆ ಶಾಲು ಹೊದಿಸಿ ಗೌರವಿಸಿದರು.

ಉಭಯಕುಶಲೋಪರಿ ಬಳಿಕ ಬಿಷಪ್ ಅವರು ರಾಜೀವ್ ಅವರ ಲಕ್ಷವೃಕ್ಷ ಕಾರ್ಯ ವನ್ನು ಪ್ರಶಂಸಿಸಿದರು. ತಮ್ಮ ಓಡಿಒ ಸಂಸ್ಥೆಯ ಮಹಿಳಾ ಸಂಘಟನೆಗಳು ಸಹ 60 ಸಾವಿರಕ್ಕೂ ಹೆಚ್ಚು ಗಿಡಗಳನ್ನು ಬೆಳೆಸಿದ ಬಗ್ಗೆ ತಿಳಿಸಿದರು.

ಅದಕ್ಕೆ ರಾಜೀವ್ ಅವರು ಇನ್ನಷ್ಟು ದೊಡ್ಡ ಗಿಡಗಳನ್ನು ಸಂಸ್ಥೆಗೆ ನೀಡು ವುದಾಗಿ ತಿಳಿಸಿ ಅರ್ಧ ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದರು.

ಪ್ರಾಧಿಕಾರಕ್ಕೆ ಸಂಬಂಧಿಸಿ ಬಿಷಪ್ ಅವರಿಂದ ಕೇಳಿ ಬಂದ ಮನವಿಗಳನ್ನು ಈಡೇರಿಸಲು ಕ್ರಮ ವಹಿಸುವುದಾಗಿ ರಾಜೀವ್ ಭರವಸೆ ನೀಡಿದರು.