ಕೋವಿಡ್ ಶಿಷ್ಟಾಚಾರ ಪಾಲನೆ ಆಗುತ್ತಿಲ್ಲ
ಮೈಸೂರು

ಕೋವಿಡ್ ಶಿಷ್ಟಾಚಾರ ಪಾಲನೆ ಆಗುತ್ತಿಲ್ಲ

May 3, 2021

ಮೈಸೂರು,ಮೇ 2(ಪಿಎಂ)- ಮೈಸೂರು ಜಿಲ್ಲೆಯಲ್ಲಿ ವಾರಸುದಾರರಿಗೆ ಮೃತದೇಹ ನೀಡುವಲ್ಲಿ ಕೋವಿಡ್ ಶಿಷ್ಟಾಚಾರ ಪಾಲನೆ ಯಾಗುತ್ತಿಲ್ಲ. ಸೋಂಕಿತರ ಮೇಲೆ ನಿಗಾ ವಿಟ್ಟು ಮೇಲ್ವಿಚಾರಣೆ ಮಾಡುವ ಕೆಲಸವೂ ಆಗುತ್ತಿಲ್ಲ. ಜಿಲ್ಲಾಡಳಿತದ ಇಂತಹ ವೈಫಲ್ಯ ದಿಂದ ಕೋವಿಡ್ ಸೋಂಕು ಜಿಲ್ಲೆಯಲ್ಲಿ ವ್ಯಾಪಕವಾಗುತ್ತಿದೆ ಎಂದು ಶಾಸಕ ಸಾ.ರಾ.ಮಹೇಶ್ ಆರೋಪಿಸಿದರು.

ಮೈಸೂರಿನ ತಮ್ಮ ಕಚೇರಿ ಆವರಣ ದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳಕ್ಕೆ ಜಿಲ್ಲಾಡಳಿ ತದ ವೈಫಲ್ಯವೇ ಕಾರಣ. ಮೊನ್ನೆ ಕೋವಿಡ್ ನಿಂದ ಕೆಆರ್ ನಗರ ತಾಲೂಕಿನ 36 ವರ್ಷದ ಮಹಿಳೆ ಮೈಸೂರಿನಲ್ಲಿ ಮೃತಪಡುತ್ತಿದ್ದಂತೆ ಕೋವಿಡ್ ಶಿಷ್ಟಾಚಾರ ಪಾಲಿಸದೇ ಮೃತ ದೇಹವನ್ನು ವಾರಸುದಾರರಿಗೆ ನೀಡ ಲಾಗಿದೆ. ಇದರ ಪರಿಣಾಮ ಅವರ ಕುಟುಂಬವು ಸೇರಿದಂತೆ ನೆರೆಹೊರೆಯ 25 ಮಂದಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಇದು ಜಿಲ್ಲಾಡಳಿತದ ನಿರ್ಲಕ್ಷ್ಯ ತಾನೇ? ಎಂದು ಪ್ರಶ್ನಿಸಿದರು.
ಮತ್ತೊಂದು ಪ್ರಕರಣದಲ್ಲಿ ಕಳೆದ 4 ದಿನಗಳ ಹಿಂದೆ ಮೈಸೂರು ನಗರದಲ್ಲಿ ವ್ಯಕ್ತಿಯೊಬ್ಬರು ಅಪಘಾತಕ್ಕೀಡಾಗಿದ್ದರು. ಅವರ ಚಿಕಿತ್ಸೆ ಫಲಕಾರಿಯಾಗದೇ ಅವ ರನ್ನು ಮನೆ ಕಳುಹಿಸಲಾಗಿತ್ತು. ಮಾರನೇ ದಿನ ಅವರು ಮೃತಪಟ್ಟಿದ್ದಾರೆ. ಆ ಬಳಿಕ ಅವರ ಕೋವಿಡ್ ವರದಿ ಪಾಸಿಟಿವ್ ಬಂದಿದೆ. ಸೋಂಕು ತಗುಲಿ ಕೋವಿಡ್ ಸೆಂಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರ ಪುತ್ರನೂ ತಂದೆಯ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದಾರೆ. ಈ ರೀತಿ ನಿರ್ಲಕ್ಷ್ಯ ಮಾಡಿದರೆ ಕೊರೊನಾ ವ್ಯಾಪಕವಾಗದೇ ಮತ್ತೇನು ಆಗುತ್ತದೆ ಎಂದರು.

ಹಿಂದೆ ಅಭಿರಾಮ್ ಜಿ.ಶಂಕರ್ ಅವರು ಮೈಸೂರು ಜಿಲ್ಲಾಧಿಕಾರಿ ಆಗಿದ್ದಾಗ ಯಾವುದೇ ಸಾವು ಸಂಭವಿಸಿದರೂ ಕೋವಿಡ್ ಸೋಂಕು ಇದೆಯೇ? ಎಂದು ಖಾತ್ರಿ ಮಾಡಿಕೊಳ್ಳುತ್ತಿದ್ದರು. ಆದರೆ ಈಗ ಹಾಗೇನು ಮಾಡುತ್ತಲೇ ಇಲ್ಲ. ಮನೆಯಲ್ಲೇ ಪ್ರತ್ಯೇಕವಾಗಿರುವ ಸೋಂಕಿತರ ಮೇಲೆ ಹಿಂದೆ ನಿಗಾ ಇಡುತ್ತಿದ್ದರು. ಆದರೆ ಈಗ ಅಂತಹ ಯಾವುದೇ ಕೆಲಸವಾಗುತ್ತಿಲ್ಲ. ಕೋವಿಡ್ ಹೆಚ್ಚಲು ಇದಕ್ಕಿಂತ ಇನ್ನೇನು ಬೇಕು ಎಂದು ಪ್ರಶ್ನಿಸಿದರು.
ಕೆಆರ್ ನಗರಕ್ಕೆ ಆಂಬುಲೆನ್ಸ್: ಈಗಾ ಗಲೇ ಕೆಆರ್ ನಗರಕ್ಕೆ ಸಾರಾ ಸ್ನೇಹ ಬಳಗ ದಿಂದ 3 ಆಂಬುಲೆನ್ಸ್‍ಗಳನ್ನು ನೀಡಲಾ ಗಿದೆ. ಇಂದು ಕೆಆರ್ ನಗರದ ಕೋವಿಡ್ ಕೇರ್ ಸೆಂಟರ್‍ನಲ್ಲಿ ಕಾರ್ಯ ನಿರ್ವಹಿಸಲು 14 ಲಕ್ಷ ರೂ. ಮೊತ್ತದ ಹೊಸ ಆಂಬು ಲೆನ್ಸ್ ಅನ್ನು ಸಾರಾ ಸ್ನೇಹ ಬಳಗದಿಂದ ಕೊಡಲಾಗುತ್ತಿದೆ. ಇದರ ಜೊತೆಗೆ ಒಂದು ಶವ ಸಾಗಿಸುವ ವಾಹನ ಕೂಡ ನೀಡ ಲಾಗುತ್ತಿದೆ. ಅಲ್ಲದೆ, ಕೆಆರ್ ನಗರ ಕೋವಿಡ್ ಕೇರ್ ಸೆಂಟರ್‍ಗೆ ಬಳಗದಿಂದ ಮೂವರು ವೈದ್ಯರನ್ನು ನಿಯೋಜನೆ ಮಾಡಲಾಗು ತ್ತಿದೆ. ಅವರಿಗೆ ಮಾಸಿಕ ಲಕ್ಷ ರೂ. ವೇತನ ನೀಡಲಿದ್ದೇವೆ. ಇದರೊಂದಿಗೆ ಬಳಗದಿಂದ ಕೆಆರ್ ನಗರದಲ್ಲಿ 200 ಹಾಸಿಗೆ ಸೌಲಭ್ಯ ಒಳಗೊಂಡ ಒಂದು ಕಟ್ಟಡ ವ್ಯವಸ್ಥೆ ಮಾಡಿ ಮುಂದಿನ ವಾರ ತಾಲೂಕು ಆಡಳಿತಕ್ಕೆ ಹಸ್ತಾಂತರ ಮಾಡಲಾಗುವುದು ಎಂದು ಸಾ.ರಾ.ಮಹೇಶ್ ವಿವರಿಸಿದರು.

ಉಸ್ತುವಾರಿ ಸಚಿವರ ವಿರುದ್ಧ ಕಿಡಿ: ಕೆಆರ್ ನಗರ ತಾಲೂಕು ಅಭಿವೃದ್ಧಿ ಕಾಮಗಾರಿ ಗಳಿಗೆ ಸಂಬಂಧಿಸಿದಂತೆ ಮಂಜೂರಾಗಿ ರುವ ಅನುದಾನವನ್ನು ಬಿಡುಗಡೆ ಮಾಡಲು ಪತ್ರ ಬರೆದರೂ ನೀವು (ಉಸ್ತುವಾರಿ ಸಚಿ ವರು) ತಲೆಕೆಡಿಸಿಕೊಂಡಿಲ್ಲ. ಮೊನ್ನೆ ಕೆಆರ್ ನಗರದಲ್ಲಿ ತಾಲೂಕು ಮಟ್ಟದ ಅಧಿಕಾರಿ ಗಳು ಸಭೆ ನಡೆಸಿದ್ದೀರಿ. ನಿಮ್ಮ ಜಿಲ್ಲಾಧಿಕಾರಿ ಗಳು ಕೂಡ ಸಭೆಯಲ್ಲಿ ಇರಲಿಲ್ಲ. ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸುವುದಾ ದರೆ ನಾನೇ ಮಾಡುತ್ತೇನೆ. ಅದಕ್ಕೆ ನೀವೇ ಏಕೆ ಬೇಕು. ಸಭೆ ನಿರಂತರವಾಗಿ ನಾನು ಮಾಡುತ್ತಲೂ ಇದ್ದೇನೆ. ಜನರ ಕಣ್ಣೊರಿ ಸಲು ಕೇವಲ ಒಂದು ಸಭೆ ಮಾಡಿದರೆ ಯಾವುದೇ ಪ್ರಯೋಜನವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮ ಶೇಖರ್ ವಿರುದ್ಧ ಗುಡುಗಿದರು.

ಕೆಆರ್ ನಗರದಲ್ಲಿ ಶಾಸಕರ ಸಹಕಾರ ದೊರೆಯಲಿಲ್ಲ ಎಂಬ ಉಸ್ತುವಾರಿ ಸಚಿವರ ಹೇಳಿಕೆ ಸಂಬಂಧ ಪ್ರತಿಕ್ರಿಯಿಸಿ, ಅಭಿವೃದ್ಧಿಗೆ ಸಂಬಂಧಿಸಿದಂತೆ ಮಂಜೂರಾಗಿರುವ 400ರಿಂದ 500 ಕೋಟಿ ರೂ. ಅನುದಾನ ಬಿಡುಗಡೆ ಮಾಡುವವರೆಗೂ ಯಾವುದೇ ಸಭೆಗೆ ಬರುವುದಿಲ್ಲ ಎಂದು ಹೇಳಿದ್ದೇನೆ. ಇಡೀ ಜಿಲ್ಲೆಯಲ್ಲಿ ನಿಮ್ಮ (ಜಿಲ್ಲಾ ಉಸ್ತುವಾರಿ ಸಚಿವರು) ಅಂಕಿ-ಅಂಶ ಪ್ರಕಾರವೇ ಕೆಆರ್ ನಗರ ಆರೋಗ್ಯ ಸೇವೆಯಲ್ಲಿ ಮೊದಲ ಸ್ಥಾನದಲ್ಲಿದೆ. ಇದಕ್ಕೆಲ್ಲಾ ಕ್ಷೇತ್ರದ ಶಾಸಕನಾಗಿ ನನ್ನ ಶ್ರಮವಿದೆ. ಅಭಿವೃದ್ಧಿ ವಿಚಾರದಲ್ಲಿ ಸೇಡಿನ ರಾಜಕಾರಣ ಮಾಡಿದರೆ ಅವರೊಂ ದಿಗೆ ಹೇಗೆ ಕೈಜೋಡಿಸಲಿ ಎಂದು ಕಿಡಿಕಾರಿ ದರು. ಜೆಡಿಎಸ್ ಪಕ್ಷದ ಮುಖಂಡರಾದ ಕೆ.ವಿ.ಮಲ್ಲೇಶ್, ಶೈಲೇಂದ್ರ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

Translate »