ಉಗ್ರತ್ವಕ್ಕೆ ಶರಣರ ತತ್ವಗಳಲ್ಲಿ ಪರಿಹಾರವಿದೆ
ಮೈಸೂರು

ಉಗ್ರತ್ವಕ್ಕೆ ಶರಣರ ತತ್ವಗಳಲ್ಲಿ ಪರಿಹಾರವಿದೆ

September 3, 2021

ಮೈಸೂರು, ಸೆ.2(ಎಂಟಿವೈ)- ತ್ರಿವಿಧ ದಾಸೋಹಕ್ಕೆ ಹೆಸರಾಗಿದ್ದ ಸಿದ್ದಗಂಗಾ ಮಠ ಅಭಿನವ ಅನುಭವ ಮಂಟಪ ದಂತಿ ದ್ದರೆ, ಮಾತೃಹೃದಯಿಯಂತಿದ್ದ ಡಾ.ಶಿವ ಕುಮಾರ ಸ್ವಾಮೀಜಿ ಅಭಿನವ ಬಸವಣ್ಣ ನಂತೆ ಬದುಕಿದರು ಎಂದು ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿ. ಸೋಮಶೇಖರ್ ಅಭಿಪ್ರಾಯಪಟ್ಟಿದ್ದಾರೆ.

ಮೈಸೂರಿನ ಹೊಸಮಠದಲ್ಲಿ ಪ್ರಾಚ್ಯ ವಿದ್ಯಾ ಸಂಶೋಧನಾಲಯ ನಿವೃತ್ತ ನಿರ್ದೇಶಕ ಡಾ.ಎಸ್.ಶಿವರಾಜಪ್ಪ ರಚಿಸಿರುವ ‘ಮಾದೇ ಶ್ವರರ ಸಾಹಿತ್ಯಿಕ ನೆಲೆಗಳ ಹುಡುಕಾಟ’ ಮತ್ತು ‘ನಡೆದಾಡಿದ ದೇವರು’ ಕೃತಿಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಡಾ.ಎಸ್.ಶಿವರಾಜಪ್ಪ ಅವರು 15 ಮತ್ತು 20ನೇ ಶತಮಾನದ ಇತಿಹಾಸ ಪುರುಷರ ಬಗ್ಗೆ ಕೃತಿ ರಚಿಸಿದ್ದಾರೆ. ಈ ಮಹಾ ಪುರುಷರ ಬಗ್ಗೆ ಯುವ ಪೀಳಿಗೆಗೆ ಪರಿಚಯಿ ಸುವ ಕೆಲಸ ಮಾಡಿದ್ದಾರೆ. ವೀರಶೈವ ಮಠ ಗಳು ಅಕ್ಷರ, ಅನ್ನ ದಾಸೋಹ ಮತ್ತು ಶೈಕ್ಷ ಣಿಕ ಸಂಸ್ಥೆಗಳನ್ನು ಆರಂಭಿಸದಿದ್ದರೆ ಇಂದು ಸಮಾಜ ಅಂಧಕಾರದಲ್ಲಿರುತ್ತಿತ್ತು. ಶರಣರು ಮಾತೃ ಹೃದಯಿಗಳು ಎಂದು ಶ್ಲಾಘಿಸಿದರು.

ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ಘೋರ ಕೃತ್ಯಗಳನ್ನು ಎಸಗುತ್ತಿದ್ದಾರೆ. ಅವರಿಗೆ ಮಾನವೀಯತೆ ಎಂಬುದೇ ತಿಳಿದಿಲ್ಲ. ಅಂತಹ ಕೃತ್ಯಗಳಿಗೆ ಶರಣರ ತತ್ವಗಳಲ್ಲಿ ಪರಿಹಾರ ವಿದೆ. ಶರಣರೆಂದರೆ ಮಾನವೀಯತೆ ಪ್ರತೀಕ. ಬಸವಣ್ಣ ಬೋಧಿಸಿದ ಸೂತ್ರಗಳು ಇಂದಿಗೂ, ಎಂದಿಗೂ ಪ್ರಸ್ತುತ. ಆತನ ಸಂವಿಧಾನ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ನೀಡು ತ್ತದೆ. ನಮ್ಮ ದೇಶದ ಸಂವಿಧಾನವನ್ನು ಅನೇಕ ಬಾರಿ ಬದಲಾಯಿಸಿದ್ದೇವೆ. ಆದರೆ ಅಣ್ಣನ ಸಂವಿಧಾನವನ್ನು ಬದಲಾಯಿಸಿ ಕೊಳ್ಳಲು ಸಾಧ್ಯವಿಲ್ಲ. ಬಸವಣ್ಣ ದೀನ ದಲಿತರ ದನಿಯಾಗಿದ್ದ, ಮಾದೇಶ್ವರರು ಬುಡಕಟ್ಟು ಮತ್ತು ಕಾಡು ಜನರಿಗೆ ದನಿ ನೀಡಿದರು ಎಂದು ತಿಳಿಸಿದರು.

ನಿವೃತ್ತ ಪ್ರಾಧ್ಯಾಪಕಿ ಪೆÇ್ರ.ಸಿ.ಜಿ.ಉಷಾ ದೇವಿ ಮಾತನಾಡಿ, ಮಾದೇಶ್ವರರು ಕಾಡಿಗೆ ಹೋಗಿ ಅಲ್ಲಿನ ಬುಡಕಟ್ಟು, ಕಾಡಿನ ಜನತೆಗೆ ಶಿಕ್ಷಣ ನೀಡಿ ಅಭಿವೃದ್ಧಿಗೊಳಿಸಿದವರು. ಸಿದ್ಧಗಂಗಾ ಶ್ರೀಗಳು ನಾಡಿನಲ್ಲಿ ಇದ್ದುಕೊಂಡು ಗ್ರಾಮೀಣ ಭಾಗದ ಜನತೆಯನ್ನು ಬದ ಲಾಯಿಸಿದರು. ಇಂಥ ಮಹನೀಯರ ಬಗ್ಗೆ ಡಾ.ಎಸ್.ಶಿವರಾಜಪ್ಪ ಪುಸ್ತಕ ರಚಿಸಿದ್ದಾರೆ. ಇಬ್ಬರ ವ್ಯಕ್ತಿತ್ವವನ್ನು ಪುಸ್ತಕದ ಮೂಲಕ ಸಂಪೂರ್ಣವಾಗಿ ಕಟ್ಟಿಕೊಟ್ಟಿದ್ದಾರೆ. ಮಾದೇ ಶ್ವರರ ಕೃತಿಯಲ್ಲಿ ಜನಪದ ಗೀತೆಗಳನ್ನು ಸೇರಿ ಸುವ ಮೂಲಕ ಜನಪದ ಸಾಹಿತ್ಯವನ್ನು ದಾಖಲಿಸುವ ಕೆಲಸ ಮಾಡಿದ್ದಾರೆ ಎಂದರು. ಕಾರ್ಯಕ್ರಮದ ಸಾನಿಧ್ಯವನ್ನು ಹೊಸಮಠ ಪೀಠಾಧ್ಯಕ್ಷ ಶ್ರೀ ಚಿದಾನಂದ ಸ್ವಾಮೀಜಿ, ಕೃತಿ ಕರ್ತೃ ಡಾ.ಎಸ್.ಶಿವರಾಜಪ್ಪ, ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಹೆಳವರಹುಂಡಿ ಸಿದ್ದಪ್ಪ, ಕನ್ನಡ ಸಾಹಿತ್ಯ ಕಲಾಕೂಟ ಅಧ್ಯಕ್ಷ ಎಂ.ಚಂದ್ರಶೇಖರ್ ಇತರರು ಇದ್ದರು.

Translate »