ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎಲ್.ನಾಗೇಂದ್ರರಿಂದ ಗುದ್ದಲಿ ಪೂಜೆ
ಮೈಸೂರು

ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎಲ್.ನಾಗೇಂದ್ರರಿಂದ ಗುದ್ದಲಿ ಪೂಜೆ

June 14, 2020

ಮೈಸೂರು, ಜೂ. 13(ಪಿಎಂ)-ಮೈಸೂರಿನ ಚಾಮ ರಾಜ ವಿಧಾನಸಭಾ ಕ್ಷೇತ್ರದ ಮೈಸೂರು ಮಹಾನಗರ ಪಾಲಿಕೆ ವಾರ್ಡ್ 21 ಹಾಗೂ ವಾರ್ಡ್ 23ರ ವ್ಯಾಪ್ತಿಯಲ್ಲಿ ಒಟ್ಟು 1.55 ಕೋಟಿ ರೂ. ವೆಚ್ಚದ (1 ಕೋಟಿ 55 ಲಕ್ಷ ರೂ.) ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಶನಿವಾರ ಗುದ್ದಲಿ ಪೂಜೆ ನೆರವೇರಿಸಿದರು.

ಎಸ್‍ಎಫ್‍ಸಿ (ರಾಜ್ಯ ಹಣಕಾಸು ಆಯೋಗ) ಶಾಸಕರ ವಿವೇಚನಾ ವಿಶೇಷ ಅನುದಾನ ಹಾಗೂ ಮಹಾನಗರ ಪಾಲಿಕೆ ಅನುದಾನದಲ್ಲಿ ಕೈಗೆತ್ತಿಕೊಂಡಿ ರುವ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕರು ಚಾಲನೆ ನೀಡಿದರು. ಎಸ್‍ಎಫ್‍ಸಿ ಅನುದಾನದ 50 ಲಕ್ಷ ರೂ. ವೆಚ್ಚದಲ್ಲಿ ವಾರ್ಡ್ 21ರ ಸರಸ್ವತಿಪುರಂನ ಭೀಮನಕೊಲ್ಲಿ ರಸ್ತೆಯಲ್ಲಿ ನಿರ್ಮಾಣ ಹಂತದಲ್ಲಿ ರುವ ವಾಲ್ಮೀಕಿ ಭವನ ಕಟ್ಟಡದ ಮುಂದುವರೆದ ಕಾಮಗಾರಿ ಹಾಗೂ ಎಸ್‍ಎಫ್‍ಸಿ ಅನುದಾನದ 50 ಲಕ್ಷ ರೂ. ವೆಚ್ಚದಲ್ಲಿ ಸರಸ್ವತಿಪುರಂನ ಶ್ರೀರಾಮ ಪಾರ್ಕ್ ಅಭಿವೃದ್ಧಿ ಕಾಮಗಾರಿಗೆ ಶಾಸಕರು ಚಾಲನೆ ನೀಡಿದರು.

ಪಾಲಿಕೆ ಸದಸ್ಯರಾದ ಸಿ.ವೇದಾವತಿ, ವಿ.ಲೋಕೇಶ್ ಪಿಯಾ, ಮುಖಂಡ ಶಿವಶಂಕರ್ ಸೇರಿದಂತೆ ಪಕ್ಷದ ಹಾಗೂ ಸ್ಥಳೀಯ ಮುಖಂಡರು ಹಾಜರಿದ್ದರು.

ವಾರ್ಡ್ 23ರ ವ್ಯಾಪ್ತಿಯಲ್ಲಿ ಜಗನ್ಮೋಹನ ಅರಮನೆ ಬಳಿಯ ದೇಸಿಕಾ ರಸ್ತೆ, ಹಳೆ ಸಂತೇಪೇಟೆ ರಸ್ತೆ, ಕೃಷ್ಣವಿಲಾಸ ರಸ್ತೆಯ ಆಯ್ದ ಭಾಗಗಳಲ್ಲಿ ಮರು ಡಾಂಬರೀಕರಣಕ್ಕಾಗಿ ಎಸ್‍ಎಫ್‍ಸಿ ಅನುದಾನದ 25 ಲಕ್ಷ ರೂ. ವೆಚ್ಚದ ಕಾಮಗಾರಿ, ಡಿ.ಸುಬ್ಬಯ್ಯ ರಸ್ತೆ ಯಿಂದ ಚಾಮರಾಜಜೋಡಿ ರಸ್ತೆಯವರೆಗೆ ಮರು ಡಾಂಬರೀಕರಣಕ್ಕೆ ನಗರ ಪಾಲಿಕೆ ಅನುದಾನದ 20 ಲಕ್ಷ ರೂ. ವೆಚ್ಚದ ಕಾಮಗಾರಿಗೆ ಶಾಸಕರು ಚಾಲನೆ ನೀಡಿದರು. ಅಲ್ಲದೆ, ಶಾಂತಲ ಚಿತ್ರಮಂದಿರದ ಹಿಂಭಾಗದಲ್ಲಿರುವ ವೆಂಕಟರಮಣಸ್ವಾಮಿ ದೇವಸ್ಥಾನದ ರಸ್ತೆಯ ಮರು ಡಾಂಬರೀಕರಣಕ್ಕೆ ನಗರ ಪಾಲಿಕೆ ಅನುದಾನದ 10 ಲಕ್ಷ ರೂ. ವೆಚ್ಚದ ಕಾಮಗಾರಿಗೆ ಶಾಸಕರು ಗುದ್ದಲಿ ಪೂಜೆ ನೆರವೇರಿಸಿದರು.

ವಾರ್ಡ್ 23ರ ನಗರ ಪಾಲಿಕೆ ಸದಸ್ಯೆ ಎಂ.ಪ್ರಮೀಳಾ ಭರತ್, ಚಾಮರಾಜ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಸೋಮಶೇಖರ ರಾಜು, ಪ್ರಧಾನ ಕಾರ್ಯ ದರ್ಶಿಗಳಾದ ಪುನೀತ್, ರಮೇಶ್, ಯುವ ಮೋರ್ಚಾ ಅಧ್ಯಕ್ಷ ಸಚಿನ್, ಮುಖಂಡರಾದ ಸತ್ಯ ಮೂರ್ತಿ ಎಂ.ಚೆಟ್ಟಿ, ಲಕ್ಷ್ಮೀ, ಚರಣ್, ಶ್ರೀನಿವಾಸ್, ಶಿವಕುಮಾರ್, ವಿಷ್ಣುಕುಮಾರ್, ಶಾಂತಿಲಾಲ್, ಪಾಲಿಕೆ ಆರೋಗ್ಯಾಧಿಕಾರಿ ಡಾ.ಜಯಂತ್, ಪಾಲಿಕೆ ವಲಯ ಕಚೇರಿ-4ರ ಸಹಾಯಕ ಆಯುಕ್ತರಾದ ಪ್ರಿಯದರ್ಶಿನಿ ಮತ್ತಿತರರು ಹಾಜರಿದ್ದರು.

Translate »