ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಆಸ್ಪತ್ರೆಗೆ ದಾಖಲು
ಮೈಸೂರು

ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಆಸ್ಪತ್ರೆಗೆ ದಾಖಲು

December 21, 2020

ನವದೆಹಲಿ,ಡಿ.20-ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಅವರು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖ ಲಾಗಿದ್ದಾರೆ. ರೆಟಿನಾ ಹಿಂಭಾಗದಲ್ಲಿ ಸೋಂಕು ಉಂಟಾಗಿದ್ದು, ಆಸ್ಪತ್ರೆಗೆ ದಾಖಲಾಗಿರು ವುದಾಗಿ ಹೇಳಲಾಗಿದೆ. ಪ್ರಜ್ಞಾ ಸಿಂಗ್ ಕೆಲ ತಿಂಗಳಿಂದ ಏಮ್ಸ್ ಆಸ್ಪತ್ರೆಯಲ್ಲಿ ರೆಟಿನಾ ಸಂಬಂಧಿತ ಚಿಕಿತ್ಸೆ ಪಡೆಯುತ್ತಿ ದ್ದಾರೆ. 2 ದಿನಗಳ ಹಿಂದೆ ಅದಕ್ಕೆಂದೇ ಏಮ್ಸ್‍ಗೆ ತೆರಳಿದ್ದರು. ಆದರೆ ಆ ಸಮಯ ದಲ್ಲಿ ತಪಾಸಣೆ ನಡೆಸಿದ ವೈದ್ಯರು, ಆಸ್ಪ ತ್ರೆಗೆ ದಾಖಲಾಗಲು ಸೂಚಿಸಿದ್ದಾರೆ. ಪ್ರಜ್ಞಾ ಅವರ ಕೊರೊನಾ ಪರೀಕ್ಷೆ ವರದಿ ನೆಗೆ ಟಿವ್ ಬಂದಿದೆ. ಆದರೆ ಅವರು ಸಂಪೂರ್ಣ ವಾಗಿ ಗುಣವಾಗುವವರೆಗೂ ಆಸ್ಪತ್ರೆಯಲ್ಲೇ ಇರಬೇಕಿದೆ ಎಂದು ವೈದ್ಯರು ತಿಳಿಸಿ ದ್ದಾರೆ. ಈ ಕಾರಣದಿಂದಲೇ ಎನ್‍ಐಎ ನ್ಯಾಯಾಲಯಕ್ಕೆ ಹಾಜರಾಗಲು ಸಾಧ್ಯ ವಾಗಿಲ್ಲ ಎಂದು ಸಂಸದೆ ತಿಳಿಸಿದ್ದಾರೆ.

Translate »