ವಿದ್ಯಾರ್ಥಿಗಳಿಗೆ ಆನ್‍ಲೈನ್ ಶಿಕ್ಷಣ: ಶಿಕ್ಷಕರಿಗೂ, ಪೋಷಕರಿಗೂ ಕಷ್ಟಕಷ್ಟ
ಮೈಸೂರು

ವಿದ್ಯಾರ್ಥಿಗಳಿಗೆ ಆನ್‍ಲೈನ್ ಶಿಕ್ಷಣ: ಶಿಕ್ಷಕರಿಗೂ, ಪೋಷಕರಿಗೂ ಕಷ್ಟಕಷ್ಟ

June 14, 2020

ಮೈಸೂರು, ಜೂ.13(ಎಸ್‍ಪಿಎನ್)- ಕೊರೊನಾ ಹಾವಳಿ ಹಿನ್ನೆಲೆಯಲ್ಲಿ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಆನ್‍ಲೈನ್ ಪಾಠ ಗಳು ಆರಂಭವಾಗಿವೆ. ಆನ್‍ಲೈನ್ ಶಿಕ್ಷಣಕ್ಕೆ ದಿನಕ್ಕೆ ಕನಿಷ್ಟ 2ಜಿಬಿ ಡೇಟಾ ಅಗತ್ಯವಿದೆ. ಇದರ ವೆಚ್ಚ ಭರಿಸಲು ಕೆಲ ಪೋಷಕರಿಗೆ ಕಷ್ಟವಾಗುತ್ತಿದೆ ಎಂಬ ಮಾತುಗಳು ಪೋಷಕರು ಮತ್ತು ಶಿಕ್ಷಕರ ವಲಯ ದಿಂದ ಕೇಳಿ ಬರುತ್ತಿವೆ.

ಖಾಸಗಿ ಮತ್ತು ಸರ್ಕಾರಿ ಪ್ರೌಢಶಾಲಾ ಮಕ್ಕಳಿಗೆ ಜೂóಮ್ ಆಪ್ ಬಳಸಿ ಆನ್‍ಲೈನ್ ಪಾಠ ಆರಂಭಿಸಲಾಗಿದೆ. ಒಮ್ಮೆ ನೆಟ್‍ವರ್ಕ್ ಪ್ರಾಬ್ಲಂ, ಮತ್ತೊಮ್ಮೆ ಶಿಕ್ಷಕರ ಪಾಠ ಮಕ್ಕಳಿಗೆ ಬೋರ್ ಹಿಡಿಸುತ್ತಿದೆ. ಈ ಆಪ್ ಬಳಕೆ ಅರ್ಧಗಂಟೆ ಮಾತ್ರ ಫ್ರೀಯಾಗಿ ಬಳಕೆಗೆ ಲಭ್ಯ. ಮತ್ತೊಂದು ಅವಧಿಗೆ ಬಳಸಬೇಕಾ ದರೆ ಮತ್ತೆ ಜೂóಮ್ ಆಫ್ ಲಾಗಿನ್ ಆಗ ಬೇಕು. ಅಲ್ಲದೆ, ವಿದ್ಯಾರ್ಥಿಗಳಿಗೆ ಶಿಕ್ಷಕರು ಉಚ್ಛರಿಸುವ ವಾಕ್ಯಗಳು ಸರಿಯಾಗಿ ಕೇಳಿ ಸುವುದಿಲ್ಲ. ಒಟ್ಟಿನಲ್ಲಿ ಆನ್‍ಲೈನ್ ಪಾಠ ಸರ್ಕಸ್ ರೀತಿಯಾಗಿದೆ ಎಂದು ಅನು ದಾನಿತ ಖಾಸಗಿ ಶಾಲಾ ಶಿಕ್ಷಕರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

ಆನ್‍ಲೈನ್ ಶಿಕ್ಷಣಕ್ಕೆ ನಿತ್ಯ 2ಜಿಬಿ ಡೇಟ ಅಗತ್ಯವಿದೆ. ಒಂದು ತರಗತಿಯಲ್ಲಿ 50 ಮಕ್ಕಳಿದ್ದರೆ, ಎಲ್ಲರೂ ಇಂಟರ್‍ನೆಟ್ ಬಳಕೆಗೆ ಇಷ್ಟೊಂದು ಮೌಲ್ಯದ ಕರೆನ್ಸಿ ಹಾಕಿಸಲು ಸಾಧ್ಯವೇ? ಕೊರೊನಾದಿಂದಾಗಿ ಕೆಲವು ಪೋಷಕರು, ಕೆಲಸವಿಲ್ಲದೆ ಮನೆಯಲ್ಲಿ ದ್ದಾರೆ. ಅವರು ನಿತ್ಯ ಊಟಕ್ಕೂ ಕಷ್ಟ ಅನು ಭವಿಸುತ್ತಿದ್ದಾರೆ. ಈ ಸಂಗತಿಯನ್ನು ಬೇರೆ ಯವರ ಬಳಿ ಹೇಳಿಕೊಳ್ಳಲಾಗದೆ ಕೆಲ ವರು ತೋಳಲಾಟ ಅನುಭವಿಸುತ್ತಿದ್ದಾರೆ ಎಂದು ಶಿಕ್ಷಕರು ವಸ್ತುಸ್ಥಿತಿಯನ್ನು `ಮೈಸೂರು ಮಿತ್ರ’ನಿಗೆ ವಿವರಿಸಿದರು.

ಶಿಕ್ಷಕರ ಅಳಲು: ಆನ್‍ಲೈನ್‍ನಲ್ಲಿ ಪಾಠ ಆರಂಭಿಸಿದಾಗ, ಪೋಷಕರ ಜೊತೆಗಿ ರುವ ಮಕ್ಕಳು, ಪಾಠದ ಕಡೆ ಅಷ್ಟಾಗಿ ಗಮನ ಹರಿಸುತ್ತಿರುವುದಿಲ್ಲ. ಹೇಳಿದ ಪಾಠವನ್ನು ಸರಿಯಾಗಿ ಕೇಳುತ್ತಿದ್ದಾರೆಯೇ? ಇಲ್ಲವೇ? ಎಂಬುದನ್ನು ಗಮನಿಸಲೂ ಸಾಧ್ಯವಾಗು ತ್ತಿಲ್ಲ ಎಂಬುದು ಶಿಕ್ಷಕರ ಅಳಲು.

Translate »