ಮೈಸೂರು, ಸೆ.14(ಎಸ್‍ಬಿಡಿ)- ಮೈಸೂರಿನ ವಿದ್ಯಾರಣ್ಯ ಪುರಂ ಸಿವೇಜ್ ಫಾರಂನಲ್ಲಿ ಸಂಗ್ರಹವಾಗಿರುವ ಅಪಾರ ಪ್ರಮಾಣದ ತ್ಯಾಜ್ಯವನ್ನು ವೈಜ್ಞಾನಿಕ ರೀತಿ ಸಂಸ್ಕರಿಸುವ ವಿಸ್ತøತ ಯೋಜನೆಗೆ ಸಮಗ್ರ ಟೆಂಡರ್ ಕರೆಯಲು ಅನು ಮೋದನೆ ನೀಡಿರುವ ಸರ್ಕಾರಕ್ಕೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಧನ್ಯವಾದ ತಿಳಿಸಿದ್ದಾರೆ.
ವಿದ್ಯಾರಣ್ಯಪುರಂ ಸಿವೇಜ್ ಫಾರಂನ ತ್ಯಾಜ್ಯ ವಿಲೇ ವಾರಿ ಜಾಗದಲ್ಲಿ ಸಂಗ್ರಹಣೆÀಯಾಗಿರುವ ಅಂದಾಜು 3.08 ಲಕ್ಷ ಟನ್ ಪಾರಂಪರಿಕ ತ್ಯಾಜ್ಯವನ್ನು ಬಯೋಮೈನಿಂಗ್ ವಿಧಾನ ಅನುಸರಿಸಿ ಸಂಸ್ಕರಣೆ ಮಾಡುವುದರ ಜೊತೆಗೆ ನಿತ್ಯ ಸಂಗ್ರಹವಾಗುವ ಸುಮಾರು 200 ಟನ್ ತಾಜಾ ತ್ಯಾಜ್ಯವನ್ನು(ಆಚಿiಟಥಿ ಈಡಿesh Wಚಿsಣe) ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಸಲ್ಲಿಸಲಾಗಿದ್ದ 14.38 ಕೋಟಿ ರೂ. ಅಂದಾಜು ಮೊತ್ತದ ವಿಸ್ತøತ ಯೋಜನಾ ವರದಿ (ಡಿಪಿಆರ್)ಗೆ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ. ಸದರಿ ಯೋಜನೆ ಅನುಷ್ಠಾನಕ್ಕೆ ಕೆಲ ಷರತ್ತುಗಳನ್ನು ವಿಧಿಸಿ, ಸಮಗ್ರ ಟೆಂಡರ್ ಕರೆಯಲು ಅನುಮೋದನೆ ನೀಡಿ ಆದೇಶಿಸಿದೆ.
ಮೈಸೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿ ದಿನ ಅಂದಾಜು 450 ಮೆಟ್ರಿಕ್ ಟನ್ ಪೌರ ಘನತ್ಯಾಜ್ಯ ಉತ್ಪಾ ದನೆಯಾಗುತ್ತಿದೆ. ಆದರೆ ಶೇ.100ರಷ್ಟು ತ್ಯಾಜ್ಯ ಸಂಸ್ಕರಿ ಸುವ ಸೌಲಭ್ಯ ಇಲ್ಲದಿರುವ ಕಾರಣ ನಿತ್ಯ ಸುಮಾರು 200 ಟನ್ ತ್ಯಾಜ್ಯವನ್ನು ವಿದ್ಯಾರಣ್ಯಪುರಂ ಸಿವೇಜ್ ಫಾರಂನ ಖಾಲಿ ಜಾಗದಲ್ಲಿ ರಾಶಿ ಹಾಕಲಾಗುತ್ತಿದೆ. ಇದಕ್ಕೆ ಪರಿಹಾರ ನೀಡುವ ದೃಷ್ಟಿಯಿಂದ ತ್ಯಾಜ್ಯವನ್ನು ಬಯೋರೆಮಿಡಿಯೇಷನ್ ಅಥವಾ ಬಯೋಮೈನಿಂಗ್ ಪರಿಸರ ಸ್ನೇಹಿ ವಿಧಾನದ ಮೂಲಕ ಸೂಕ್ತ ರೀತಿ ವಿಲೇವಾರಿ ಮಾಡುವ ಸಂಬಂಧ ಸಚಿವರು, ಶಾಸಕ ರೊಂದಿಗೆ ನಾನೂ ಹಲವು ಬಾರಿ ಸ್ಥಳ ಪರಿಶೀಲನೆ ನಡೆಸಿ, ಪರಿಹಾರ ಕ್ರಮಕ್ಕೆ ಸರ್ಕಾರಕ್ಕೆ ಮನವಿ ಮಾಡಿದ್ದೆವು ಎಂದು ಪ್ರತಾಪ್ ಸಿಂಹ ತಿಳಿಸಿದ್ದಾರೆ.
ಸಿವೇಜ್ ಫಾರಂನಲ್ಲಿ ಎರಡು ಲಕ್ಷ ಟನ್ ಪಾರಂಪರಿಕ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಬಯೋಮೈನಿಂಗ್, ಬಯೋ ರೆಮಿಡಿಯೇಷನ್ ವಿಧಾನದಲ್ಲಿ ಸಂಸ್ಕರಿಸುವುದು, ವಿಲೇ ವಾರಿಗೆ ಅಗತ್ಯವಾದ ವಾಹನಗಳ ಹೊರಗುತ್ತಿಗೆ ಮೂಲಕ ಪಡೆಯುವುದು ಹಾಗೂ ಆರ್‍ಡಿಎಫ್ ತ್ಯಾಜ್ಯ ಸಾಗಿಸುವ ಕಾಮಗಾರಿ ಸೇರಿ ಒಟ್ಟು 10.14 ಕೋಟಿ ರೂ. ಡಿಪಿಆರ್ ಸಿದ್ಧಪಡಿಸಿ, ಕಳೆದ ವರ್ಷವೇ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಸಿವಿಲ್ ಕಾಮಗಾರಿ, ಯಂತ್ರೋಪಕರಣ, ಮಾನವ ಸಂಪನ್ಮೂಲ ಇತರೆ ವೆಚ್ಚವನ್ನೊಳಗೊಂಡ ಪಾರಂಪರಿಕ ತ್ಯಾಜ್ಯ ಸಂಸ್ಕರಣೆಗೆ ಮಾತ್ರ ಅನುಮೋದನೆ ನೀಡಿದ್ದ ಸರ್ಕಾರ, ಹೊರಗುತ್ತಿಗೆ ಮೂಲಕ ಪಡೆಯುವುದು, ಆರ್‍ಡಿಎಫ್ ಹಾಗೂ ನಿಸ್ಸತ್ವ ತ್ಯಾಜ್ಯ ಸಾಗಿಸಲು ಪಾಲಿಕೆ ಹಂತದಲ್ಲೇ ಪ್ರತ್ಯೇಕ ಟೆಂಡರ್ ಆಹ್ವಾನಿಸಲು ಆಡಳಿತಾತ್ಮಕ ಅನುಮೋದನೆ ನೀಡಿತ್ತು. ಆದರೆ ವಾಹನಗಳ ಹೊರ ಗುತ್ತಿಗೆಯಡಿ ಒದಗಿಸಲು ಯಾವುದೇ ಟೆಂಡರ್‍ದಾರರು ಭಾಗವಹಿಸದ ಕಾರಣ ಯೋಜನೆಗೆ ತಡೆಯಾಗಿತ್ತು.
ನಂತರದಲ್ಲಿ ಸಂಗ್ರಹವಾಗಿರುವ ತ್ಯಾಜ್ಯ ಪ್ರಮಾಣದ ಮರು ಸಮೀಕ್ಷೆ ನಡೆಸಿ, ಒಟ್ಟು 3.08 ಲಕ್ಷ ಟನ್ ಪಾರಂಪರಿಕ ತ್ಯಾಜ್ಯವನ್ನು ಬಯೋಮೈನಿಂಗ್ ವಿಧಾನ ದಲ್ಲಿ ಸಂಸ್ಕರಣೆ, ವಾಹನ-ಯಂತ್ರೋಪಕರಣ, ಆರ್‍ಡಿಎಫ್ ವಿಲೇವಾರಿ ಜೊತೆಗೆ ನಿತ್ಯ ಸಂಸ್ಕರಣೆಯಾಗದೆ ಉಳಿ ಯುತ್ತಿರುವ 200 ಟನ್ ತ್ಯಾಜ್ಯ ವಿಲೇವಾರಿ ಒಳಗೊಂಡ ಪರಿಷ್ಕøತ 14.38 ಕೋಟಿ ರೂ. ಯೋಜನೆಗೆ ಸರ್ಕಾರ ಅನುಮೋದನೆ ನೀಡಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಕ್ಯಾಬಿನೆಟ್‍ಗೆ ಧನ್ಯವಾದ ತಿಳಿಸುತ್ತೇನೆ ಎಂದು ಸಂಸದ ಪ್ರತಾಪ್ ಸಿಂಹ ಪತ್ರಿಕಾ ಪ್ರಕಟಣೆಯಲ್ಲಿ ವಿವರಿಸಿದ್ದಾರೆ.