ನಂಜರಾಜ ಬಹದ್ದೂರ್ ಛತ್ರದಲ್ಲಿ ಇನ್ನೂ ಆರಂಭವಾಗದ ನಿರ್ಗತಿಕರ ಆಶ್ರಯ ಕೇಂದ್ರ
ಮೈಸೂರು

ನಂಜರಾಜ ಬಹದ್ದೂರ್ ಛತ್ರದಲ್ಲಿ ಇನ್ನೂ ಆರಂಭವಾಗದ ನಿರ್ಗತಿಕರ ಆಶ್ರಯ ಕೇಂದ್ರ

May 3, 2021

ಮೈಸೂರು, ಮೇ2(ಆರ್‍ಕೆಬಿ)- ಕೋವಿಡ್-19 ವೈರಾಣು ಹರಡುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್ ಕಫ್ರ್ಯೂ ವೇಳೆ ನಿರ್ಗತಿಕರು, ಕೂಲಿ ಕಾರ್ಮಿಕರು, ಅನಾ ಥರು, ವಸತಿ ರಹಿತರಿಗೆ ಮೈಸೂರಿನ ಮೆಟ್ರೋ ಪೋಲ್ ವೃತ್ತದ ಬಳಿಯ ನಂಜರಾಜ ಬಹದ್ದೂರ್ ಛತ್ರದಲ್ಲಿ ನಿರ್ಗತಿಕರ ಆಶ್ರಯ ಕೇಂದ್ರ ಪ್ರಾರಂಭ ಮಾಡಿರುವುದಾಗಿ 2 ದಿನಗಳ ಹಿಂದೆ (ಶುಕ್ರವಾರ) ಪ್ರಕಟಣೆ ಹೊರ ಡಿಸಿದ್ದ ಮೈಸೂರು ಮಹಾನಗರಪಾಲಿಕೆ ಮೂರು ದಿನಗಳಾದÀರೂ ಇನ್ನೂ ಅಂತಹ ಕೇಂದ್ರವನ್ನು ತೆರೆದಿಲ್ಲ.

ನಂಜರಾಜ ಬಹದ್ದೂರ್ ಛತ್ರದಲ್ಲಿ ಅಂತಹ ಯಾವುದೇ ಸಿದ್ಧತೆಗಳು ಕೈಗೊಂಡಿಲ್ಲದಿ ರುವ ಬಗ್ಗೆ `ಮೈಸೂರು ಮಿತ್ರ’ ಸ್ಥಳಕ್ಕೆ ಭೇಟಿ ನೀಡಿದಾಗ ಕಂಡು ಬಂದಿತು.

ಮೈಸೂರಿನ ಕೆ.ಆರ್.ಆಸ್ಪತ್ರೆ, ರೈಲ್ವೆ ನಿಲ್ದಾಣ, ಕೆಎಸ್‍ಆರ್‍ಟಿಸಿ ಗ್ರಾಮಾಂತರ ಬಸ್ ನಿಲ್ದಾಣ, ಹಳೇ ಆರ್‍ಎಂಸಿ ಸೇರಿ ದಂತೆ ಇತರೆ ಕಡೆಗಳಲ್ಲಿ ನೆಲೆ ನಿಂತಿರುವ ನೂರಾರು ಮಂದಿ ಊಟಕ್ಕಾಗಿ ಅಲೆಯು ತ್ತಿದ್ದು, ಅವರಿವರು ನೀಡುವ ಊಟ, ಉಪಾಹಾರವನ್ನೇ ತಿಂದು ಅಲ್ಲಲ್ಲೇ ಕಾಲ ಕಳೆಯುತ್ತಿದ್ದಾರೆ. ಅಂತಹವರಿಗಾಗಿ ಕಫ್ರ್ಯೂ ಮುಗಿಯುವವರೆಗೆ ನಗರಪಾಲಿಕೆ ನಿರಾಶ್ರಿ ತರ ಆರೈಕೆ ಕೇಂದ್ರ ತೆರೆದು ಅವರಿಗೆ ಆರೈಕೆ ನೀಡಬೇಕಿತ್ತು. ಆದರೆ ಪ್ರಕಟಣೆ ಹೊರ ಡಿಸಿ ಮೂರು ದಿನಗಳಾದರೂ ನಂಜರಾಜ ಬಹದ್ದೂರ್ ಛತ್ರದಲ್ಲಿ ಅಂತಹ ಕೇಂದ್ರ ತೆರೆದಿಲ್ಲ. ಅಧಿಕಾರಿಗಳನ್ನು ಕೇಳಿದರೆ ಅನಿ ವಾರ್ಯ ಕಾರಣಗಳಿಂದ ತೆರೆಯಲಾಗಿಲ್ಲ ಎಂಬ ಉತ್ತರ ಕೇಳಿ ಬರುತ್ತಿದೆ.

ನಿರಾಶ್ರಿತರು, ವಸತಿ ರಹಿತರು, ವಸತಿ ಕಾರ್ಮಿಕರು ತಮ್ಮ ಒಪ್ಪೊತ್ತಿನ ಊಟ ಕ್ಕಾಗಿ ಪರದಾಡುವ ಸ್ಥಿತಿ ಇದೆ. ಕೈಯ್ಯಲ್ಲಿ ಕಾಸಿಲ್ಲ, ಉಟ್ಟ ಬಟ್ಟೆ ಬದಲಿಸಲಾಗದ ಸ್ಥಿತಿಯಲ್ಲಿ ಅಲ್ಲಲ್ಲೇ ಕಾಲ ಕಳೆಯುತ್ತಿದ್ದಾರೆ. ಇವರನ್ನು ಕೇಳುವವರೇ ಇಲ್ಲ ಎಂಬ ಸ್ಥಿತಿಯಲ್ಲಿ ಹಲವು ಸಂಘಟನೆಗಳು ನೀಡುವ ಆಹಾರ ಪೊಟ್ಟಣಗಳೇ ಇವರ ಹೊಟ್ಟೆ ತುಂಬಿಸುತ್ತಿವೆ. ಊಟ ಬರುವುದನ್ನೇ ಕಾದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ.

Translate »