ಟಿ20 ವಿಶ್ವಕಪ್: ಇಂದು ಭಾರತ-ಪಾಕ್ ಹೈವೋಲ್ಟೆಜ್ ಪಂದ್ಯ
News

ಟಿ20 ವಿಶ್ವಕಪ್: ಇಂದು ಭಾರತ-ಪಾಕ್ ಹೈವೋಲ್ಟೆಜ್ ಪಂದ್ಯ

October 23, 2022

ಮೆಲ್ಬೋರ್ನ್, ಅ. 22- ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಪಂದ್ಯಾವಳಿ ಯಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ-ಪಾಕಿಸ್ತಾನ ತಂಡ ಗಳು ನಾಳೆ(ಭಾನುವಾರ) ಕಾದಾಡಲಿವೆ. ಭಾರೀ ಕುತೂಹಲ ಕೆರಳಿಸಿರುವ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಇಲ್ಲಿನ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಪಂದ್ಯ ಭಾರತೀಯ ಕಾಲಮಾನ ಮಧ್ಯಾಹ್ನ 1.30ಕ್ಕೆ ಆರಂಭವಾಗಲಿದೆÉ.

ವಿಶ್ವಕಪ್ ಪಂದ್ಯಾವಳಿಗಳಲ್ಲಿ ಪಾಕ್ ವಿರುದ್ಧ ತನ್ನ ಪ್ರಭುತ್ವ ಸಾಧಿಸಿದ್ದ ಭಾರತ ಕಳೆದ ವಿಶ್ವಕಪ್‍ನಲ್ಲಿ ಮೊದಲ ಬಾರಿಗೆ ಸೋಲು ಅನುಭವಿಸಿತ್ತು. ಆ ಸೋಲಿನ ಸೇಡು ತೀರಿಸಿಕೊಳ್ಳಲು ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಹವಣಿಸುತ್ತಿದೆ. ಟಿ20 ವಿಶ್ವಕಪ್‍ನಲ್ಲಿ ಉಭಯ ತಂಡಗಳು 6 ಬಾರಿ ಮುಖಾಮುಖಿಯಾಗಿದ್ದು, ಟೀಮ್ ಇಂಡಿಯಾ 5 ಬಾರಿ ಗೆದ್ದಿದ್ದರೆ, ಪಾಕಿಸ್ತಾನ 1 ಪಂದ್ಯ ಗೆದ್ದಿದೆ. ಎಂದಿನಂತೆ ಆರಂಭಿಕರಾಗಿ ಕೆ.ಎಲ್.ರಾಹುಲ್ ಹಾಗೂ ನಾಯಕ ರೋಹಿತ್ ಶರ್ಮಾ ಕಣಕ್ಕಿಳಿಯಲಿದ್ದು, ಮೂರನೇ ಕ್ರಮಾಂಕದಲ್ಲಿ ಮಾಜಿ ನಾಯಕ ವಿರಾಟ್ ಕೊಹ್ಲಿ ಆಡಲಿದ್ದಾರೆ. ನಾಲ್ಕು ಮತ್ತು ಐದನೇ ಕ್ರಮಾಂಕ ಗಳಲ್ಲಿ ಕ್ರಮವಾಗಿ ಸೂರ್ಯಕುಮಾರ್ ಯಾದವ್ ಹಾಗೂ ಹಾರ್ದಿಕ್ ಪಾಂಡ್ಯ ಬ್ಯಾಟ್ ಬೀಸುವುದು ಬಹುತೇಕ ಖಚಿತ. ಆರನೇ ಕ್ರಮಾಂಕದಲ್ಲಿ ಸ್ಪಿನ್ ಆಲ್‍ರೌಂಡರ್ ಅಕ್ಷರ್ ಪಟೇಲ್ ಅವರನ್ನು ಆಡಿಸುವ ಸಾಧ್ಯತೆ ಇದೆ. ಏಳನೇ ಕ್ರಮಾಂಕದಲ್ಲಿ ದಿನೇಶ್ ಕಾರ್ತಿಕ್ ಅಥವಾ ರಿಷಬ್ ಪಂತ್ ಕಣಕ್ಕಿಳಿಯಲಿದ್ದಾರೆ. ಇನ್ನು ಬೌಲಿಂಗ್ ವಿಭಾಗದಲ್ಲಿ ಭುವನೇಶ್ವರ್ ಕುಮಾರ್ ಹಾಗೂ ಅರ್ಷದೀಪ್ ಸಿಂಗ್ ಇಬ್ಬರು ವೇಗಿಗಳು ಕಣಕ್ಕೆ ಇಳಿಯುವುದು ಬಹುತೇಕ ಖಚಿತ. ಆದರೆ, ಇನ್ನುಳಿದ ಒಂದು ವೇಗದ ಬೌಲಿಂಗ್ ಸ್ಥಾನಕ್ಕೆ ಹರ್ಷಲ್ ಪಟೇಲ್ ಹಾಗೂ ಮೊಹಮ್ಮದ್ ಶಮಿ ನಡುವೆ ಪೈಪೆÇೀಟಿ ಏರ್ಪಡಲಿದೆ. ಅದೇ ರೀತಿ ಪೂರ್ಣ ಪ್ರಮಾಣದ ಸ್ಪಿನ್ನರ್ ಜಾಗಕ್ಕೆ ಆರ್.ಅಶ್ವಿನ್ ಹಾಗೂ ಯಜ್ವೇಂದ್ರ ಚಹಲ್ ಅವರಲ್ಲಿ ಒಬ್ಬರು ಆಯ್ಕೆಯಾಗಲಿದ್ದಾರೆ.
ಅತ್ತ ಪಾಕಿಸ್ತಾನವೂ ಬ್ಯಾಟಿಂಗ್ ಹಾಗೂ ಬೌಲಿಂಗ್‍ನಲ್ಲಿ ಬಲಿಷ್ಠವಾಗಿದ್ದು, ಭಾರತದ ವಿರುದ್ಧದ ಪಂದ್ಯ ಗೆಲ್ಲುವ ಮೂಲಕ ಟೂರ್ನಿ ಯಲ್ಲಿ ಶುಭಾರಂಭ ಮಾಡುವ ತವಕದಲ್ಲಿದೆ. ಪಾಕ್ ಬೌಲರ್‍ಗಳು ತಮ್ಮ ಕರಾರುವಾಕ್ ಬೌಲಿಂಗ್‍ನಿಂದ ಭಾರತೀಯ ಬ್ಯಾಟ್ಸ್‍ಮನ್‍ಗಳನ್ನು ಕಂಗೆಡಿಸಲು ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ. ಒಟ್ಟಾರೆ ನಾಳಿನ ಪಂದ್ಯದಲ್ಲಿ ಕ್ರಿಕೆಟ್ ಅಭಿಮಾನಿ ಗಳಿಗೆ ಭರಪೂರ ಮನರಂಜನೆ ಸಿಗಲಿದ್ದು, ಭಾರತೀಯ ಬ್ಯಾಟ್ಸ್‍ಮನ್ ಪಾಕ್ ಬೌಲರ್‍ಗಳಿಗೆ ಹೇಗೆ ಸವಾಲಾಗಲಿದ್ದಾರೆ ಎಂಬುದನ್ನು ತಿಳಿ ಯಲು ನಾಳಿನ ಪಂದ್ಯದವರೆಗೂ ಕಾಯಬೇಕಿದೆ.

ಪಂದ್ಯಕ್ಕೆ ವರುಣನ ಕಾಟ?: ಭಾರತ ಹಾಗೂ ಪಾಕಿಸ್ತಾನ ನಡುವಿನ ಹೈವೋಲ್ಟೆಜ್ ಪಂದ್ಯಕ್ಕೆ ಇಡೀ ವಿಶ್ವವೇ ಕಾತುರದಿಂದ ಕಾದು ಕುಳಿತಿದೆ. ಆದರೆ ಪಂದ್ಯಕ್ಕೆ ಮಳೆರಾಯ ಅಡ್ಡಿಪಡಿಸುವ ಸಾಧ್ಯತೆ ಹೆಚ್ಚಾಗಿದೆ. ಸ್ಥಳೀಯ ಹವಾಮಾನ ಇಲಾಖೆಯ ಪ್ರಕಾರ, 80 ರಿಂದ 90 ರಷ್ಟು ಮಳೆಯಾಗುವ ಸಾಧ್ಯತೆಯಿದ್ದು, ಸುಮಾರು 1 ಮಿಮೀನಿಂದ 5 ಮಿಮೀ ನಡುವೆ ಮಳೆ ಸುರಿಯಬಹುದು ಎಂದು ಹೇಳಿರುವ ಹವಾಮಾನ ಇಲಾಖೆ, ಚಂಡ ಮಾರುತದ ಮುನ್ಸೂಚನೆಯೂ ನೀಡಿದೆ. ಶುಕ್ರವಾರ ಸಂಜೆ, ಮೆಲ್ಬೋರ್ನ್‍ನಲ್ಲಿ ತುಂತುರು ಮಳೆಯಾಗಿದೆ. ಭಾನುವಾರದಂದು ಇದೇ ರೀತಿ ಮಳೆ ಮುಂದುವರಿಯಲಿದ್ದು, ಕ್ರಿಕೆಟ್ ಅಭಿ ಮಾನಿಗಳಿಗೆ ಬೇಸರ ಉಂಟು ಮಾಡಬಹು ದಾಗಿದೆ. ಆದರೆ, ಹವಾಮಾನ ವೈಪರೀತ್ಯದ ಬಗ್ಗೆ ತಕ್ಕಮಟ್ಟಿನ ಕಲ್ಪನೆ ಹೊಂದಿರುವ ಸ್ಥಳೀಯರು ಪಂದ್ಯ ನಡೆಯಬಹುದು ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Translate »