ಬೇರೆ ಸಾಹಿತಿಗಳ ಕೃತಿಗಳಂತೆ ಬೇಂದ್ರೆಯವರ  ಕೃತಿಗಳು ಸಾಹಿತ್ಯ ಪ್ರೇಮಿಗಳ ಕೈ ಸೇರಲಿಲ್ಲ
ಮೈಸೂರು

ಬೇರೆ ಸಾಹಿತಿಗಳ ಕೃತಿಗಳಂತೆ ಬೇಂದ್ರೆಯವರ  ಕೃತಿಗಳು ಸಾಹಿತ್ಯ ಪ್ರೇಮಿಗಳ ಕೈ ಸೇರಲಿಲ್ಲ

September 20, 2018

ವಿಮರ್ಶಕ ಡಾ. ಹೆಚ್.ಎಸ್. ಸತ್ಯನಾರಾಯಣ ವಿಷಾದ
ಮೈಸೂರು:  ಬೇರೆ ಬೇರೆ ಸಾಹಿತಿಗಳು ಹಾಗೂ ಕವಿಗಳ ಕೃತಿಗಳು ಸಿಗುವಂತೆ ದ.ರಾ.ಬೇಂದ್ರೆಯವರ ಕೃತಿಗಳು ಸಾಹಿತ್ಯ ಪ್ರೇಮಿಗಳ ಕೈ ಸೇರಲಿಲ್ಲ ಎಂದು ವಿಮರ್ಶಕ ಚಿಕ್ಕಮಗಳೂರಿನ ಡಾ.ಹೆಚ್.ಎಸ್. ಸತ್ಯನಾರಾಯಣ ವಿಷಾದಿಸಿದ್ದಾರೆ.

ಮೈಸೂರಿನ ಮಹಾರಾಜ ಪದವಿ ಕಾಲೇಜಿನ ಜೂನಿಯರ್ ಬಿ.ಎ. ಹಾಲ್ ನಲ್ಲಿ ಬುಧವಾರ ಮಹಾರಾಜ ಕಾಲೇಜಿನ ಕನ್ನಡ ವಿಭಾಗ ಮತ್ತು ಕನ್ನಡ ಸಂಘದ ಸಂಯುಕ್ತಾಶ್ರಯದಲ್ಲಿ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ `ಬೇಂದ್ರೆ ಮತ್ತು ಅಡಿಗರ ಆಯ್ದ ಕವಿತೆಗಳು: ಅನುಭವ ಮತ್ತು ಅಭಿವ್ಯಕ್ತಿಯ ವಿಭಿನ್ನ ಸ್ವರೂಪಗಳು’ ವಿಷಯ ಕುರಿತು ಮಾತನಾಡಿದ ಅವರು, ಕನ್ನಡ ಸಾಹಿತ್ಯಲೋಕದಲ್ಲಿ ಬೇರೆ ಬೇರೆ ಸಾಹಿತಿಗಳು ಹಾಗೂ ಕವಿಗಳ ಕೃತಿಗಳು ಹೆಚ್ಚಾಗಿ ಲಭ್ಯವಾಗುತ್ತಿವೆ. ಆದರೆ ಬೇಂದ್ರೆ ಅವರ ಕೃತಿಗಳು ಮಾತ್ರ ಸರಿಯಾಗಿ ಸಿಕ್ಕುವುದಿಲ್ಲ. ಇದಕ್ಕೆ ಕಾರಣ ಅವುಗಳನ್ನು ಮುದ್ರಿಸಿಲ್ಲ. ಬೇಂದ್ರೆ ಅವರ ಮಗ ಕೃತಿ ಗಳನ್ನು ಮುದ್ರಿಸುವ ಹಕ್ಕು(ರೈಟ್ಸ್)ಗಳನ್ನು ಯಾರಿಗೂ ನೀಡದೆ ತಮ್ಮ ಬಳಿಯೇ ಇಟ್ಟುಕೊಂಡಿರುವುದೇ ಆಗಿದೆ. ಆದರೆ ಬೇರೆ ಬೇರೆ ಕವಿಗಳ ಕೃತಿಗಳನ್ನು ವಿವಿಧ ವಿವಿ ಗಳ ಪ್ರಸಾರಾಂಗಗಳು, ವಿವಿಧ ಪ್ರಕಾಶನ ಸಂಸ್ಥೆಗಳು ಪ್ರಕಟಿಸಿರುವುದರಿಂದ ಹೆಚ್ಚಿನ ಪುಸ್ತಕಗಳು, ಕೃತಿಗಳು ದೊರೆಯುತ್ತಿವೆ ಎಂದು ಹೇಳಿದರು.

ತಮಿಳುನಾಡಿನಲ್ಲಿ ಸಾಹಿತಿಗಳು ಹಾಗೂ ಕವಿಗಳ ಸಾಹಿತ್ಯ, ಕವಿತೆ, ಕಾದಂಬರಿಯನ್ನು ಸರ್ಕಾರದ ವತಿಯಿಂದಲೇ ಮುದ್ರಿಸುವ ಯೋಜನೆಯಿದೆ. ಕೆಲವು ವರ್ಷಗಳ ಕಾಲ ಮುದ್ರಣದ ರೈಟ್ಸ್ ಯಾರ ಬಳಿ ಇರು ತ್ತದೋ ಅವರು ಕೃತಿಗಳನ್ನು ಮುದ್ರಿಸದೆ ಸುಮ್ಮನಿದ್ದರೆ ಅಂತಹ ರೈಟ್ಸ್ ಅನ್ನು ಸರ್ಕಾರವೇ ಪಡೆದು ಕೃತಿಗಳನ್ನು ಪ್ರಕಟಿಸಿ ಸಾಹಿತ್ಯ ಪ್ರಿಯರ ಕೈ ಸೇರುವಂತೆ ಮಾಡು ತ್ತಿದೆ. ಇದು ಉತ್ತಮವಾದ ಬೆಳವಣಿಗೆ ಯಾಗಿದೆ. ಇಂತಹ ಕ್ರಮವನ್ನು ನಮ್ಮ ರಾಜ್ಯ ಸರ್ಕಾರ ಅನುಸರಿಸಿ ಬೇಂದ್ರೆಯ ವರ ಕೃತಿಗಳನ್ನು ಪ್ರಕಟಿಸಿ ಸಾಹಿತ್ಯಾಸಕ್ತರಿಗೆ ಲಭ್ಯವಾಗುವಂತೆ ಮಾಡಬೇಕೆಂದು ಮನವಿ ಮಾಡಿದರು.

ದ.ರಾ.ಬೇಂದ್ರೆ ಅವರ ಕಾವ್ಯ ತಂತ್ರ ಚತುರ್ಮುಖವನ್ನು ಹೊಂದಿದ್ದವು. ಅವರ ಕಾವ್ಯದಲ್ಲಿ ಶಬ್ದ, ಚಂದ್ರ, ಭಾವ ಹಾಗೂ ಧ್ವನಿಯನ್ನು ಕಾಣಬಹುದಾಗಿತ್ತು. ಇವುಗಳನ್ನೇ ತಂತ್ರ ಚತುರ್ಮುಖ ಎನ್ನ ಲಾಗಿದೆ. 1920ರಿಂದ 40ರವರೆಗೆ ಎರಡು ದಶಕದ ಅವಧಿಯಲ್ಲಿ ಕನ್ನಡ ಕಾವ್ಯ ಪರಂ ಪರೆಯನ್ನು ಮುಗಿಲೆತ್ತರಕ್ಕೆ ಕೊಂಡೊಯ್ದ ಸುವರ್ಣ ಸಮಯವಾಗಿದೆ. ದ.ರಾ.ಬೇಂದ್ರೆ, ಕುವೆಂಪು, ಮಾಸ್ತಿ ವೆಂಕಟೇಶ್ ಅಯ್ಯಂ ಗಾರ್, ಪುತಿನ, ಪಂಚಮಂಗೇಶರಾಯರು, ಗೋವಿಂದ ಪೈ ಸೇರಿದಂತೆ ಅನೇಕ ಮಹಾನ್ ದಿಗ್ಗಜರು ಕನ್ನಡ ಕಾವ್ಯ ಪರಂ ಪರೆಯನ್ನು ಬೆಳೆಸಿದ್ದಾರೆ ಎಂದರು.

ಬೇಂದ್ರೆ ಹಾಗೂ ಕುವೆಂಪು ಅವರು ಸುಲಲಿತವಾದ ಕನ್ನಡ ಭಾಷೆಯನ್ನು ತಮ್ಮ ಕಾವ್ಯದಲ್ಲಿ ಬಳಸುತ್ತಿದ್ದರು. ಈ ಇಬ್ಬರು ಮಹಾನ್ ಕವಿಗಳಿಗಿಂತ ಮೊದಲು ಇದ್ದ ಸಾಹಿತಿಗಳು ಹಾಗೂ ಕವಿಗಳು ಬಳಸುತ್ತಿದ್ದ ಭಾಷ ಸಾಹಿತ್ಯ ಉತ್ತಮವಾಗಿರಲಿಲ್ಲ. ಇದ ರಿಂದ ಬಾಷಾ ಸಾಹಿತ್ಯದ ಬಗ್ಗೆ ಮೂಡಿ ಬಂದ ಟೀಕೆಗಳು, ಅಭಿಪ್ರಾಯಗಳಿಂದಾಗಿ ಬೇಂದ್ರೆ ಮತ್ತು ಕುವೆಂಪು ಅವರು ಉತ್ತಮ ಹಾಗೂ ಸುಲಲಿತವಾದ ಕನ್ನಡ ಭಾಷೆ ಬಳಸಿದರು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಹಾರಾಜ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ವಿಶ್ವ ನಾಥ್, ಕನ್ನಡ ಸಂಘದ ಸಂಚಾಲಕರಾದ ಡಾ.ಡಿ.ವಿಜಯಲಕ್ಷ್ಮೀ ಸೇರಿದಂತೆ ಕನ್ನಡ ಉಪನ್ಯಾಸಕರು ಉಪಸ್ಥಿತರಿದ್ದರು.

Translate »