ನಾಳೆ ಬುದ್ಧ ಪೂರ್ಣಿಮೆ
ಮೈಸೂರು

ನಾಳೆ ಬುದ್ಧ ಪೂರ್ಣಿಮೆ

May 17, 2019

ಮೈಸೂರು: ಭಾರತ್ ಮೂಲ ನಿವಾಸಿ ಫೌಂಡೇಷನ್ ವತಿಯಿಂದ ಮೇ 18ರಂದು ಬುದ್ಧ ಪೂರ್ಣಿಮಾ ಮಹೋತ್ಸವ ಏರ್ಪಡಿಸಲಾಗಿದೆ ಎಂದು ಹರಿಹರ ಆನಂದಸ್ವಾಮಿ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರು ವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 10ಕ್ಕೆ ಮೈಸೂರಿನ ಪುರಭವನದ ಆವರಣದಿಂದ ಕಲಾಮಂದಿರದವರೆಗೆ ಬುದ್ಧ ರಥ ಮತ್ತು ಭೀಮ ರಥಗಳ ಮೆರವಣಿಗೆ ಹಮ್ಮಿಕೊಳ್ಳ ಲಾಗಿದೆ. ಡಾ.ಅಂಬೇಡ್ಕರ್ ಪ್ರತಿಮೆಗೆ ಪುಷ್ಪನಮನ ಸಲ್ಲಿಸುವ ಮೂಲಕ ಮೆರವಣಿಗೆಗೆ ಉನ್ನತ ಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಚಾಲನೆ ನೀಡಲಿದ್ದಾರೆ ಎಂದು ಹೇಳಿದರು.

ಅಂದು ಮಧ್ಯಾಹ್ನ 2ಕ್ಕೆ ಮೈಸೂರಿನ ಕಲಾಮಂದಿರ ದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು, ಮಹಬೋಧಿ ಮಿಷನ್‍ನ ಪೂಜ್ಯ ಬುದ್ಧ ಪ್ರಕಾಶ ಭಂತೇಜಿ ಸಾನಿಧ್ಯ ವಹಿಸಲಿದ್ದಾರೆ. ಫೌಂಡೇಷನ್‍ನ ಸಂಸ್ಥಾಪಕ ಅಧ್ಯಕ್ಷ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ, ರಮ್ಮನಹಳ್ಳಿಯ ಬಸವ ಧ್ಯಾನಕೇಂದ್ರದ ಶ್ರೀ ಬಸವ ಲಿಂಗ ಮೂರ್ತಿ ಶರಣರು, ಚಿತ್ರದುರ್ಗದ ಶ್ರೀ ಛಲವಾದಿ ಜಗದ್ಗುರು ಪೀಠದ ಬಸವನಾಗಿದೇವ ಶರಣರು, ಮುಡುಕುತೊರೆಯ ಶ್ರೀ ಉರಿಲಿಂಗ ಪೆದ್ದಿ ಶಾಖಾ ಮಠದ ಸಿದ್ದರಾಮೇಶ್ವರ ಸ್ವಾಮೀಜಿ ಉಪಸ್ಥಿತರಲಿದ್ದಾರೆ ಎಂದು ವಿವರಿಸಿದರು.

`ಅಂಬೇಡ್ಕರ್ ದರ್ಶನ’ ಕುರಿತು ಚಿಂತಕ ಪ್ರೊ.ಬಿ.ಪಿ.ಮಹೇಶ್‍ಚಂದ್ರಗುರು, `ಬುದ್ಧ ದರ್ಶನ’ ಕುರಿತು ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಹಾಗೂ `ಬುದ್ಧ-ಯುದ್ಧ’ ಕುರಿತು ಚಿಂತಕ ಡಾ.ಕೃಷ್ಣಮೂರ್ತಿ ಚಮರಂ ಉಪನ್ಯಾಸ ನೀಡಲಿದ್ದಾರೆ ಎಂದು ತಿಳಿಸಿದರು. ಚಿಂತಕ ಡಾ.ಕೃಷ್ಣಮೂರ್ತಿ ಚಮರಂ, ಎಪಿಎಂಸಿ ಉಪಾಧ್ಯಕ್ಷ ಚಿಕ್ಕಜವರಯ್ಯ, ಮುಖಂಡರಾದ ಹಿನಕಲ್ ಸೋಮು, ಸೋಮಯ್ಯ ಮಲೆಯೂರು ಗೋಷ್ಠಿಯಲ್ಲಿದ್ದರು.

Translate »