ರಾಜ್ಯದಲ್ಲಿ 1747 ಕೋಟಿ ವೆಚ್ಚದ 35 ಕೈಗಾರಿಕಾ ಯೋಜನೆಗೆ ಅನುಮೋದನೆ
News

ರಾಜ್ಯದಲ್ಲಿ 1747 ಕೋಟಿ ವೆಚ್ಚದ 35 ಕೈಗಾರಿಕಾ ಯೋಜನೆಗೆ ಅನುಮೋದನೆ

October 23, 2022

ಬೆಂಗಳೂರು, ಅ. 22(ಕೆಎಂಶಿ)- ಕೈಗಾರಿಕೆಗಳ ಬೆಳವಣಿಗೆ ಹಾಗೂ ಉದ್ಯೋಗ ಸೃಷ್ಟಿಗೆ ಮತ್ತಷ್ಟು ಉತ್ತೇಜನ ನೀಡಿರುವ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯು 1747.37 ಕೋಟಿ ರೂ. ಬಂಡವಾಳ ಹೂಡಿಕೆಯ 35 ಯೋಜ ನೆಗಳಿಗೆ ಅನುಮೋದನೆ ನೀಡಿದೆ.

ಕರ್ನಾಟಕ ಉದ್ಯೋಗ ಮಿತ್ರ ಕಚೇರಿ ಯಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾ ರಿಕಾ ಸಚಿವ ಮುರುಗೇಶ್ ಆರ್ ನಿರಾಣಿ ಅವರ ಅಧ್ಯಕ್ಷತೆಯಲ್ಲಿ ನಡೆದ 135ನೇ ರಾಜ್ಯ ಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿ ಸಭೆಯಲ್ಲಿ ಬಂಡವಾಳ ಹೂಡಿಕೆಯ ಯೋಜನೆಗೆ ಅನು ಮೋದನೆ ನೀಡಲಾಗಿದೆ. ಒಟ್ಟು 35 ಬೃಹತ್ ಮತ್ತು ಮಧ್ಯಮ ಯೋಜನೆಗಳಿಂದ 1747.47 ಕೋಟಿ ರೂ. ಬಂಡವಾಳ ಹೂಡಿಕೆಯಾ ಗಲಿದ್ದು, ಇದರಿಂದಾಗಿ 4904 ಉದ್ಯೋಗಗಳು ಸೃಷ್ಟಿಯಾಗ ಲಿವೆ ಎಂದು ಸಚಿವ ಮುರುಗೇಶ್ ಆರ್.ನಿರಾಣಿ ಅವರು ತಿಳಿಸಿದ್ದಾರೆ.

50 ಕೋಟಿ ರೂ.ಗೂ ಹೆಚ್ಚು ಬಂಡವಾಳ ಹೂಡಿಕೆಯ 8 ಪ್ರಮುಖ ಬೃಹತ್ ಮತ್ತು ಮಧ್ಯಮ ಯೋಜನೆಗಳಿಗೆ ಅನುಮೋ ದನೆ ನೀಡಿದ್ದು, ಇವುಗಳಿಂದ ರೂ. 949,11 ಕೋಟಿ ರೂ. ಬಂಡವಾಳ ಹೂಡಿಕೆಯಾಗಿ ಸುಮಾರು 2461 ಜನರಿಗೆ ಉದ್ಯೋಗಾ ವಕಾಶ ಲಭ್ಯವಾಗಲಿದೆ ಎಂದು ಹೇಳಿದರು. 15 ಕೋಟಿ ರೂ.ನಿಂದ 50 ಕೋಟಿ ರೂ. ಒಳಗಿನ ಬಂಡವಾಳ ಹೂಡಿಕೆಯ 25 ಹೊಸ ಯೋಜನೆಗಳಿಗೆ ಸಮಿತಿಯು ಒಪ್ಪಿಗೆ ನೀಡಿದ್ದು, ಇವುಗಳಿಂದ 567.43 ಕೋಟಿ ರೂ. ಬಂಡವಾಳ ಹೂಡಿಕೆ ಹಾಗೂ 2443 ಜನರಿಗೆ ಉದ್ಯೋ ಗಾವಕಾಶ ಲಭ್ಯವಾಗಲಿದೆ. ಹೆಚ್ಚುವರಿ ಬಂಡವಾಳ ಹೂಡಿಕೆಯ 2 ಯೋಜನೆಗೆ ಅನುಮೋದನೆ ನೀಡಿದ್ದು, ಇದರಿಂದ 230.83 ಕೋಟಿ ರೂ.ಬಂಡವಾಳ ಹೂಡಿಕೆಯಾಗಲಿದೆ. ಮೇಲ್ಕಂಡ ಒಟ್ಟು 35 ಯೋಜನೆಗಳಿಂದ 1747.37 ಕೋಟಿ ರೂ. ಬಂಡವಾಳ ಹೂಡಿಕೆಯಾಗಲಿದ್ದು, ಇವುಗಳಿಂದ 4904 ಜನರಿಗೆ ಉದ್ಯೋಗವಕಾಶ ಲಭ್ಯವಾಗಲಿದೆ.

Translate »