1765 ನಾಮಪತ್ರ ಸಲ್ಲಿಕೆ ಜನರಲ್ಲಿ ನಿರಾಸಕ್ತಿ
ಮೈಸೂರು

1765 ನಾಮಪತ್ರ ಸಲ್ಲಿಕೆ ಜನರಲ್ಲಿ ನಿರಾಸಕ್ತಿ

May 17, 2019

ಬೆಂಗಳೂರು: ಲೋಕಸಭಾ ಮಹಾಸಮರ ಹಾಗೂ ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾ ವಣೆಗಳಿಂದ ರಾಜಕೀಯ ಪಕ್ಷಗಳ ನಾಯಕರು ಸುಸ್ತಾಗಿದ್ದು, ನಗರ ಸ್ಥಳೀಯ ಸಂಸ್ಥೆಗಳ ಸಮರಕ್ಕೆ ನಿರಾಸಕ್ತಿ ಕಂಡುಬರುತ್ತಿದೆ. 191 ಗ್ರಾಮ ಪಂಚಾಯತ್‍ನ 201 ಸ್ಥಾನಗಳಿಗೆ ಹಾಗೂ 8 ತಾಲೂಕು ಪಂಚಾಯತ್‍ಗಳ 10 ಹಾಗೂ 67 ನಗರ ಸ್ಥಳೀಯ ಸಂಸ್ಥೆಗಳ 1332 ಸ್ಥಾನಗಳಿಗೆ ನಾಮಪತ್ರ ಸಲ್ಲಿಕೆ ಅವಧಿ ಅಂತ್ಯಗೊಂಡಿದೆ. ಗ್ರಾಮ ಪಂಚಾಯತ್‍ಗಳ 201 ಸ್ಥಾನಗಳಿಗೆ 137 ನಾಮಪತ್ರಗಳು ಸಲ್ಲಿಕೆಯಾಗಿದ್ದರೆ, ತಾಲೂಕು ಪಂಚಾಯತ್‍ನ 10 ಸ್ಥಾನಗಳ ಪೈಕಿ ಬೆಂಗಳೂರು ಪೂರ್ವ ತಾಲೂಕಿನ ಕಣ್ಣೂರು, ಬೀದರ್‍ನ ಮರಕುಂದ ಸ್ಥಾನಗಳಿಗೆ ನಾಮಪತ್ರಗಳೇ ಸಲ್ಲಿಕೆಯಾಗಿಲ್ಲ. ಉಳಿದ 8 ಕ್ಷೇತ್ರಗಳಿಗೆ 12 ನಾಮಪತ್ರಗಳು ಮಾತ್ರ ಸಲ್ಲಿಕೆಯಾಗಿವೆ. ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಪೈಕಿ ಬಹಳಷ್ಟು ಕಡೆ ಅವಿರೋಧ ಆಯ್ಕೆಯೂ ಇದಕ್ಕೆ ಕಾರಣವಾಗಿದೆ. ಅವಧಿ ಮುಗಿದಿರುವ 8 ನಗರಸಭೆ, 32 ಪುರಸಭೆ, 21 ಪಟ್ಟಣ ಪಂಚಾಯತ್ ಸೇರಿ 61 ನಗರ ಸ್ಥಳೀಯ ಸಂಸ್ಥೆಗಳ 1326 ಸ್ಥಾನಗಳಿಗೆ ಅವಧಿ ಕೊನೆಗೊಳ್ಳುವವರೆಗೆ 1765 ನಾಮಪತ್ರ ಸಲ್ಲಿಕೆಯಾಗಿದ್ದು, ಇದರಲ್ಲಿ ಕಾಂಗ್ರೆಸ್‍ನ 419, ಬಿಜೆಪಿಯ 445, ಜೆಡಿಎಸ್‍ನ 219 ಹಾಗೂ 629 ಪಕ್ಷೇತರ ಅಭ್ಯರ್ಥಿಗಳಿದ್ದಾರೆ.

Translate »