ಮರಿಮಲ್ಲಪ್ಪ ಪಿಯು ಕಾಲೇಜು ನಿವೃತ್ತ ಪ್ರಿನ್ಸಿಪಾಲ್ ಡಾ.ಬಿ.ಎಸ್.ಪರ್ವತರಾಜುಗೆ `ಅಮರವಾಣಿ ಪ್ರಶಸ್ತಿ’ ಪ್ರದಾನ
ಮೈಸೂರು

ಮರಿಮಲ್ಲಪ್ಪ ಪಿಯು ಕಾಲೇಜು ನಿವೃತ್ತ ಪ್ರಿನ್ಸಿಪಾಲ್ ಡಾ.ಬಿ.ಎಸ್.ಪರ್ವತರಾಜುಗೆ `ಅಮರವಾಣಿ ಪ್ರಶಸ್ತಿ’ ಪ್ರದಾನ

September 20, 2018

ಮೈಸೂರು: ಮರಿಮಲ್ಲಪ್ಪ ಪಿಯು ಕಾಲೇಜಿನ ನಿವೃತ್ತ ಪ್ರಾಂಶುಪಾಲ ವಿದ್ವಾನ್ ಡಾ.ಬಿ.ಎಸ್. ಪರ್ವತರಾಜು ಅವರಿಗೆ ಈ ಸಾಲಿನ `ಅಮರವಾಣಿ ಪ್ರಶಸ್ತಿ’ಯನ್ನು ಬುಧವಾರ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿವೃತ್ತ ಕನ್ನಡ ಪ್ರಾಧ್ಯಾಪಕ ಪ್ರೊ.ಎನ್.ಎಸ್. ತಾರಾನಾಥ್ ಪ್ರದಾನ ಮಾಡಿದರು.

ಜೆಎಲ್‍ಬಿ ರಸ್ತೆಯ ಐಡಿಯಲ್ ಜಾವಾ ರೋಟರಿ ಸಭಾಂಗಣದಲ್ಲಿ ರೋಟರಿ ಕ್ಲಬ್ ಮೈಸೂರು ಮಿಡ್‍ಟೌನ್ ವತಿಯಿಂದ ಪ್ರೊ.ಎಂ.ಜಿ. ನಂಜುಂಡಾರಾಧ್ಯ ಸ್ಮಾರಕ, ರೋಟರಿ ಮೈಸೂರು ಮಿಡ್‍ಟೌನ್ -ಅಮರವಾಣಿ ಪ್ರಶಸ್ತಿಯನ್ನು ಪ್ರದಾನ ಮಾಡಿದರು.

ನಂತರ ಪ್ರೊ.ಎನ್.ಆರ್.ತಾರಾನಾಥ್ ಮಾತನಾಡಿ, ಪ್ರಸ್ತುತ ಕಾಲಘಟ್ಟದಲ್ಲಿ ಕನ್ನಡ ಕಲಿಸುವುದೇ ಕಷ್ಟದ ಕೆಲಸ ಇನ್ನು ಸಂಸ್ಕøತ ಕಲಿಸಲು ಸಾಧ್ಯವೇ? ಎಂದು ಪ್ರಶ್ನಿಸಿದ ಅವರು, ಇಂಥಹ ಸಂದರ್ಭದಲ್ಲಿ ಡಾ.ಬಿ.ಎಸ್.ಪರ್ವತ ರಾಜು ಅವರು, ರಾಜ್ಯದ ನಾನಾ ಭಾಗಗಳಲ್ಲಿ ಸಂಸ್ಕøತ ಕಲಿಕಾ ಶಿಬಿರಗಳನ್ನು ಆಯೋಜಿಸಿ, ಕಳೆದ 36 ವರ್ಷ ಗಳಿಂದ ಯುವ ಪೀಳಿಗೆಗೆ ಸಂಸ್ಕøತ ಪರಿಚಯಿಸುತ್ತಿ ರುವುದು ನಿಜಕ್ಕೂ ಉತ್ತಮ ವಿಚಾರ ಎಂದರು.

ಮೈಸೂರು, ಬೆಂಗಳೂರು, ಶಿವಮೊಗ್ಗ, ಕೊಡಗು, ತಮಿಳುನಾಡಿನಲ್ಲಿ ಸಂಸ್ಕøತ ಕಲಿಕಾ ಶಿಬಿರಗಳನ್ನು ಆಯೋಜಿಸಿದ್ಧಾರೆ. ಅಲ್ಲದೆ, ನವದೆಹಲಿಯ `ಸಂಸ್ಕøತ ಭಾರತೀ’, `ರಾಷ್ಟ್ರೀಯ ಸಂಸ್ಕøತ ಸಂಸ್ಥಾನ’, ಇಂದಿರಾ ಗಾಂಧಿ ರಾಷ್ಟ್ರೀಯ ಕಲಾಕೇಂದ್ರ(ಐಜಿಎನ್‍ಸಿಎ), ಮೈಸೂರಿನ ಕೇಂದ್ರೀಯ ಭಾಷಾ ಸಂಸ್ಥಾನ(ಸಿಐಐಎಲ್), ಪ್ರಾಚ್ಯ ವಿದ್ಯಾ ಸಂಶೋಧನಾಲಯ(ಓಆರ್‍ಐ-ಮೈವಿವಿ), ಬೆಂಗ ಳೂರಿನ `ವೇದ ವಿಜ್ಞಾನ ಗುರುಕುಲ’, ಮೊದಲಾದ ಸಂಸ್ಥಗ ಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದು, ಇದೀಗ ತುಮಕೂರು ವಿವಿ ಸಂಸ್ಕøತ ವಿಭಾಗದ 6 ಸಂಶೋಧಕ ವಿದ್ಯಾರ್ಥಿ ಗಳಿಗೆ ಮಾರ್ಗದರ್ಶನರಾಗಿದ್ಧಾರೆ.ಇಂತ ಹ ಸಾಧಕರಿಗೆ ರೋಟರಿ ಮಿಡ್‍ಟೌನ್ ವತಿಯಿಂದ ಅಮರವಾಣಿ ಪ್ರಶಸ್ತಿ ನೀಡುತ್ತಿರುವುದು ಉತ್ತಮ ಬೆಳವಣಿಗೆ ಎಂದರು.

ಇವರ ಸಾಧನೆಗಾಗಿ ಸಂಘ-ಸಂಸ್ಥೆಗಳು ನೀಡಿರುವ ಪ್ರಶಸ್ತಿಗಳಾದ `ಸರ್ವಜ್ಞ ಪೀಠ ಪ್ರಶಸ್ತಿ’, `ಸಂಸ್ಕøತ ವಿದ್ಯಾ ರತ್ನ ಪ್ರಶಸ್ತಿ’, `ಸೋಂಪುರ ಬಸಪ್ಪ ರೋಟರಿ ಅತ್ಯುತ್ತಮ ಶಿಕ್ಷಕ’ ಪ್ರಶಸ್ತಿ ಲಭಿಸಿದೆ. ಭಾರತೀಯ ಜ್ಯೋತಿರ್ವಿಜ್ಞಾನ ಸಂಸ್ಥೆಯು ಇವರ ಸಾಧನೆಯನ್ನು ಗುರುತಿಸಿದೆ. ಕಂಚೀ ಪೀಠದ ಜಗದ್ಗುರುಗಳಿಂದ `ಅತ್ಯುತ್ತಮ ಸಂಸ್ಕøತ ಶಿಕ್ಷಕ ಪ್ರಶಸ್ತಿ’ ನೀಡಿ, ಆಶೀರ್ವದಿಸಿದ್ದಾರೆ. 2015ರ ಸಾಲಿನಲ್ಲಿ `ಡಾ.ರಾಧಾಕೃಷ್ಣನ್ ಶಿಕ್ಷಣ ರತ್ನ ರಾಷ್ಟ್ರಪ್ರಶಸ್ತಿ, ಶ್ರೀ ಸಿದ್ದಗಂಗಾ ಕ್ಷೇತ್ರದಿಂದ `ಸಂಘ ಸಿರಿ’ ಪ್ರಶಸ್ತಿ ಹಾಗೂ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನಿಂದಲೂ ಇವರನ್ನು ಸನ್ಮಾನಿಸಲಾಗಿದೆ ಎಂದರು.

ಸಂಸ್ಕøತ ವಿದ್ವಾನ್ ಪ್ರೊ.ಎಂ.ಜಿ.ನಂಜುಂಡಾರಾಧ್ಯರ ಸ್ಮರಣಾರ್ಥವಾಗಿ ನೀಡುತ್ತಿರುವ ಅಮರವಾಣಿ ಪ್ರಶಸ್ತಿ, ನಗರದ ವಿವಿಧ ಸಂಘ-ಸಂಸ್ಥೆಗಳು ನೀಡುವ ಗಣ್ಯ ಪ್ರಶಸ್ತಿಗಳ ಸಾಲಿನಲ್ಲಿ ಅತ್ಯುತ್ತಮ ಪ್ರಶಸ್ತಿ ಇದಾಗಿದೆ ಎಂದರು. ವೇದಿಕೆಯಲ್ಲಿ ರೋ.ಡಾ.ಎಂ.ಎನ್. ಭೀಮೇಶ್, ರೋಟರಿ ಮೈಸೂರು ಮಿಡ್‍ಟೌನ್ ಅಧ್ಯಕ್ಷ ರೋ.ಡಾ.ಕೆ.ಎ.ಪ್ರಹ್ಲಾದ್, ಕಾರ್ಯದರ್ಶಿ ರೋ.ಎಂ.ಪಿ.ಗೋಪಾಲಕೃಷ್ಣ ಸೇರಿದಂತೆ ಇತರರಿದ್ದರು.

Translate »