ಲಸಿಕೆ, ಟೂಲ್‌ಕಿಟ್ ಹಂಚಿಕೆಯಲ್ಲಿ ಹಗರಣ ಆರೋಪ: ಕಟ್ಟಡ ಕಾರ್ಮಿಕರ ಪ್ರತಿಭಟನೆ
ಮೈಸೂರು

ಲಸಿಕೆ, ಟೂಲ್‌ಕಿಟ್ ಹಂಚಿಕೆಯಲ್ಲಿ ಹಗರಣ ಆರೋಪ: ಕಟ್ಟಡ ಕಾರ್ಮಿಕರ ಪ್ರತಿಭಟನೆ

September 4, 2021

ಮೈಸೂರು, ಸೆ.೩(ಆರ್‌ಕೆಬಿ)- ಕಾರ್ಮಿ ಕರ ಹಿತ ಕಾಯಬೇಕಿದ್ದ ಕಾರ್ಮಿಕ ಇಲಾಖೆ ಮತ್ತು ಕಾರ್ಮಿಕ ಮಂಡಳಿ ಕಮಿಷನ್ ಆಸೆಗಾಗಿ ಅನಗತ್ಯ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಹಗರಣಗಳನ್ನು ನಡೆಸುತ್ತಿವೆ ಎಂದು ಆರೋಪಿಸಿ ಕರ್ನಾ ಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘದ ಕಾರ್ಯಕರ್ತರು ಎಐಯುಟಿ ಯುಸಿ ನೇತೃತ್ವದಲ್ಲಿ ಮೈಸೂರಿನ ಕುವೆಂಪು ನಗರದಲ್ಲಿರುವ ಕಾರ್ಮಿಕ ಇಲಾಖೆ ಕಚೇರಿ ಬಳಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಸÀರ್ಕಾರ ಈಗಾಗಲೇ ಸಾರ್ವಜನಿಕರಿಗೆ ಉಚಿತವಾಗಿ ಲಸಿಕೆ ನೀಡುತ್ತಿದ್ದರೂ, ಖಾಸಗಿ ಆಸ್ಪತ್ರೆಗಳ ಮೂಲಕ ಕಾರ್ಮಿಕರಿಗೆ ಲಸಿಕೆ ನೀಡಲು ಕಾರ್ಮಿಕ ಮಂಡಳಿ ೩೧೨ ಕೋಟಿ ರೂ. ಪ್ರಸ್ತಾವನೆ ಸಿದ್ದಪಡಿಸಿದೆ. ಕಾರ್ಮಿ ಕರ ದುಡಿಮೆಯಿಂದ ಮಂಡಳಿಯಲ್ಲಿ ಸಂಗ್ರಹ ವಾಗಿರುವ ಹಣವನ್ನು ಖಾಸಗಿ ಆಸ್ಪತ್ರೆ ಗಳಿಗೆ ಪಾವತಿಸಿ ಆ ಮೂಲಕ ಕಾರ್ಮಿ ಕರಿಗೆ ಲಸಿಕೆ ಕೊಡಿಸುವ ಉದ್ದೇಶದ ಲಸಿಕೆ ಹಗರಣ ನಡೆಯುತ್ತಿದೆ. ಸರ್ಕಾರವೇ ನೀಡು ತ್ತಿರುವ ಉಚಿತ ಲಸಿಕೆಯನ್ನು ಈಗಾಗಲೇ ಹಲವು ಕಾರ್ಮಿಕರು ಪಡೆದುಕೊಂಡಿ ದ್ದಾರೆ. ಹೀಗಿದ್ದರೂ ಕೋಟ್ಯಾಂತರ ರೂ. ಪ್ರಸ್ತಾವನೆ ಸಿದ್ಧಪಡಿಸುವ ಅಗತ್ಯವೇನಿದೆ? ಕೂಡಲೇ ಈ ಪ್ರಸ್ತಾವನೆಯನ್ನು ಕೈ ಬಿಟ್ಟು, ಸರ್ಕಾರದಿಂದ ಕಾರ್ಮಿಕರಿಗೆ ಉಚಿತ ಲಸಿಕೆ ನೀಡುವ ವ್ಯವಸ್ಥೆ ಮಾಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಕಾರ್ಮಿಕರಿಗೆ ನೀಡಲಾಗುವ ಟೂಲ್ ಕಿಟ್ ಖರೀದಿಯಲ್ಲೂ ಹಗರಣ ನಡೆದಿದೆ. ಮಾರುಕಟ್ಟೆ ಬೆಲೆಗಿಂತಲೂ ಅಧಿಕ ಹಣ ಪಾವತಿಸಿ, ಟೂಲ್ ಕಿಟ್ ಖರೀದಿಸ ಲಾಗಿದೆ ಎಂದು ದೂರಿದರು.ಎಐಯುಟಿಯುಸಿ ಜಂಟಿ ಕಾರ್ಯದರ್ಶಿ ಮುದ್ದುಕೃಷ್ಣ ಮಾತನಾಡಿ, ಕಾರ್ಮಿಕ ಇಲಾಖೆಯು ಕಾರ್ಮಿಕರಿಗೆ ಪ್ರಯೋಜನ ವಾಗುವ ಕಾರ್ಯಕ್ರಮ ರೂಪಿಸದೇ ಸಚಿ ವರು ಮತ್ತು ಅಧಿಕಾರಿಗಳಿಗೆ ಅನುಕೂಲ ವಾಗುವಂತಹ ಕಾರ್ಯಕ್ರಮ ರೂಪಿಸಿ, ಕಮಿಷನ್ ದಂಧೆ ನಡೆಸಲಾಗುತ್ತಿದೆ. ಕಾರ್ಮಿ ಕರ ಮಕ್ಕಳ ವಿದ್ಯಾರ್ಥಿ ವೇತನ, ಮದುವೆ ಸಹಾಯ ಧನ ನೀಡಬೇಕಾದ ಅರ್ಜಿಗಳನ್ನು ೩ ವರ್ಷಗಳು ಕಳೆದರೂ ವಿಲೇವಾರಿ ಮಾಡಿಲ್ಲ. ಆದರೆ ಕಮಿಷನ್‌ಗಾಗಿ ಟೂಲ್ ಕಿಟ್ ಖರೀದಿಸಿ ತ್ವರಿತಗತಿಯಲ್ಲಿ ಕಾರ್ಮಿಕರಿಗೆ ವಿತರಿಸುತ್ತಿದೆ ಎಂದು ಆರೋಪಿಸಿದರು.

ಒಂದು ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿರುವ ಜಿಲ್ಲೆಯ ಕಾರ್ಮಿಕರ ಪೈಕಿ ೫೬ ಸಾವಿರ ಮಂದಿಗೆ ಮಾತ್ರ ಲಾಕ್‌ಡೌನ್ ಪರಿಹಾರ ನೀಡಿ, ಉಳಿದ ಕಾರ್ಮಿಕರನ್ನು ವಂಚಿಸ ಲಾಗಿದೆ ಎಂದು ಆರೋಪಿಸಿದರು. ಪ್ರತಿಭಟನೆ ಬಳಿಕ ಕಾರ್ಮಿಕ ಅಧಿಕಾರಿ ರಾಜೇಶ್ ಕೆ.ಜಾಧವ್ ಅವರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಸಂಘದ ಪದಾಧಿಕಾರಿಗಳಾದ ದೊಡ್ಡಕಾನ್ಯ ರಾಜು, ಸಿದ್ದಯ್ಯ, ಪುಟ್ಟರಾಜು, ಕೆ.ಆರ್.ಮಿಲ್ ವಾಸು ಇನ್ನಿತರರು ಉಪಸ್ಥಿತರಿದ್ದರು.

Translate »