ಮೈಸೂರು, ಮೇ 17-ಅವಧೂತ ದತ್ತಪೀಠ ಗಣಪತಿ ಸಚ್ಚಿದಾನಂದ ಆಶ್ರಮದ ವತಿಯಿಂದ ಲಾಕ್‍ಡೌನ್‍ನಿಂದ ಸಂಕಷ್ಟದಲ್ಲಿರುವ ಸಂಗೀತ ಕಲಾವಿದರಿಗೆ ಅಗತ್ಯ ವಸ್ತುಗಳ ಕಿಟ್ ವಿತರಿಸಲಾಯಿತು. ರಾಮಾನುಜ ರಸ್ತೆಯಲ್ಲಿರುವ ಪ್ರಸಾದ್ ಸ್ಕೂಲ್ ಆಫ್ ರಿದಮ್ಸ್ ಶಾಲೆ ಬಳಿ ತಬಲ, ಡೋಲಕ್, ಕೀಬೋರ್ಡ್, ರಿದಂ ಪ್ಯಾಡ್, ಗಿಟಾರ್, ಮ್ಯಾಂಡೊಲಿನ್, ಕೊಳಲು, ಸ್ಯಾಕ್ಸೋಫೋನ್ ವಾದಕರು, ಧ್ವನಿವರ್ಧಕ ನಿರ್ವಾಹಕರು, ಓಲಗ, ನಾದಸ್ವರ ನುಡಿಸು ವವರು, ಗಾಯಕರು ಸೇರಿದಂತೆ 60ಕ್ಕೂ ಹೆಚ್ಚು ಕಲಾವಿದರಿಗೆ ಕಿಟ್ ನೀಡಲಾಯಿತು.
ವಿದ್ವಾನ್ ರಾಘವೇಂದ್ರಪ್ರಸಾದ್ ಮಾತನಾಡಿ, ಲಾಕ್‍ಡೌನ್‍ನಿಂದಾಗಿ ಎಲ್ಲರಂತೆ ಸಂಗೀತ ಕಲಾವಿದರೂ ಕಷ್ಟದಲ್ಲಿದ್ದಾರೆ. ಯಾವುದೇ ಕಾರ್ಯಕ್ರಮ ನಡೆಯದಿರುವುದರಿಂದ ದುಡಿಮೆಯಿಲ್ಲದೆ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಕಲೆಯಿಂದ ಎಲ್ಲರ ಹೃದಯ ತಣಿಸುವ ಕಲಾವಿದರಿಗೆ ಬೇಡುವ ಸ್ಥಿತಿ ಬರಬಾರದು. ಇದನ್ನು ಸೂಕ್ಷ್ಮವಾಗಿ ಗಮನಿಸಿದ ಗಣಪತಿ ಸಚ್ಚಿದಾನಂದ ಶ್ರೀಗಳು, ಕಲಾವಿದರಿಗೆ ನೆರವಾಗಿದ್ದಾರೆ. ಶ್ರೀಗಳಂತೆ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಅಧಿಕಾರಿಗಳು ಕಲಾವಿದರ ಸಂಕಷ್ಟ ಅರಿಯಬೇಕು. ಸಹಾಯ ಧನಕ್ಕೆ ಅರ್ಜಿ ಪಡೆದು, ಆರೇಳು ತಿಂಗಳ ನಂತರ ನೆರವು ನೀಡುವಂತಾಗಬಾರದು. ಸಮಿತಿ ಯೊಂದನ್ನು ರಚಿಸಿ, ಕಷ್ಟದಲ್ಲಿರುವಾಗಲೇ ಕಲಾವಿದರಿಗೆ ಸಹಾಯವಾಗುವಂತೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು. ಆಶ್ರಮದ ವಿನಯ್ ಬಾಬು, ಬೋಸ್ಲೆ, ವಿಕ್ರಂ ಅಯ್ಯಂಗಾರ್, ಅಜಯ್‍ಶಾಸ್ತ್ರಿ, ಜನಾರ್ದನ್, ಚಾಲ್ರ್ಸ್, ಅಪ್ಪಾಜಿ, ಮ್ಯಾಥ್ಯೂಸ್, ಶೆಣೈ, ತ್ಯಾಗರಾಜ್, ರಾಜೇಶ್ ಪಡಿಯಾರ್, ವಿನ್ಸೆಂಟ್, ಷಣ್ಮುಖ, ಬಾಲು ಮತ್ತಿತರರಿದ್ದರು.