ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಜಾಗೃತಿ ಅಭಿಯಾನ
ಮೈಸೂರು

ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಜಾಗೃತಿ ಅಭಿಯಾನ

June 14, 2020

ಮೈಸೂರು, ಜೂ.13(ಎಂಟಿವೈ)- ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನದ ಅಂಗವಾಗಿ ಬಾಲ್ಯ ಹಾಗೂ ಕಿಶೋರ ಕಾರ್ಮಿಕ ಪದ್ಧತಿ ನಿರ್ಮೂಲನೆ ಕುರಿತು ಜಾಗೃತಿ ಮೂಡಿಸುವ 2 ದಿನಗಳ ಅಭಿ ಯಾನಕ್ಕೆ ಮೈಸೂರು ನ್ಯಾಯಾಲಯದ ಸೀನಿಯರ್ ಸಿವಿಲ್ ಜಡ್ಜ್ ಸುನಿಲ್ ಶೆಟ್ಟರ್ ಶನಿವಾರ ಚಾಲನೆ ನೀಡಿದರು.

ಕೋವಿಡ್-19 ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾಧಿಕಾರಿ ಕಚೇರಿ ಬಳಿ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ಸಂಯುಕ್ತಾಶ್ರಯ ದಲ್ಲಿ ಕಾರ್ಯಕ್ರಮ ಸರಳವಾಗಿ ನಡೆಯಿತು. ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಸಲು ವಾಗಿ ಮೈಸೂರು ನಗರದಲ್ಲಿ 5 ಹಾಗೂ ಪ್ರತಿ ತಾಲೂಕಲ್ಲಿ ತಲಾ ಒಂದು ಆಟೋ ರಿಕ್ಷಾ ಬಳಸಿ ನಡೆಸುವ ಜಾಗೃತಿ ಕಾರ್ಯ ಕ್ರಮಕ್ಕೆ ನ್ಯಾಯಾಧೀಶರು ಹಸಿರು ನಿಶಾನೆ ತೋರಿದರು. ಜಿಲ್ಲೆಯಲ್ಲಿ ಬಾಲಕಾರ್ಮಿಕ ಪದ್ಧತಿಯನ್ನು ಸಂಪೂರ್ಣ ನಿರ್ಮೂ ಲನೆ ಮಾಡಲು ಸಾರ್ವಜನಿಕರು ಸಹಕರಿ ಸುವಂತೆ ಸಲಹೆ ನೀಡಿದರು.

ಅಭಿಯಾನ: ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ನಿಟ್ಟಿನಲ್ಲಿ ಜಾಗೃತಿ ಮೂಡಿ ಸಲು ಆಟೋರಿಕ್ಷಾ ಬಳಸಿಕೊಳ್ಳಲಾಗು ತ್ತಿದೆ. 2 ದಿನ ಈ ರಿಕ್ಷಾಗಳು ಕೈಗಾರಿಕಾ ಪ್ರದೇಶ, ವಾಣಿಜ್ಯ ವಹಿವಾಟು ಸ್ಥಳ, ಜನನಿಬಿಡ ಪ್ರದೇಶ, ಪ್ರಮುಖ ವಾಣಿಜ್ಯ ಮಳಿಗೆ ಇರುವ ರಸ್ತೆಗಳಲ್ಲಿ ಸಂಚರಿಸಿ, ಭಿತ್ತಿಪತ್ರ ವಿತರಿಸಿ, 14 ವರ್ಷದೊಳಗಿನ ಬಾಲಕ, ಬಾಲಕಿಯರನ್ನು ಕೆಲಸಕ್ಕೆ ಸೇರಿಸಿ ಕೊಳ್ಳದಂತೆ ಜಾಗೃತಿ ಮೂಡಿಸಲಿವೆ.

ಜೈಲು ಶಿಕ್ಷೆ: ಕಾರ್ಮಿಕ ಇಲಾಖೆ ಸಹಾ ಯಕ ಆಯುಕ್ತ ಎ.ಸಿ.ತಮ್ಮಣ್ಣ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ನಿಟ್ಟಿನಲ್ಲಿ ಕಾರ್ಮಿಕ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ನಗರ ಹಾಗೂ ತಾಲೂಕು ಕೇಂದ್ರದಲ್ಲಿ ಬೇಕರಿ, ಮನೆಗೆಲಸ, ಹಾರ್ಡ್ ವೇರ್ ಶಾಪ್ ಹಾಗೂ ಗುಜರಿ ಸೇರಿದಂತೆ ವಿವಿಧ ಅಂಗಡಿಗಳಲ್ಲಿ 14 ವರ್ಷದೊಳ ಗಿನ ಬಾಲಕ, ಬಾಲಕಿಯರನ್ನು ಕೆಲಸಕ್ಕೆ ಸೇರಿಸಿಕೊಳ್ಳಬಾರದೆಂದು ಸೂಚನೆ ನೀಡ ಲಾಗುತ್ತಿದೆ. ನಿಯಮ ಉಲ್ಲಂಘಿಸಿದರೆ 2 ವರ್ಷ ಜೈಲುಶಿಕ್ಷೆ ಹಾಗೂ 50 ಸಾವಿರ ರೂ. ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಸಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಬಾಲಕಾರ್ಮಿಕ ಯೋಜನಾ ಸೊಸೈಟಿ ಯೋಜನಾ ನಿರ್ದೇಶಕ ಮಲ್ಲಿಕಾರ್ಜುನ, ಕಾರ್ಮಿಕಾ ಧಿಕಾರಿ ಮಂಜುಳಾ ದೇವಿ, ಹಿರಿಯ ಕಾರ್ಮಿಕ ನಿರೀಕ್ಷಕರಾದ ವೀಣಾ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

 

 

 

 

Translate »