ಏಷ್ಯಾ ಕಪ್: ಪಾಕ್ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು
ಮೈಸೂರು

ಏಷ್ಯಾ ಕಪ್: ಪಾಕ್ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು

September 20, 2018

ದುಬೈ: ಯುಎಇನಲ್ಲಿ ನಡೆ ಯುತ್ತಿರುವ ಏಷ್ಯಾ ಕಪ್ ಟೂರ್ನಿಯ ‘ಎ’ಗುಂಪಿನ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ 8 ವಿಕೆಟ್‍ಗಳ ಭರ್ಜರಿ ಗೆಲುವು ಸಾಧಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಭುವನೇಶ್ವರ್ ಕುಮಾರ್ ಹಾಗೂ ಕೇದರ್ ಜಾಧವ್ ಅವರ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿ 43.1 ಓವರ್ ಗಳಲ್ಲಿ 162ರನ್‍ಗಳಿಗೆ ಆಲೌಟಾಯಿತು. ಅಲ್ಪ ಮೊತ್ತದ ಗುರಿ ಬೆನ್ನತ್ತಿದ್ದ ಭಾರತಕ್ಕೆ ನಾಯಕ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಬಿರುಸಿನ ಬ್ಯಾಟಿಂಗ್ ನೆರವಿ ನಿಂದ 29 ಓವರ್‍ಗಳಲ್ಲಿ 2 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿ, ಗೆಲುವಿನ ನಗೆ ಬೀರಿತು.

ಟೂರ್ನಿಯಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ ಭಾರತ, ಪಾಕಿ ಸ್ತಾನದ ವಿರುದ್ಧವು ಉತ್ತಮ ಪ್ರದರ್ಶನ ಮುಂದುವರಿಸಿದ್ದು, ಪಾಕ್ ಬೌಲರ್ ಗಳನ್ನು ಸಮರ್ಥವಾಗಿ ಎದುರಿಸಿದೆ. ನಾಯಕ ರೋಹಿತ್ ಶರ್ಮಾ 39 ಎಸೆತಗಳಲ್ಲಿ 6 ಬೌಂಡರಿ, 3 ಸಿಕ್ಸರ್‍ನೊಂದಿಗೆ 52 ಹಾಗೂ ಧವನ್ 54 ಎಸೆತಗಳಲ್ಲಿ 6 ಬೌಂಡರಿ ಹಾಗೂ ಒಂದು ಸಿಕ್ಸರ್‍ನೊಂದಿಗೆ 46 ರನ್ ಗಳಿಸಿದರು. ಉಳಿದಂತೆ ದಿನೇಶ್ ಕಾರ್ತಿಕ್ 31, ಅಂಬಾಟಿ ರಾಯುಡು 31 ರನ್ ಗಳಿಸಿ ಅಜೇಯರಾಗಿ ಉಳಿ ಯುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು. ಪಾಕ್ ಪರ ಫಹೀಮ್ ಅಶ್ರಫ್ ಹಾಗೂ ಶದಾಬ್ ಖಾನ್ ತಲಾ ಒಂದು ವಿಕೆಟ್ ಪಡೆದರು.

ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಆರಂಭದಲ್ಲೇ ಆಘಾತ ಎದು ರಿಸಿತು. ಆರಂಭಿಕರಾದ ಇಮಾಮ್ ಉಲ್ ಹಕ್ 2, ಫಖಾರ್ ಜಮಾನ್ 0 ಅವರನ್ನು ಭುವನೇಶ್ವರ್ ಕುಮಾರ್ ಬೇಗನೇ ಪೆವಿಲಿ ಯನ್‍ಗೆ ಅಟ್ಟಿದರು. ಈ ಹಂತದಲ್ಲಿ ಜೊತೆ ಯಾದ ಬಾಬರ್ ಅಜಾಮ್ 47 ಹಾಗೂ ಮಾಜಿ ನಾಯಕ ಶೋಯಿಬ್ ಮಲಿಕ್ 43ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಈ ವೇಳೆ ದಾಳಿಗಿಳಿದ ಕುಲ್‍ದೀಪ್ ಯಾದವ್ ಬಾಬರ್‍ರನ್ನು ಕ್ಲೀನ್ ಬೌಲ್ಡ್ ಮಾಡಿದರು. ಅಂಬಟಿ ರಾಯುಡು ಅವರ ಅದ್ಭುತ ಫೀಲ್ಡಿಂಗ್‍ನಿಂದ ಮಲ್ಲಿಕ್ ಅವರನ್ನು ರನೌಟ್ ಮಾಡಿದರು.

ಉಳಿದಂತೆ ಪಾಕ್ ಪರ ಸರ್ಫರಾಜ್ ಅಹ್ಮದ್ 6, ಆಸಿಫ್ ಅಲಿ 9, ಶದಬ್ ಖಾನ್ 8, ಮಹಮ್ಮದ್ ಆಮೀರ್ 18, ಹಸನ್ ಅಲಿ 1 ಹಾಗೂ ಉಸ್ಮಾನ್ ಖಾನ್ 0 ರನ್ ಗಳಿಸಿದರು. ಭಾರತದ ಪರ ಭುವನೇಶ್ವರ್ ಕುಮಾರ್, ಕೇದರ್ ಜಾಧವ್ ತಲಾ ಮೂರು, ಜಸ್ಪ್ರೀತ್

ಬುಮ್ರಾ ಎರಡು ಹಾಗೂ ಕುಲ್ ದೀಪ್ ಯಾದವ್ ಒಂದು ವಿಕೆಟ್ ಗಳಿಸಿದರು.
ಗೆಲುವಿನ ನಾಗಾಲೋಟ ಮುಂದುವರಿ ಸಿರುವ ಭಾರತ ಸೆ. 21ರಂದು ನಡೆಯ ಲಿರುವ ಸೂಪರ್ ಫೋರ್ ಹಂತದ ಪಂದ್ಯದಲ್ಲಿ ಬಾಂಗ್ಲಾದೇಶ, ಸೆ. 23ರಂದು ಮತ್ತೆ ಪಾಕಿಸ್ತಾನ, ಸೆ.25ರಂದು ಅಫ್ಘಾನಿ ಸ್ತಾನದೊಂದಿಗೆ ಸೆಣಸಲಿದೆ.

Translate »