ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಖಂಡಿಸಿ ರೈತ ಸಂಘ ಪ್ರತಿಭಟನೆ
ಮೈಸೂರು

ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಖಂಡಿಸಿ ರೈತ ಸಂಘ ಪ್ರತಿಭಟನೆ

June 14, 2020

ಮೈಸೂರು, ಜೂ. 13(ಪಿಎಂ)- ಕರ್ನಾ ಟಕ ಭೂ ಸುಧಾರಣಾ ಕಾಯ್ದೆಗೆ ತಿದ್ದು ಪಡಿ ಮಾಡಿರುವುದನ್ನು ವಿರೋಧಿಸಿ ಕರ್ನಾ ಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಮೈಸೂರಿನ ನ್ಯಾಯಾಲಯಗಳ ಮುಂದಿನ ಗಾಂಧಿ ಪುತ್ಥಳಿ ಎದುರು ಶನಿ ವಾರ ಪ್ರತಿಭಟನೆ ನಡೆಸಿದವು. ರೈತ ಸಂಘದ ಮುಖಂಡರು ಹಾಗೂ ಕಾರ್ಯಕರ್ತರು ತಿದ್ದುಪಡಿ ಕಾಯ್ದೆಯ ಕರಡು ಪ್ರತಿ ಸುಟ್ಟು ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಈಗಿನ ಕರ್ನಾಟಕ ಭೂ ಸುಧಾರಣೆ ಕಾಯ್ದೆ ಪ್ರಗತಿಪರ ಹಾಗೂ ಜನಪರವಾಗಿದೆ. ಸರ್ಕಾರದ ಉದ್ದೇಶದಂತೆ ಈ ಕಾಯ್ದೆಯ ಕಲಂ 79 ಎ, ಬಿ ಮತ್ತು ಸಿ ಹಾಗೂ 80 ತೆಗೆದುಹಾಕಿದರೆ ಕಾಯ್ದೆಯ ಅಸ್ತಿತ್ವವೇ ಉಳಿಯುವುದಿಲ್ಲ ಎಂದರು.

ಪ್ರತಿಭಟನೆ: ಪ್ರತಿಭಟನೆಯ ಮೊದಲ ಹಂತವಾಗಿ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಜೂ.15ರ ಬೆಳಿಗ್ಗೆ 11ರಿಂದ 12ರವರೆಗೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಎಚ್ಚರಿಕೆ ಪತ್ರ ರವಾನಿ ಸಲಿದ್ದೇವೆ. 2ನೇ ಹಂತವಾಗಿ ಜೂ.27ರಿಂದ 30ರವರೆಗಿನ ಅವಧಿಯಲ್ಲಿ 1 ಸಾವಿರ ಗ್ರಾಪಂ ಎದುರು ಪ್ರತಿಭಟನೆ ನಡೆಸಲಿದ್ದೇವೆ. ಎಪಿಎಂಸಿ ಕಾಯ್ದೆ ತಿದ್ದುಪಡಿ ಮಾಡಿದ ಉದ್ದೇಶ, ಭೂ ಸುಧಾರಣೆ ಕಾಯ್ದೆ ತಿದ್ದು ಪಡಿ ಮಾಡಿದರೆ ಆಗುವ ಸಮಸ್ಯೆಗಳು ಹಾಗೂ ವಿದ್ಯುತ್ ಪೂರೈಕೆ ವ್ಯವಸ್ಥೆ ಖಾಸಗಿಕರಣ ಮಾಡುತ್ತಿರುವುದರ ಹುನ್ನಾರ ಸೇರಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನ ವಿರೋಧಿ ನೀತಿಯನ್ನು ಜನತೆಗೆ ಮುಟ್ಟಿಸಲಿ ದ್ದೇವೆ. ಈ ಬಗ್ಗೆ 10 ಲಕ್ಷ ಕುಟುಂಬಗಳಿಗೆ ಕರಪತ್ರ ಹಂಚಲು ಉದ್ದೇಶಿಸಲಾಗಿದೆ. 3ನೇ ಹಂತದ ಹೋರಾಟದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಬೀದಿಗಿಳಿದು ಹೋರಾಟ ಮಾಡಲಿದ್ದೇವೆ. ಗ್ರಾಮೀಣ ಪ್ರದೇಶದಿಂದ ಬಂದ ಶಾಸಕರು, ವಿಧಾನಪರಿಷತ್ ಸದ ಸ್ಯರು ಪಕ್ಷಾತೀತವಾಗಿ ಭೂ ಸುಧಾರಣಾ ಕಾಯ್ದೆ ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸಿ ರೈತ ಸಮುದಾಯ ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ನೀರು ಹರಿಸಬೇಡಿ: ಕಾವೇರಿ ನದಿ ನೀರು ನಿರ್ವಾಹಣಾ ಪ್ರಾಧಿಕಾರ ತಮಿಳು ನಾಡಿಗೆ ಕಾವೇರಿ ನೀರು ಹರಿಸಲು ಸೂಚನೆ ನೀಡಿದ್ದು, ರಾಜ್ಯ ಸರ್ಕಾರ ನೀರು ಹರಿಸದೇ ನಮ್ಮ ಸಂಕಷ್ಟವನ್ನು ಪ್ರಾಧಿಕಾರಕ್ಕೆ ಮನವರಿಕೆ ಮಾಡಿಕೊಡಲು ಮುಂದಾಗಬೇಕು ಎಂದರು.

ರೈತ ಮುಖಂಡರಾದ ಉಗ್ರ ನರಸಿಂº Àಗೌಡ, ಹೆಚ್.ಸಿ.ಲೋಕೇಶ್ ರಾಜೇ ಅರಸ್, ನೇತ್ರಾವತಿ, ಸ್ವರಾಜ್ ಇಂಡಿಯಾದ ಅಭಿರುಚಿ ಗಣೇಶ್ ಮತ್ತಿತರರು ಪ್ರತಿ ಭಟನೆಯಲ್ಲಿ ಭಾಗವಹಿಸಿದ್ದರು.

ಸಿಎಂಗೆ ರೈತ ಸಂಘ ಬಹಿರಂಗ ಪತ್ರ
ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ ಅವರಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಬಹಿರಂಗ ಪತ್ರ ಬರೆದಿದ್ದು, ಭೂ ಸುಧಾ ರಣೆ ಕಾಯ್ದೆ ತಿದ್ದುಪಡಿಯಲ್ಲಿ ರೈತರ ಯಾವ ಹಿತವನ್ನು ಕಾಯುತ್ತೀರಿ ಎಂಬುದನ್ನು ತಮ್ಮ ಆತ್ಮಸಾಕ್ಷಿ ಒಪ್ಪುವು ದಾದರೆ ಬಹಿರಂಗಪಡಿಸಿ ಎಂದು ಸವಾಲೆಸೆದಿದೆ.

ಲಾಕ್‍ಡೌನ್ ಸಮಯದಲ್ಲಿ ಕೇಂದ್ರದ ಒತ್ತಡಕ್ಕೆ ಮಣಿದು ಎಪಿಎಂಸಿ ಕಾಯ್ದೆಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತಂದು ಕೃಷಿ ಮಾರುಕಟ್ಟೆಯನ್ನು ಬಂಡ ವಾಳಶಾಹಿಗಳಿಗೆ ಒಪ್ಪಿಸಿದ್ದೀರಿ. ಈಗ ಕರ್ನಾಟಕ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತರಲು ತೀರ್ಮಾನಿಸಿದ್ದೀರಿ. ಈ ತಿದ್ದುಪಡಿ ಹಿಂದೆ ಕಂಪನಿಗಳ ಹಿತಾಸಕ್ತಿ ಎದ್ದು ಕಾಣುತ್ತಿದೆ. ಗೇಣಿ ದಾರರ ಹೋರಾಟದಲ್ಲಿ ನೀವು ಕೂಡ ಭಾಗವಹಿಸಿರುವುದನ್ನು ಮರೆತಿ ದ್ದೀರಾ? ಎಂದು ಪ್ರಶ್ನಿಸಿದೆ.

Translate »