ಸೊಳ್ಳೆಯಿಂದ ತಪ್ಪಿಸಿಕೊಳ್ಳಿ… ಡೆಂಗ್ಯೂ ಜ್ವರದಿಂದ ಪಾರಾಗಿ
ಮೈಸೂರು

ಸೊಳ್ಳೆಯಿಂದ ತಪ್ಪಿಸಿಕೊಳ್ಳಿ… ಡೆಂಗ್ಯೂ ಜ್ವರದಿಂದ ಪಾರಾಗಿ

May 17, 2019

ಮೈಸೂರು: ಸೊಳ್ಳೆ ಕಡಿತದಿಂದ ತಪ್ಪಿಸಿಕೊಳ್ಳಿ ಡೆಂಗ್ಯೂ ಜ್ವರ ದಿಂದ ಪಾರಾಗಿ… ಡೆಂಗ್ಯೂ ಜ್ವರದ ಬಗ್ಗೆ ಉದಾಸೀನ ಮಾಡಬೇಡಿ… ಹಗಲಾಗಲೀ ರಾತ್ರಿಯಾಗಲೀ ಮಲಗುವಾಗ ಮರೆ ಯದೇ ಸೊಳ್ಳೆ ಪರದೆ ಬಳಸಿ…

`ಈಡಿಸ್ ಈಜಿಪ್ಟೈ ಸೊಳ್ಳೆ’ ಕಚ್ಚು ವಿಕೆಯೇ `ಡೆಂಗ್ಯೂ ಜ್ವರ’ಕ್ಕೆ ಮೂಲ ಕಾರಣ. ಚಿಕುನ್‍ಗುನ್ಯಾ ಜ್ವರಕ್ಕೂ ಇದೇ ಸೊಳ್ಳೆ ಕಡಿತವೇ ಕಾರಣವಾಗುತ್ತೆ. ಹೀಗಾಗಿ ಈ ರೀತಿಯ ಘೋಷ ವಾಕ್ಯಗಳೊಂದಿಗೆ ಗುರುವಾರ ಮೈಸೂರಿನಲ್ಲಿ ನಡೆದ ಜಾಗೃತಿ ಜಾಥಾದಲ್ಲಿ ಸೊಳ್ಳೆಯ ನಿಯಂತ್ರಣದ ಪ್ರಾಮುಖ್ಯತೆ ಸಾರಲಾಯಿತು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಚೇರಿ ವತಿಯಿಂದ ಮೈಸೂರಿನ ಹಳೇ ಅಗ್ರಹಾರದ ಚಾಮರಾಜ ಜೋಡಿ ರಸ್ತೆಯ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಿಂದ ಜಾಥಾ ನಡೆಸಿ ಜಾಗೃತಿ ಮೂಡಿಸಲಾಯಿತು.

`ರಾಷ್ಟ್ರೀಯ ಡೆಂಗ್ಯೂ ದಿನ’ದ ಅಂಗ ವಾಗಿ ಏರ್ಪಡಿಸಿದ್ದ ಈ ಜಾಥಾಕ್ಕೆ ಚಾಲನೆ ನೀಡಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಆರ್.ವೆಂಕಟೇಶ್ ಮಾತನಾಡಿ, ಆರೋಗ್ಯ ಇಲಾಖೆಯ ಯಶಸ್ವಿ ಕಾರ್ಯಚಟುವಟಿಕೆ ಮೂಲಕ ಜಿಲ್ಲೆಯಲ್ಲಿ ಡೆಂಗ್ಯೂ ನಿಯಂ ತ್ರಿಸಲಾಗಿದೆ. ಈ ಸೋಂಕಿನ ಪ್ರಕರಣ ಬಹುತೇಕ ಶೂನ್ಯಕ್ಕೆ ಬಂದಿದ್ದು, ಇದು ಉತ್ತಮ ಬೆಳವಣಿಗೆ. ಸಾರ್ವಜನಿಕರ ಸಹಕಾರದಿಂದಲೂ ಡೆಂಗ್ಯೂ ನಿಯಂತ್ರಣ ಸಾಧ್ಯವಾಗಿದೆ. ಇದೀಗ ಮತ್ತೆ ಮಳೆಗಾಲ ಆರಂಭವಾಗಿದ್ದು, ಮನೆ ಆವರಣದಲ್ಲಿ ನೀರು ನಿಲ್ಲದಂತೆ ನೋಡಿಕೊಂಡರೆ ಡೆಂಗ್ಯೂ ಹರಡುವ ಈಡಿಸ್ ಈಜಿಪ್ಟೈ ಸೊಳ್ಳೆಗಳ ಉತ್ಪತ್ತಿ ತಡೆಗಟ್ಟಬಹುದು ಎಂದು ತಿಳಿಸಿದರು.

ಒಂದು ವೇಳೆ ಡೆಂಗ್ಯೂ ಜ್ವರ ಕಾಣಿಸಿ ಕೊಂಡರೆ ಸಾರ್ವಜನಿಕರು ಭಯಭೀತಿಗೆ ಒಳಗಾಗದೇ ಸೂಕ್ತ ಚಿಕಿತ್ಸೆಗೆ ಮುಂದಾಗ ಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಇದಕ್ಕೆ ಉಚಿತ ಚಿಕಿತ್ಸೆ ಲಭ್ಯವಿದ್ದು, ಇದನ್ನು ಸದ್ಬ ಳಕೆ ಮಾಡಿಕೊಳ್ಳಬಹುದು. ಮಳೆಗಾಲ ಆರಂಭವಾಗಿರುವ ಹಿನ್ನೆಲೆಯಲ್ಲಿ ಮನೆ ಸುತ್ತಮುತ್ತ ಪ್ರದೇಶಗಳಲ್ಲಿ ಸಂಗ್ರಹವಾಗುವ ನೀರಿನಲ್ಲಿ ಸೊಳ್ಳೆ ಸಂತಾನೋತ್ಪತ್ತಿ ಮಾಡು ತ್ತವೆ. ಹೀಗಾಗಿ ಮನೆಯಲ್ಲಿರುವ ನೀರಿನ ತೊಟ್ಟಿ, ಟ್ಯಾಂಕ್‍ಗಳನ್ನು ಮುಚ್ಚಿ, ಮೂರು ದಿನಗಳಿಗಿಂತ ಹೆಚ್ಚು ಕಾಲ ನೀರು ಸಂಗ್ರ ಹಿಸಬಾರದು. ಟೈರ್, ತೆಂಗಿನಕಾಯಿ ಚಿಪ್ಪು ಸೇರಿದಂತೆ ಮೊದಲಾದವುಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಲು ಸಾರ್ವ ಜನಿಕರು ಮುಂದಾಗಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ರೋಗವಾಹಕ ಆಶ್ರಿತ ರೋಗ ಗಳ ನಿಯಂತ್ರಣಾಧಿಕಾರಿ ಡಾ.ಎಸ್.ಚಿದಂ ಬರ ಮಾತನಾಡಿ, ದೇಶದಲ್ಲಿ 1995ರವ ರೆಗೆ ಡೆಂಗ್ಯೂ ಜ್ವರದ ಕಲ್ಪನೆ ಇರಲಿಲ್ಲ. ಆದರೆ ಆ ಬಳಿಕ ಇದರಿಂದ ಉಂಟಾದ ಸಾವು-ನೋವು ಅವಲೋಕಿಸಿ ಇದರ ಇರುವಿಕೆಯನ್ನು ಕಂಡುಕೊಳ್ಳಲಾಯಿತು. ಈ ಸೋಂಕು ಹರಡುವ ಈಡಿಸ್ ಈಜಿಪ್ಟೈ ಸೊಳ್ಳೆ 100 ಮೀ.ಗಿಂತ ಹೆಚ್ಚು ಎತ್ತರಕ್ಕೆ ಹಾರಲಾರದು. ಇದು ನೀರಿನಲ್ಲೇ ಮೊಟ್ಟೆ ಇಟ್ಟು ಸಂತಾನೋತ್ಪತ್ತಿ ಮಾಡುತ್ತದೆ ಎಂದು ಎಚ್ಚರಿಸಿದರು.

ಮನೆ ಆವರಣದಲ್ಲಿ ನೀರು ನಿಲ್ಲುವಂತೆ ಮಾಡಿದರೆ ಒಂದು ರೀತಿಯಲ್ಲಿ ಈ ಸೊಳ್ಳೆ ಗಳನ್ನು ನಾವೇ ಆಹ್ವಾನಿಸಿದಂತೆ. ನಾವೇ ಅವುಗಳ ವಾಸ ಸ್ಥಾನಕ್ಕೆ ಸೂಕ್ತ ಪರಿಸರ ನಿರ್ಮಿಸಿದಂತೆ ಆಗುತ್ತದೆ. ಹೀಗಾಗಿ ನೀರು ನಿಲ್ಲದಂತೆ ನೋಡಿಕೊಂಡು ಈ ಸೊಳ್ಳೆಗಳ ಸಂತಾನೋತ್ಪತ್ತಿಗೆ ತಡೆಯೊಡ್ಡಬಹುದು ಎಂದರು. ಪ್ರಾಥಮಿಕ ಆರೋಗ್ಯ ಕೇಂದ್ರ ದಿಂದ ಹೊರಟ ಜಾಗೃತಿ ಜಾಥಾವು, ದಳ ವಾಯಿ ಶಾಲೆ ರಸ್ತೆ, ವಾಣಿ ವಿಲಾಸ ರಸ್ತೆ, ನಾರಾಯಣಶಾಸ್ತ್ರಿ ರಸ್ತೆ ಮಾರ್ಗ ವಾಗಿ ಮತ್ತೆ ಚಾಮರಾಜ ಜೋಡಿ ರಸ್ತೆ ಮೂಲಕ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಲುಪಿ ಅಂತ್ಯಗೊಂಡಿತು. ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆ ಯರು, ನರ್ಸಿಂಗ್ ವಿದ್ಯಾರ್ಥಿಗಳು ಸೇರಿ ದಂತೆ ಮತ್ತಿತರರು ಜಾಥಾದಲ್ಲಿ ಪಾಲ್ಗೊಂ ಡಿದ್ದರು. ಜಿಲ್ಲಾ ಕುಟುಂಬ ಕಲ್ಯಾಣಾಧಿ ಕಾರಿ ಡಾ.ಮಹಮದ್ ಸಿರಾಜ್ ಅಹಮ್ಮದ್, ಜಿಲ್ಲಾ ಕಾಲರಾ ನಿಯಂತ್ರಣಾಧಿಕಾರಿ ಡಾ. ಕೆ.ಉಮೇಶ್, ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ.ರವಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಕುಸುಮ ಮತ್ತಿತರರು ಹಾಜರಿದ್ದರು.

Translate »