ಮೈಸೂರಲ್ಲಿ ಇಬ್ಬರು ಸರಗಳ್ಳರ ಬಂಧನ
ಮೈಸೂರು

ಮೈಸೂರಲ್ಲಿ ಇಬ್ಬರು ಸರಗಳ್ಳರ ಬಂಧನ

September 4, 2021

ಮೈಸೂರು, ಸೆ.೩(ಆರ್‌ಕೆ)- ಮಹಿಳೆಯರ ಚಿನ್ನದ ಸರ ಕದಿಯುತ್ತಿದ್ದ ಇಬ್ಬರು ಹಾಗೂ ಕಳವು ಮಾಲನ್ನು ಸ್ವೀಕರಿಸಿದವನನ್ನೂ ಮೈಸೂರಿನ ನರಸಿಂಹರಾಜ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮೈಸೂರಿನ ಕೆ.ಆರ್.ಮೊಹಲ್ಲಾದ ಹುಲ್ಲಿನ ಬೀದಿ, ೩ನೇ ಕ್ರಾಸ್ ನಿವಾಸಿ ಅಫ್ರೋಜ್‌ಖಾನ್ ಮಗ ಸಲ್ಮಾನ್ ಖಾನ್ ಅಲಿಯಾಸ್ ಸಲ್ಲು(೨೮), ಶಾಂತಿನಗರದ ನಜೀರ್ ಬಾಷ ಮಗ ತಾಜುದ್ದೀನ್ ಅಲಿಯಾಸ್ ಮಹಮದ್ ತಾಜುದ್ದೀನ್(೨೧) ಹಾಗೂ ಕದ್ದ ಆಭರಣಗಳನ್ನು ಗಿರಿವಿ ಇರಿಸಿಕೊಳ್ಳುತ್ತಿದ್ದ ಮೈಸೂರಿನ ಅಶೋಕ ರಸ್ತೆಯ ಮರಿಯಂ ಜುವೆಲ್ಸ್ ಮಾಲೀಕ ಮಹಮದ್ ಪರ್ವೀಜ್ (೪೧) ಬಂಧಿತರು. ಅವರಿಂದ ೧೯,೪೦,೦೦೦ ರೂ. ಮೌಲ್ಯದ ೩೮೮ ಗ್ರಾಂ ತೂಗುವ ೧೩ ಚಿನ್ನದ ಸರಗಳು ಹಾಗೂ ೧,೫೦,೦೦೦ ರೂ. ಮೌಲ್ಯದ ೩ ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮೈಸೂರಿನ ಎನ್.ಆರ್. ಮೊಹಲ್ಲಾದ ೩ನೇ ಮುಖ್ಯ ರಸ್ತೆ, ೭ನೇ ಕ್ರಾಸ್ ನಿವಾಸಿ ನಾಗರಾಜ್ ಅವರ ಪತ್ನಿ ಪಂಕಜ(೪೫), ಆಗಸ್ಟ್ ೨೩ರಂದು ಬೆಳಗ್ಗೆ ಶಾಲೆಗೆ ಹೋಗಿದ್ದ ಮಗನನ್ನು ಕರೆತರಲೆಂದು ಸೇಂಟ್ ಮಥಾಯಿಸ್ ಶಾಲೆಗೆ ಹೋಗಿ ಹಿಂದಿರುಗುತ್ತಿದ್ದಾಗ ರಾಜೇಂದ್ರನಗರ ೧೦ನೇ ಕ್ರಾಸ್‌ನ ಅಜ್ಜು ವಾಟರ್ ಪಾಯಿಂಟ್ ಬಳಿ ದುಷ್ಕರ್ಮಿಗಳಿಬ್ಬರು ಬೈಕಿನಲ್ಲಿ ಬಂದು ೨,೪೦,೦೦೦ ರೂ. ಮೌಲ್ಯದ ೬೦ ಗ್ರಾಂ ತೂಕದ ಎರಡೆಳೆ ಚಿನ್ನದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದರು.
ಪ್ರಕರಣ ದಾಖಲಿಸಿಕೊಂಡಿದ್ದ ಎನ್.ಆರ್. ಠಾಣೆ ಇನ್‌ಸ್ಪೆಕ್ಟರ್ ಅಜರುದ್ದೀನ್ ಮೈಸೂರಿನ ಹಲವೆಡೆ ನಡೆದಿದ್ದ ಸರಗಳ್ಳತನ ಕೃತ್ಯದ ಸ್ಥಳಗಳ ಸಿಸಿಟಿವಿ ದೃಶ್ಯಾವಳಿ ಹಾಗೂ ಅವರು ಬಳಸುತ್ತಿದ್ದ ವಾಹನಗಳ ಮಾದರಿಗಳ ಮಾಹಿತಿ ಸಂಗ್ರಹಿಸಿ ತನಿಖೆ ನಡೆಸಿದಾಗ ಆಗಸ್ಟ್ ೨೬ರಂದು ಸಂಜೆ ೫ ಗಂಟೆ ವೇಳೆ ಪುಷ್ಪಾಶ್ರಮ ಜಂಕ್ಷನ್ ಬಳಿ ರಿಂಗ್ ರಸ್ತೆಯಲ್ಲಿ ಅನುಮಾನಾಸ್ಪದವಾಗಿ ಓಡಾ ಡುತ್ತಿದ್ದ ಸಲ್ಮಾನ್‌ಖಾನ್‌ನನ್ನು ವಶಕ್ಕೆ ಪಡೆದುಕೊಂಡಿದ್ದರು.

ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ಗೊಳಪಡಿಸಿದಾಗ, ಆತ ನೀಡಿದ ಮಾಹಿತಿಯಂತೆ ಕದ್ದ ಮಾಲು ಗಿರಿವಿ ಇರಿಸಿ ಕೊಳ್ಳುತ್ತಿದ್ದ ಮಹಮದ್ ಪರ್ವೀಜ್‌ನನ್ನು ಬಂಧಿಸಿದ್ದರು. ಆಗಸ್ಟ್ ೨೯ ರಂದು ರಾತ್ರಿ ತಲೆಮರೆಸಿಕೊಂಡಿದ್ದ ಮತ್ತೋರ್ವ ಸರಗಳ್ಳ ತಾಜುದ್ದೀನ್‌ನನ್ನು ಹುಣಸೂರು ತಾಲೂಕು, ಪಂಚವಳ್ಳಿ ಬಸ್ ನಿಲ್ದಾಣದ ಬಳಿ ಬಂಧಿಸಿದ್ದರು.
ಬAಧಿತ ಆರೋಪಿಗಳು ಎನ್.ಆರ್. ಠಾಣಾ ವ್ಯಾಪ್ತಿಯಲ್ಲಿ ೭, ಉದಯಗಿರಿಯಲ್ಲಿ ೩, ವಿದ್ಯಾರಣ್ಯಪುರಂ, ವಿವಿಪುರಂ, ನಜರ್‌ಬಾದ್, ಕೆ.ಆರ್.ಠಾಣೆ ಸೇರಿದಂತೆ ಹಲವೆಡೆ ೧೬ ಸರ ಅಪಹರಣ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂ ಬುದು ತಿಳಿಯಿತು. ಅಲ್ಲದೆ ಸಲ್ಮಾನ್‌ಖಾನ್ ನಜರ್‌ಬಾದ್ ಠಾಣಾ ವ್ಯಾಪ್ತಿಯಲ್ಲಿ ಎರಡು ಕಳವು ಪ್ರಕರಣದಲ್ಲಿ ಆರೋಪಿ ಯಾಗಿದ್ದ ಎಂಬುದೂ ವಿಚಾರಣೆಯಿಂದ ತಿಳಿಯಿತು.

ಕಳವು ಮಾಲು ಸ್ವೀಕರಿಸುತ್ತಿದ್ದ ಮಹಮದ್ ಪರ್ವೀಜ್ ವಿರುದ್ಧ ಮಂಡ್ಯ ಜಿಲ್ಲೆಯ ಪಾಂಡವಪುರ, ಬಸರಾಳು, ನಾಗಮಂಗಲ ಹಾಗೂ ಮೈಸೂರಿನ ಎನ್.ಆರ್. ಠಾಣೆ ಯಲ್ಲಿ ಈ ಹಿಂದೆ ಐಪಿಸಿ ಸೆಕ್ಷನ್ ೪೫೪ ಮತ್ತು ೩೮೦ ರೀತ್ಯಾ ಪ್ರಕರಣ ದಾಖಲಾಗಿದೆ ಎಂಬುದು ತಿಳಿಯಿತು.

ಡಿಸಿಪಿಗಳಾದ ಪ್ರದೀಪ್ ಗುಂಟಿ, ಗೀತಾ ಪ್ರಸನ್ನ ಅವರ ನಿರ್ದೇಶನದಂತೆ, ಎನ್.ಆರ್.ಎಸಿಪಿ ಶಿವಶಂಕರ ಮಾರ್ಗ ದರ್ಶನದಲ್ಲಿ ನಡೆದ ಪತ್ತೆ ಕಾರ್ಯಾಚರಣೆಯಲ್ಲಿ ಎನ್.ಆರ್. ಠಾಣೆ ಇನ್‌ಸ್ಪೆಕ್ಟರ್ ಅಜರುದ್ದೀನ್, ಸಬ್‌ಇನ್‌ಸ್ಪೆಕ್ಟರ್ ಜೈಕೀರ್ತಿ, ಎಎಸ್‌ಐ ಪಾಪಣ್ಣ, ಸಿಬ್ಬಂದಿಗಳಾದ ಆರ್.ಆರ್. ಮಂಜು ನಾಥ, ವೈ.ಟಿ.ಮಹೇಶ, ದೊಡ್ಡೇಗೌಡ, ಎಸ್.ರಮೇಶ್, ಸಿ.ಸುನಿಲ್‌ಕುಮಾರ್, ಕೆ.ಈರೇಶ ಪಾಲ್ಗೊಂಡಿದ್ದರು.

Translate »