ಶಿಕ್ಷಿತರು ಮತಾಂಧತೆ, ಜಾತಿಗೆ ಸೀಮಿತರಾಗಬಾರದು
ಮೈಸೂರು

ಶಿಕ್ಷಿತರು ಮತಾಂಧತೆ, ಜಾತಿಗೆ ಸೀಮಿತರಾಗಬಾರದು

September 20, 2018

ಮೈಸೂರು: ಸಮಾಜದಲ್ಲಿ ಜಾತಿ, ಧರ್ಮದ ಮತಾಂಧತೆ ಹೆಚ್ಚಾಗಿದ್ದು, ಯುವ ಸಮುದಾಯ ಇವುಗಳ ಬಿಕ್ಕಟ್ಟಿಗೆ ಒಳಗಾಗದೆ ಉತ್ತಮ ಶಿಕ್ಷಣ ಪಡೆದು ಸಾಧನೆಗೈಯ್ಯಬೇಕು ಎಂದು ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಲಕ್ಷ್ಮೀಪುರಂನ ಸರ್ಕಾರಿ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿನಲ್ಲಿ ಜ್ಞಾನ ಬುತ್ತಿ ಸಂಸ್ಥೆ ಬುಧವಾರ ಆಯೋಜಿಸಿದ್ದ ಬ್ಯಾಂಕಿಂಗ್ ನೇಮಕಾತಿ ಪರೀಕ್ಷೆ, ಕನ್ನಡ ಭಾಷಾ ಪಿ.ಯು ಉಪನ್ಯಾಸಕರ ನೇಮಕಾತಿ ಪರೀಕ್ಷೆ ಉಚಿತ ತರಬೇತಿ ಶಿಬಿರವನ್ನು ಉದ್ಘಾ ಟಿಸಿ ಮಾತನಾಡಿದ ಅವರು, ದೇಶದಲ್ಲಿ ಐಕ್ಯತೆ ಎಂಬುದು ಅಗತ್ಯವಾಗಿದ್ದು, ಸಾಮಾಜಿಕ ಹಾಗೂ ಶೈಕ್ಷಣಿಕ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲಿ ಐಕ್ಯತೆಯನ್ನು ಕಾಪಾಡಿಕೊಳ್ಳ ಬೇಕಿದೆ ಎಂದರು. ಇಂದಿನ ಸ್ಪರ್ಧಾತ್ಮಕ ಯುಗ ದಲ್ಲಿ ವಿದ್ಯಾರ್ಥಿಗಳು ಪ್ರತಿಯೊಂದು ವಿಷಯದ ಬಗ್ಗೆ ಮಾಹಿತಿ ಪಡೆದುಕೊಂಡು ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು. ಆಗ ಮಾತ್ರ ಯಶಸ್ಸು ಗಳಿಸಲು ಸಾಧ್ಯ. ನಾವು ಗ್ರಾಮೀಣ ಭಾಗದ ವರು ಇಂಗ್ಲಿಷ್ ಭಾಷೆಯ ಹಿಡಿತವಿಲ್ಲ ಎಂಬ ಅಂಜಿಕೆಯನ್ನು ಮನಸ್ಸಿನಿಂದ ತೆಗೆದು ಹಾಕಬೇಕು. ಸೂಕ್ತ ಮಾರ್ಗದರ್ಶನ ಹಾಗೂ ಮಾಹಿತಿ ಪಡೆದುಕೊಂಡು ಸಾಧನೆಗೈಯ್ಯ ಬೇಕು ಎಂದು ಸಲಹೆ ನೀಡಿದರು.

ಜಾತಿ, ಧರ್ಮದ ಮತಾಂಧತೆಯು ಸಾಧನೆ ಮಾಡುವ ಯುವ ಸಮುದಾಯವನ್ನು ಬೇರೆಡೆಗೆ ಸೆಳೆದು ಬಿಡುತ್ತದೆ ಹಾಗಾಗಿ ಶಿಕ್ಷಿತರು ಜಾತಿ, ಮತಾಂಧತೆಗೆ ಸೀಮಿತ ವಾಗಬಾರದು. ಸ್ವಾಭಿಮಾನದಿಂದ ಸ್ವಾತಂತ್ರ್ಯ ವಾಗಿ ಬದುಕಬೇಕು. ಸರ್ಕಾರಿ ಅಥವಾ ಖಾಸಗಿ ಉದ್ಯೋಗವನ್ನು ಪಡೆದು ಉತ್ತಮ ಜೀವನ ರೂಪಿಸಿಕೊಳ್ಳಿ. ಆದರೆ ಯಾರ ಮೇಲೂ ಅವಲಂಬಿತರಾಗಬೇಡಿ ಎಂದು ಸಲಹೆ ನೀಡಿದರು. ಜ್ಞಾನಬುತ್ತಿಯ ಮೂಲಕ ಸತ್ಯನಾರಾಯಣ್ ಅವರು ಗ್ರಾಮೀಣ ಭಾಗದ ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತವಾಗಿ ತರಬೇತಿ ನೀಡುತ್ತಿರುವುದು ಶ್ಲಾಘನೀಯ. ಈಗಾಗಲೇ ಸುಮಾರು ಒಂದೂ ವರೆ ಲಕ್ಷ ಮಂದಿಗೆ ಉಚಿತ ತರಬೇತಿ ನೀಡಿರು ವುದು ಅವರ ಸಾಧನೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾಪೆರ್Çೀರೇಷನ್ ಬ್ಯಾಂಕ್‍ನ ಉಪ ಮಹಾಪ್ರಬಂಧಕ ಕೆ.ಎಲ್.ಗಣಪತಿ, ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ, ಜ್ಞಾನಬುತ್ತಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜೈನಹಳ್ಳಿ ಸತ್ಯ ನಾರಾಯಣಗೌಡ, ಕಾರ್ಯದರ್ಶಿಗಳಾದ ರಾ.ರಾಮಕೃಷ್ಣ, ಎಚ್.ಬಾಲಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.

Translate »