ತಪ್ಪಾಗಿ ಟೋಲ್ ಶುಲ್ಕ ಕಡಿತವಾದರೆ ಆಟೋ ರೀಫಂಡ್ 
ಮೈಸೂರು

ತಪ್ಪಾಗಿ ಟೋಲ್ ಶುಲ್ಕ ಕಡಿತವಾದರೆ ಆಟೋ ರೀಫಂಡ್ 

December 21, 2020

ಬೆಂಗಳೂರು: ತಪ್ಪಾಗಿ ಟೋಲ್ ಶುಲ್ಕ ಕಡಿತವಾದರೆ ಆಟೋ ರೀಫಂಡ್ ಸೌಲಭ್ಯ ವನ್ನು ವೀಲ್ಸ್‍ಐ ಸಂಸ್ಥೆಯು ಕಲ್ಪಿಸಿದೆ. ಕೇವಲ 3ರಿಂದ 7 ದಿನಗಳ ಒಳಗಾಗಿ ಕಡಿತಗೊಂಡ ಹಣ ರೀಫಂಡ್ ಆಗಲಿದೆ. ಇಅದರಿಂದ ಲಕ್ಷಾಂತರ ಟ್ರಕ್ ಡ್ರೈವರ್ ಗಳಿಗೆ ಅನುಕೂಲವಾಗಲಿದೆ.  ನ್ಯಾಷ ನಲ್ ಪೇಮೆಂಟ್ಸ್ ಕಾಪೆರ್Çರೇಷನ್ ಆಫ್ ಇಂಡಿಯಾ ಮತ್ತು ಬ್ಯಾಂಕು ಗಳೊಂದಿಗೆ ಕೈಜೋಡಿಸುವ ಮೂಲಕ ಫಾಸ್ಟ್‍ಟ್ಯಾಗ್ ವಹಿವಾಟುಗಳಿಗೆ ಸ್ವಯಂ ಮರುಪಾವತಿ ಮಾಡ್ಯೂಲ್ ಅನ್ನು ರಚಿಸಿದ ಮೊದಲ ಕಂಪನಿ ವೀಲ್ಸ್‍ಐ.

“ಡಬಲ್ ಅಥವಾ ತಪ್ಪು ಟೋಲ್ ಕಡಿತವು ಟ್ರಕ್ ಮಾಲೀಕರಿಗೆ ನಿರೀಕ್ಷೆಗಿಂತ ದೊಡ್ಡ ಸಮಸ್ಯೆಯಾಗಿದೆ. ಹೋಮ್ ಗ್ರಾನ್ ಸ್ಟಾರ್ಟಪ್‍ನಿಂದ ಈ ರೀತಿಯ ನಾವೀನ್ಯತೆ ಬರುತ್ತಿರುವುದನ್ನು ನೋಡಿ ರೋಮಾಂಚನಗೊಂಡಿದೆ” ಎಂದು ಐಡಿಎಫ್‍ಸಿ ಬ್ಯಾಂಕ್ ವಕ್ತಾರರು ತಿಳಿಸಿ ದ್ದಾರೆ. ಫಾಸ್ಟ್ಯಾಗ್ ಮೂಲಕ ದೈನಂದಿನ ಟೋಲ್ ಸಂಗ್ರಹವು ಸುಮಾರು 70 ಕೋಟಿ ರೂ. ಇದರಲ್ಲಿ ವಾಣಿಜ್ಯ ವಾಹನ ಮಾಲೀಕರು ಸುಮಾರು 60 ಕೋಟಿ ರೂ. 5 ಲಕ್ಷ ಫಾಸ್ಟ್ ಟ್ಯಾಗ್ ಖಾತೆಗಳಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ, ದೈನಂ ದಿನ ಟೋಲ್ ವಹಿವಾಟಿನ ಸುಮಾರು ಶೇ.3 ದೋಷಯುಕ್ತವಾಗಿದೆ. ಸ್ವಯಂ ಚಾಲಿತ ಮರುಪಾವತಿ ವೈಶಿಷ್ಟ್ಯವು ದಿನಕ್ಕೆ 2 ಕೋಟಿ ರೂ.ಗಳ ಟೋಲ್ ವಹಿ ವಾಟು ಸರಿಪಡಿಸುವ ಗುರಿ ಹೊಂದಿದೆ.

 

 

Translate »