ಪಾಲಿಕೆ ಆಶ್ರಯ ಕೇಂದ್ರದಲ್ಲಿ  ನಾಲ್ವರಿಗೆ ಕೊರೊನಾ ಪಾಸಿಟಿವ್
ಮೈಸೂರು

ಪಾಲಿಕೆ ಆಶ್ರಯ ಕೇಂದ್ರದಲ್ಲಿ ನಾಲ್ವರಿಗೆ ಕೊರೊನಾ ಪಾಸಿಟಿವ್

May 3, 2021

ಮೈಸೂರು, ಮೇ2(ಆರ್‍ಕೆಬಿ)- ಮೈಸೂರಿನ ಶೇಷಾದ್ರಿ ಅಯ್ಯರ್ ರಸ್ತೆಯಲ್ಲಿ ನಗರಪಾಲಿಕೆ ವತಿ ಯಿಂದ ನಡೆಯುತ್ತಿರುವ ಶಾಶ್ವತ ನಗರ ವಸತಿರಹಿತ ಪುರುಷರ ಆಶ್ರಯ ಕೇಂದ್ರದಲ್ಲಿದ್ದ 34 ಮಂದಿ ವಸತಿರಹಿತರ ಪೈಕಿ ನಾಲ್ಕು ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.
ಪಾಸಿಟಿವ್ ವರದಿ ಬರುತ್ತಿದ್ದಂತೆ ಅವರನ್ನು ಪ್ರತ್ಯೇಕವಾಗಿ ಇರಿಸಿ, ಶನಿವಾರವೇ ಕೋವಿಡ್ ಕೇರ್ ಕೇಂದ್ರಕ್ಕೆ ಸೇರಿಸಲಾಗಿದೆ. ಉಳಿದೆಲ್ಲಾ ನಿರಾಶ್ರಿತರ ಕೋವಿಡ್ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದಿದೆ. ಹೀಗಾಗಿ ಭಾನುವಾರ ಆಶ್ರಯ ಕೇಂದ್ರವನ್ನು ನಗರ ಪಾಲಿಕೆ ವತಿಯಿಂದ ಸ್ಯಾನಿಟೈಜ್ ಮಾಡಲಾಯಿತು.

ಮೈಸೂರು ನಗರಪಾಲಿಕೆ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕ್ರೆಡಿಟ್-ಐ ಸಂಸ್ಥೆ ವತಿಯಿಂದ ದೀನ್ ದಯಾಳ್ ಅಂತ್ಯೋದಯ ಯೋಜನೆ, ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಯೋಜನೆ ಯಡಿ (ಆಂಙ-ಓUಐಒ) ಈ ಶಾಶ್ವತ ನಗರ ವಸತಿರಹಿತ ಪುರುಷರ ಆಶ್ರಯ ಕೇಂದ್ರ ನಡೆಸಲಾಗುತ್ತಿದೆ.

ಈ ಆಶ್ರಯ ಕೇಂದ್ರದಲ್ಲಿ 50 ಮಂದಿಗೆ ಮಾತ್ರ ಅವಕಾಶವಿದೆ. ಹಾಲಿ ಇರುವ ಎಲ್ಲರಿಗೂ ಸೋಪು, ಬಿಸಿನೀರು ವ್ಯವಸ್ಥೆ ಕಲ್ಪಿಸ ಲಾಗಿದೆ. ಕೋವಿಡ್ ಮಾರ್ಗಸೂಚಿಯಂತೆಯೇ ಅವರ ಆರೈಕೆ ಮಾಡಲಾಗುತ್ತಿದೆ. ಪ್ರತಿನಿತ್ಯ ಬೆಳಗ್ಗೆ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟದ ವ್ಯವಸ್ಥೆ ಮಾಡಲಾಗುತ್ತಿದೆ.

ಕ್ರೆಡಿಟ್-ಐ ಸಂಸ್ಥೆ ಕಡೆಯಿಂದ ಒಬ್ಬ ವ್ಯವಸ್ಥಾಪಕ, ಇಬ್ಬರು ಸಿಬ್ಬಂದಿ ಆಶ್ರಯ ಕೇಂದ್ರವನ್ನು ನೋಡಿಕೊಳ್ಳುತ್ತಿದ್ದು, ಪ್ರತಿನಿತ್ಯ ಬೆಳಗ್ಗೆ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಮೈಸೂರು ನಗರಪಾಲಿಕೆ ಸಮುದಾಯ ಸಂಘಟನಾಧಿಕಾರಿ ಶಿವಪ್ಪ ತಿಳಿಸಿದ್ದಾರೆ.

Translate »