ಯುವಶ್ರೀ, ಸಾಧನಶ್ರೀ, ಬಾಲಶ್ರೀ ಪ್ರಶಸ್ತಿ ಪ್ರದಾನ
ಮೈಸೂರು

ಯುವಶ್ರೀ, ಸಾಧನಶ್ರೀ, ಬಾಲಶ್ರೀ ಪ್ರಶಸ್ತಿ ಪ್ರದಾನ

January 25, 2021

ಮೈಸೂರು, ಜ.24(ಎಂಟಿವೈ)- ಮೈಸೂರು ಸಾಹಿತ್ಯ ಮತ್ತು ಸಾಂಸ್ಕøತಿಕ ಪ್ರತಿಷ್ಠಾನ ಮೈಸೂರಿನ ರೋಟರಿ ಶಾಲೆ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಡಾ.ಹೆಚ್.ಪಿ.ಗೀತಾ ಅವರಿಗೆ `ಡಾ.ಕೆ.ಎಸ್.ರತ್ನಮ್ಮ ಸಾಹಿತ್ಯ ಪ್ರಶಸ್ತಿ’, ಡಾ.ಡಿ.ಬಿ. ರಾಮಚಂದ್ರಾಚಾರ್ ಅವರಿಗೆ `ಸಾಹಿತ್ಯ ಸಿಂಧು ಪ್ರಶಸ್ತಿ’, ಎಂ.ಎಸ್.ಸಜ್ಜನ್, ಡಿ.ಅಭಯ್ ದತ್ತ, ಪ್ರೀತು ಮಂಜುನಾಥ್, ಜಿ.ವಿ.ಪ್ರಣವ್‍ಗೆ `ಯುವಶ್ರೀ’ ಪ್ರಶಸ್ತಿ, ಮಹಿಮ ಮತ್ತು ಎಸ್.ಜಿಲಿಯನ್‍ಗೆ `ಸಾಧನಶ್ರೀ’ ಪ್ರಶಸ್ತಿ ಹಾಗೂ ಸೌರವ್ ಗಜ್, ದಿಯಾ ಉಮೇಶ್, ಸಮೃದ್ಧ್ ಮಸ್ಕಿ, ಕೆ.ಎಂ.ಮುಕುಂದ ಉಪಮನ್ಯುವಿಗೆ `ಬಾಲಶ್ರೀ’ ಪ್ರಶಸ್ತಿ ವಿತರಿಸಿ ಗೌರವಿಸಲಾಯಿತು. ಕಾರ್ಯಕ್ರಮ ಉದ್ಘಾಟಿಸಿದ ಕವಯತ್ರಿ ಡಿ.ಸುಮಂಗಳ ಬಳಿಕ ಎಂ.ಬಿ.ಸಂತೋಷ್ ಅವರ `ವಚನ ಸಮೃದ್ಧಿ’, ಶಿಕ್ಷಕಿ ಸಿ.ವಾಣಿ ರಾಘವೇಂದ್ರ ಅವರ `ಸಂತೋಷ್ ಪರ್ವ’ ಮತ್ತು `ಸಂಪತ್ತಿಗೂ ಸವಾಲಾದ ಸ್ನೇಹ’ ಕಿರುನಾಟಕ ಪುಸ್ತಕ ಬಿಡುಗಡೆ ಮಾಡಿದರು. ಬಳಿಕ ಮಾತನಾಡಿ, ಸರ್ವಜ್ಞ ಹಾಗೂ ಬಸವಣ್ಣನವರ ತತ್ವಗಳುಳ್ಳ ವಚನಗಳು `ವಚನ ಸಮೃದ್ಧಿ’ಯಲ್ಲಿಯೂ ಇವೆ ಎಂದರು.

ಮೈಸೂರು ಸಾಹಿತ್ಯ-ಸಾಂಸ್ಕøತಿಕ ಪ್ರತಿಷ್ಠಾನ ಅಧ್ಯಕ್ಷ ಎಂ.ಬಿ.ಸಂತೋಷ್ ಅಧ್ಯಕ್ಷತೆ ವಹಿಸಿದ್ದರೆ, ಉಪನ್ಯಾಸಕಿ ಸಿ.ತೇಜೋವತಿ ವಚನ ಸಮೃದ್ಧಿ ಬಗ್ಗೆ ಮಾತನಾಡಿದರೆ, ಉಪನ್ಯಾಸಕ ಕೃ.ಪಾ.ಮಂಜುನಾಥ್, ಶಿಕ್ಷಕಿ ಸಿ.ವಾಣಿ ರಾಘವೇಂದ್ರ ಅವರ `ಸಂಪತ್ತಿಗೂ ಸವಾಲಾದ ಸ್ನೇಹ’ ಕಿರುನಾಟಕ ಕೃತಿ ಕುರಿತು ಮಾತನಾಡಿದರು. ಪ್ರತಿಷ್ಠಾನದ ಸಾಂಸ್ಕøತಿಕ ಸಮಿತಿ ಅಧ್ಯಕ್ಷೆ ಎನ್.ಸಿ.ಮಮತಾ, ಪ್ರ.ಕಾರ್ಯದರ್ಶಿ ಎಂ.ಎನ್.ಜಯಂತಿ, ಉಪಾಧ್ಯಕ್ಷೆ ಸಿ.ವಾಣಿ, ಪದಾಧಿಕಾರಿಗಳಾದ ಡಿ.ಮಂಜುನಾಥ್, ರೇಖಾ ಸಂತೋಷ್, ಎಸ್.ದತ್ತ, ಎಸ್.ರಾಘವೇಂದ್ರ, ನೀತು ಎಸ್.ರಾಜ್, ಜ್ಯೋತಿ ಗಾನಗಮ್ಯ, ರೂಪಶ್ರೀ ಇನ್ನಿತರರಿದ್ದರು.

 

 

Translate »