ಮಂಡ್ಯ ಅಕ್ರಮ ಗಣಿಗಾರಿಕೆಗಳ ಮೇಲೆ ದಾಳಿ: ಸ್ಫೋಟಕ ವಸ್ತುಗಳ ವಶ
ಮೈಸೂರು

ಮಂಡ್ಯ ಅಕ್ರಮ ಗಣಿಗಾರಿಕೆಗಳ ಮೇಲೆ ದಾಳಿ: ಸ್ಫೋಟಕ ವಸ್ತುಗಳ ವಶ

January 25, 2021

ಮಂಡ್ಯ, ಡಿ.24-ಶಿವಮೊಗ್ಗ ಹುಣಸೋಡು ಪ್ರಕರಣದ ಬಳಿಕ ಮಂಡ್ಯ ಜಿಲ್ಲೆಯಲ್ಲೂ ಜಿಲೆಟಿನ್ ಸಂಗ್ರಹದ ಕಾರ್ಯಾಚರಣೆ ಕೈಗೊಂಡಿರುವ ಪೆÇಲೀಸ್ ಇಲಾಖೆ, ಶನಿವಾರ 3 ಕಡೆ ಅಕ್ರಮ ಗಣಿಗಾರಿಕೆಗಳ ಮೇಲೆ ದಾಳಿ ನಡೆಸಿ ವಿದ್ಯುತ್ ಡಿಟೋ ನೇಟರ್, ಜಿಲೆಟಿನ್ ಕಡ್ಡಿಗಳನ್ನು ವಶಪಡಿಸಿ ಕೊಳ್ಳಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್, ಜಿಲ್ಲೆಯ ಎಲ್ಲಾ ಕಲ್ಲು ಕ್ವಾರಿಗಳು ಮತ್ತು ಕ್ರಷರ್‍ಗಳ ಮೇಲೆ ದಾಳಿ ನಡೆಸಲಾಗಿದೆ. ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ ಹೋಬಳಿಯ ಚನ್ನನಕೆರೆ ಗ್ರಾಮದ ವ್ಯಾಪ್ತಿಯಲ್ಲಿರುವ ರಾಮ್‍ದೇವ್ ಎಂಬುವರಿಗೆ ಸೇರಿದ ಜೆ.ಜೆ.ಕ್ರಷರ್ ಕ್ವಾರಿಯ ಮೇಲೆ ದಾಳಿ ನಡೆಸಿ ಅಕ್ರಮವಾಗಿ ಪರವಾನಗಿ ಇಲ್ಲದೆ ಬಂಡೆ ಸಿಡಿಸಲು ಬಳಸುತ್ತಿದ್ದ 2 ಮೆಗ್ಗರ್‍ಗಳು, 315 ಎಲೆಕ್ಟ್ರಿಕ್ ಡಿಟೋನೇಟರ್ ವಶಪಡಿಸಿಕೊಳ್ಳಲಾಗಿದ್ದು, ಅರೆಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಗಮಂಗಲ ತಾಲೂಕಿನ ಕರಡಹಳ್ಳಿ ಗ್ರಾಮದ ಎಲ್ಲೆಯಲ್ಲಿರುವ ಶ್ರೀ ಲಕ್ಷ್ಮಿವೆಂಕಟೇಶ್ವರ ಕ್ರಷರ್ ಮತ್ತು ಕಲ್ಲು ಕ್ವಾರಿಯ ಮೇಲೂ ದಾಳಿ ನಡೆಸಿ ಅಕ್ರಮವಾಗಿ ಬಳಸುತ್ತಿದ್ದ ಒಟ್ಟು 63 ಜಿಲೆಟಿನ್ ಕಡ್ಡಿಗಳು, 18 ಎಲೆಕ್ಟ್ರಿಕ್ ಡಿಟೋನೇಟರ್, 4 ಲೋಡ್ ಬೋಡ್ರಸ್ ಕಲ್ಲುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೆಲಗೆರೆ ಗ್ರಾಮದ ಕೆ.ಸಿ.ನಾಗರಾಜು, ಶಿವಣ್ಣ ಆಲಿಯಾಸ್ ಜಾಕಿಶಿವ ಸೇರಿದಂತೆ ಇತರರ ವಿರುದ್ಧ ಬೆಳ್ಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದ್ದಾರೆ.

Translate »