ಮೈಸೂರು,ಏ.26(ಆರ್ಕೆಬಿ)-ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದ ಸಮೀಪದ ಪ್ರದೇಶದಲ್ಲಿ ವಾಸವಿರುವ 30ಕ್ಕೂ ಹೆಚ್ಚು ಆಟೋ ಚಾಲಕರ ಕುಟುಂಬಗಳಿಗೆ ದತ್ತಪೀಠ ಗಣಪತಿ ಸಚ್ಚಿದಾನಂದ ಆಶ್ರಮದ ಭಕ್ತರು ದಿನಸಿ ಕಿಟ್ಗಳನ್ನು ವಿತರಿಸಿ ನೆರವಾದರು. ಲಾಕ್ಡೌನ್ನಿಂದ ಕಷ್ಟಕ್ಕೆ ಸಿಲುಕಿರುವ ಆಟೋ ಚಾಲಕರಿಗೆ ಅಕ್ಕಿ, ತೊಗರಿಬೇಳೆ, ಉಪ್ಪು, ಸಾಂಬಾರ್ ಪುಡಿ, ಅಡುಗೆ ಎಣ್ಣೆ ಸೇರಿದಂತೆ ದಿನಸಿ ಪದಾರ್ಥಗಳಿರುವ ಕಿಟ್ಗಳನ್ನು ವಿತರಿಸಲಾಯಿತು. ಆಶ್ರಮದ ಭಕ್ತರಾದ ಡಿ.ಕೆ.ನಾಗಭೂಷಣ್, ಮೋಹನ್, ಶಿವು, ಕೇಬಲ್ ಮಹೇಶ್, ಅಪೂರ್ವ ಸುರೇಶ್, ನಂದೀಶ್, ಅಭಿಷೇಕ್, ಯಶವಂತ್ ಮತ್ತಿತರರಿದ್ದರು.
