26ನೇ ವಾರ್ಡ್‍ನಲ್ಲಿ ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾ ಕಚೇರಿ, ಸೇವಾ ಕೇಂದ್ರ ಉದ್ಘಾಟನೆ
ಮೈಸೂರು

26ನೇ ವಾರ್ಡ್‍ನಲ್ಲಿ ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾ ಕಚೇರಿ, ಸೇವಾ ಕೇಂದ್ರ ಉದ್ಘಾಟನೆ

January 25, 2021

ಮೈಸೂರು,ಜ.24(ಆರ್‍ಕೆಬಿ)-ಮೈಸೂರಿನ ಮಂಡಿ ಮೊಹಲ್ಲಾ ಮೀನಾ ಬಜಾರ್ ಸಾಡೇ ರಸ್ತೆ 11ನೇ ಕ್ರಾಸ್‍ನಲ್ಲಿ ಚಾಮರಾಜ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಲ್ಪಸಂಖ್ಯಾ ತರ ಮೋರ್ಚಾದ ಕಚೇರಿ ಮತ್ತು ಸೇವಾ ಕೇಂದ್ರವನ್ನು ಶಾಸಕ ಎಲ್.ನಾಗೇಂದ್ರ ಭಾನುವಾರ ಉದ್ಘಾಟಿಸಿದರು.

ಇದೇ ಸಂದರ್ಭದಲ್ಲಿ ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾ ಮಂಡಲ ಪದಾಧಿಕಾರಿಗಳ ನೇಮಕಾತಿ ಪತ್ರ ವಿತರಿಸಿ ಮಾತನಾಡಿದ ಅವರು, ಈ ಭಾಗದ ಅಲ್ಪಸಂಖ್ಯಾತರಿಗೆ ಜಲದರ್ಶಿನಿಯಲ್ಲಿರುವ ನನ್ನ ಕಚೇರಿಗೆ ಬರಲು ಸಾಧ್ಯವಿಲ್ಲದವರಿಗಾಗಿ ಇಲ್ಲಿ ಕಚೇರಿ ಮತ್ತು ಸೇವಾ ಕೇಂದ್ರ ತೆರೆಯಲಾಗಿದೆ. ಅಕ್ಕಪಕ್ಕದ ಪ್ರದೇಶ ಗಳಿಗೆ ಸಿಗುತ್ತಿರುವ ಸರ್ಕಾರಿ ಸೌಲಭ್ಯಗಳು ಈ ಭಾಗದ ಜನರಿಗೂ ಸಿಗಲಿ ಎಂಬುದೇ ಕಚೇರಿ ತೆರೆದಿದ್ದರ ಉದ್ದೇಶವಾಗಿದ್ದು, ಈ ಭಾಗದ ಅಲ್ಪಸಂಖ್ಯಾತರು ತಮ್ಮ ಅಹವಾಲುಗಳನ್ನು ಈ ಕಚೇರಿಗೆ ಸಲ್ಲಿಸಿದರೆ ಅದು ನನಗೆ ತಲುಪುವ ಜೊತೆಗೆ ಅಂಥವರಿಗೆ ದೊರೆಯಬೇಕಾದ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗು ವುದು ಎಂದು ಭರವಸೆ ನೀಡಿದರು.

2019-20ರಲ್ಲಿ ಅಲ್ಪಸಂಖ್ಯಾತರ ನಿಗಮದಿಂದ ಚಾಮರಾಜ ಕ್ಷೇತ್ರದ 48 ಜನರಿಗೆ ಸಾಲ ಸೌಲಭ್ಯ ದೊರೆತಿದೆ. ಈ ಬಾರಿ ಅರ್ಜಿ ಹಾಕಿರುವವರಿಗೂ ಸೌಲಭ್ಯ ಕಲ್ಪಿಸುವ ಭರವಸೆ ನೀಡಿದರು. ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಕ್ಷೇತ್ರದಲ್ಲಿ 40,000 ಕಿಟ್‍ಗಳನ್ನು ವಿತರಿಸಲಾಗಿದೆ. ಮೀನಾ ಬಜಾರ್‍ನಲ್ಲಿರುವ ಹೆಣ್ಣು ಮಕ್ಕಳ ಅನಾಥಾಲಯಕ್ಕೂ ಭೇಟಿ ನೀಡಿ ಸೌಲಭ್ಯ ಕಲ್ಪಿಸಿಕೊಡುವುದಾಗಿಯೂ ಭರವಸೆ ನೀಡಿದರು.

ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸೈಯದ್ ಸಲಾಂ ಮಾತನಾಡಿ, ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರ ಓಟು ಬ್ಯಾಂಕ್ ಮಾಡಿ ಕೊಂಡಿತ್ತು. ಹಾಗಾಗಿ ಬಿಜೆಪಿ ವಿರುದ್ಧ ಎತ್ತಿಕಟ್ಟುವ ಸಲುವಾಗಿ ಸಿಎಎ (ಪೌರತ್ವ ಕಾಯ್ದೆ ತಿದ್ದುಪಡಿ) ವಿರೋ ಧದ ನೆಪದಲ್ಲಿ ಈ ದೇಶದ ಮುಸ್ಲಿಮರನ್ನು ಎತ್ತಿ ಕಟ್ಟುವ ಕೆಲಸ ಮಾಡಿತು. ಪೌರತ್ವ ಕಾಯಿದೆ ತಿದ್ದುಪಡಿ ಯಿಂದ ದೇಶದÀ ಮುಸ್ಲಿಂ ಸಮುದಾಯಕ್ಕೆ ಯಾವುದೇ ತೊಂದರೆಯಿಲ್ಲ. ಪೌರತ್ವ ಕೊಡುವುದೇ ಹೊರತು ಕಿತ್ತುಕೊಳ್ಳುವುದಲ್ಲ. ಆದರೆ ಕಾಂಗ್ರೆಸ್ ಮುಸ್ಲಿಂ ಸಮು ದಾಯವನ್ನು ತಪ್ಪುದಾರಿಗೆ ಎಳೆಯಲು ಯತ್ನಿಸಿತು. ಕಾಂಗ್ರೆಸ್‍ನಿಂದ ಮುಸ್ಲಿಂರಿಗೆ ತೊಂದರೆಯೇ ಹೊರತು ಯಾವುದೇ ಲಾಭವಿಲ್ಲ ಎಂದರು.

ಕಾರ್ಯಕ್ರಮದಲ್ಲಿ ಬಿಜೆಪಿ ನಗರಾಧ್ಯಕ್ಷ ಟಿ.ಎಸ್. ಶ್ರೀವತ್ಸ, ಚಾಮರಾಜ ಕ್ಷೇತ್ರ ಅಧ್ಯಕ್ಷ ಕೆ.ಸೋಮ ಶೇಖರರಾಜು, ಬಿಜೆಪಿ ರಾಜ್ಯ ಅಲ್ಪಸಂಖ್ಯಾತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಡಾ.ಅನಿಲ್ ಥಾಮಸ್, ಅಲ್ಪಸಂಖ್ಯಾತ ಮೋರ್ಚಾ ನಗರಾಧ್ಯಕ್ಷ ಕಲೀಂ ಪಾಷ, ಚಾಮರಾಜ ಕ್ಷೇತ್ರ ಅಧ್ಯಕ್ಷ ಪೈ.ತನ್ವೀರ್ ಅಹಮದ್ ಖಾದ್ರಿ, ಪ್ರಧಾನ ಕಾರ್ಯದರ್ಶಿಗಳಾದ ತಬ್ರೇಜ್ ಅಹಮದ್, ಇಂಜಮಾಮ್ ಉಲ್‍ಹಕ್, ನಗರಪಾಲಿಕೆ ಸದಸ್ಯರಾದ ರಂಗಸ್ವಾಮಿ, ಎಂ.ಯು. ಸುಬ್ಬಯ್ಯ, ಪ್ರಮೀಳಾ ಭರತ್, ಬಿಜೆಪಿ ನಗರ ಮಾಧ್ಯಮ ಪ್ರಮುಖ ಮೋಹನ್, ಚಾಮರಾಜ ಕ್ಷೇತ್ರ ಎಸ್‍ಸಿ ಮೋರ್ಚಾ ಅಧ್ಯಕ್ಷ ಸ್ವಾಮಿ, ಮಹಿಳಾ ಮೋರ್ಚಾ ಅಧ್ಯಕ್ಷೆ ತನುಜಾ ಮಹೇಶ್, ಮುಖಂಡ ರಾದ ಚಿಕ್ಕವೆಂಕಟು, ಸಾಜಿರ್ ಅಬ್ರಾರ್ ಅಲ್ವಿ, ಇನ್ನಿತರರು ಉಪಸ್ಥಿತರಿದ್ದರು.

Translate »