ಮೈಸೂರು

ಬಡ್ತಿ ಮೀಸಲಾತಿ: ಸುಪ್ರೀಂಕೋರ್ಟ್ ಆದೇಶಕ್ಕೆ ಬಿಎಸ್‍ಪಿ ಸ್ವಾಗತ

May 17, 2019

ಮೈಸೂರು: ಪರಿ ಶಿಷ್ಟ ಜಾತಿ ಮತ್ತು ಪಂಗಡದ ಸರ್ಕಾರಿ ನೌಕರರಿಗೆ ಬಡ್ತಿ ಮೀಸಲಾತಿ ಮುಂದುವರೆ ಸುವ ಸುಪ್ರೀಂಕೋರ್ಟ್ ತೀರ್ಪು ಸ್ವಾಗತಿ ಸಿರುವ ಬಿಎಸ್‍ಪಿ (ಬಹುಜನ ಸಮಾಜ ಪಕ್ಷ), ಈ ಹಿಂದೆ ಇದ್ದ ಹುದ್ದೆಗೇ ಬಡ್ತಿ ನೀಡಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಎಸ್‍ಪಿ ಸಂಪನ್ಮೂಲ ವ್ಯಕ್ತಿ ಡಾ.ಶಿವಕುಮಾರ್, ಎಸ್‍ಸಿ ಮತ್ತು ಎಸ್‍ಟಿ ನೌಕರರಿಗೆ ಹಿಂಬಡ್ತಿ ಆದ ಮೇಲೆ ಅವ ರಿದ್ದ ಹುದ್ದೆಗಳಿಗೆ ಸಾಮಾನ್ಯ ವರ್ಗದವ ರಿಗೆ ಬಡ್ತಿ ನೀಡಲಾಗಿದೆ. ಇದೀಗ ಸುಪ್ರಿಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಈ ಹಿಂದೆ ಇದ್ದಂತಹ ಹುದ್ದೆಗಳಿಗೇ ಎಸ್‍ಸಿ-ಎಸ್‍ಟಿ ನೌಕರರಿಗೆ ಬಡ್ತಿ ನೀಡಬೇಕು ಎಂದು ಆಗ್ರಹಿಸಿದರು. ಎಸ್‍ಸಿ-ಎಸ್‍ಟಿ ನೌಕರರ ಹಿಂಬಡ್ತಿ ಹಿನ್ನೆಲೆಯಲ್ಲಿ ಬಡ್ತಿ ಪಡೆದಿದ್ದ ಸಾಮಾನ್ಯ ವರ್ಗದವರಿಗೆ ಸ್ಥಾನ ಕಲ್ಪಿಸುವ ಸಮಸ್ಯೆ ನಿವಾರಿಸಲು ಅವರಿಗೆ ಸೂಪರ್ ನ್ಯೂಮರಿ ಹುದ್ದೆಗಳನ್ನು ಕಲ್ಪಿಸಿ ಕೊಟ್ಟು ಅವರಿಗೂ ನ್ಯಾಯ ನೀಡಲಿ ಎಂದರು.

ಬಡ್ತಿ ಮೀಸಲಾತಿಯಿಂದ ಸಾಮಾನ್ಯ ವರ್ಗದವರಿಗೆ ಅನ್ಯಾಯವಾಗಲಿದೆ ಎಂದು ಬಿ.ಕೆ.ಪವಿತ್ರ ಎಂಬುವರು ದಾವೆ ಹೂಡಿದ್ದ ಹಿನ್ನೆಲೆಯಲ್ಲಿ 2017ರಲ್ಲಿ ಎಸ್‍ಸಿ-ಎಸ್‍ಟಿ ನೌಕರರ ಬಡ್ತಿಗೆ ನ್ಯಾಯಾಲಯ ತಡೆ ನೀಡಿತ್ತು. ಈ ಸಂಬಂಧ ಸುಪ್ರಿಂ ಕೋರ್ಟ್‍ಗೆ ಮನವರಿಕೆ ಮಾಡಿಕೊಡಲು ಅಂದಿನ ಸಿದ್ದರಾಮಯ್ಯ ಸರ್ಕಾರಕ್ಕೆ ಬಿಎಸ್‍ಪಿ ಸೇರಿ ದಂತೆ ಅನೇಕ ಪ್ರಗತಿಪರ ಸಂಘಟನೆಗಳು ಒತ್ತಾಯಿಸಿದ್ದವು. ಇದರಿಂದ ಸಿದ್ದರಾಮಯ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿತ್ತು. ಇದೀಗ ಸಿದ್ದರಾಮಯ್ಯ ಸರ್ಕಾರದ ಸುಗ್ರೀವಾಜ್ಞೆ ಸೂಕ್ತವಾಗಿದೆ ಎಂದು ಸುಪ್ರಿಂ ಕೋರ್ಟ್ ತೀರ್ಪು ನೀಡಿದೆ. ಇದನ್ನು ಬಿಎಸ್‍ಪಿ ಸ್ವಾಗತಿಸುತ್ತದೆ ಎಂದು ತಿಳಿಸಿದರು. ಬಿಎಸ್‍ಪಿ ವಲಯ ಉಸ್ತು ವಾರಿ ಸೋಸಲೆ ಸಿದ್ದರಾಜು, ವಿಭಾಗದ ಉಸ್ತುವಾರಿ ರಾಹುಲ್, ನಗರಾಧ್ಯಕ್ಷ ಡಾ.ಬಸವರಾಜು, ನಗರ ಸಂಯೋಜಕ ದಿನಕರ್ ಸುದ್ದಿಗೋಷ್ಠಿಯಲ್ಲಿದ್ದರು.

Translate »