ಸರ್ಕಾರದ ಸೌಲಭ್ಯಗಳ ಅರಿವು ಮಹಿಳೆಯರಿಗೆ ಅಗತ್ಯ
ಮೈಸೂರು

ಸರ್ಕಾರದ ಸೌಲಭ್ಯಗಳ ಅರಿವು ಮಹಿಳೆಯರಿಗೆ ಅಗತ್ಯ

March 13, 2020

ಕೆ.ಆರ್.ನಗರ, ಮಾ.12(ಕೆಟಿಆರ್)- ಸರ್ಕಾರ ಮಹಿಳೆಯರ ಏಳಿಗೆಗಾಗಿಯೇ ಮೀಸಲಿಟ್ಟಿರುವ ಸೌಲಭ್ಯಗಳ ಬಗ್ಗೆ ಮಹಿಳಾ ಸಂಘಟನೆಗಳು ಅರಿತು ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಈ ಮೂಲಕ ಮಹಿಳೆ ಯರು ಸ್ವಾವಲಂಭಿಗಳಾಗಬೇಕು ಎಂದು ಜಿಪಂ ಸದಸ್ಯ ಡಿ.ರವಿ ಶಂಕರ್ ಸಲಹೆ ನೀಡಿದರು.

ಪಟ್ಟಣದ ಮಂಜುನಾಥ ಕಲ್ಯಾಣ ಮಂಟಪದಲ್ಲಿ ಸ್ಮಾರ್ಟ್ ಲೇಡಿಸ್ ಕ್ಲಬ್ ಮತ್ತು ಭಾರತ್ ಮಾತಾ ಸೇವಾ ಟ್ರಸ್ಟ್ ನಿಂದ ನಡೆದ ಅಂತರ ರಾಷ್ಟ್ರೀಯ ಮಹಿಳಾ ದಿನಾ ಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಸ್ಪರ್ಧಾತ್ಮಕ ದಿನಗಳಲ್ಲಿ ಮಹಿಳೆ ಯರು ಪುರುಷರಿಗೆ ಸರಿ ಸಮಾನರಾಗಿ ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡುತ್ತಿದ್ದಾರೆ. ಅವರಿಗೆ ಸರ್ವರೂ ಸಹಕಾರ ನೀಡಬೇಕು ಎಂದರು.

ಪೋಷಕರು ಮನೆಯಲ್ಲಿ ಹೆಣ್ಣು ಮಕ್ಕಳಿಗೆ ತನ್ನನ್ನು ತಾನು ರಕ್ಷಿಸಿಕೊಳ್ಳುವ ಸಾಮಥ್ರ್ಯ ವನ್ನು ಹೇಳಿಕೊಡಬೇಕು. ಆಗ ಸಮಾಜ ದಲ್ಲಿ ಹೆಣ್ಣು ಮಕ್ಕಳು ಕಿರುಕುಳಕ್ಕೆ ಒಳಗಾ ಗಲು ಸಾಧ್ಯವಿಲ್ಲ. ಅವರಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. 22 ವರ್ಷ ನಂತರ ಹೆಣ್ಣು ಮಕ್ಕಳಿಗೆ ವಿವಾಹ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಪಟ್ಟಣದ ಪುರ ಸಭೆಗೆ ಆಯ್ಕೆಯಾಗಿರುವ ಸರೋಜ ಮಹದೇವ್, ಶಾರದಾ ನಾಗೇಶ್, ಪಲ್ಲವಿ ಆನಂದ್, ಎಂ.ಎಸ್.ಅಶ್ವಿನಿ, ಆರ್.ಮಂಜುಳಾ, ವಸಂತಮ್ಮ, ಕೆ.ವಿ.ವೀಣಾ, ಸೌಮ್ಯ ಲೋಕೇಶ್, ವಹೀದಾ ಬಾನು, ಅಫ್ರೋಜ ಉನ್ನೀಸಾ ಅವರನ್ನು ಸನ್ಮಾನಿಸಲಾಯಿತು. ಕೆಪಿಸಿಸಿ ಕಾರ್ಯ ದರ್ಶಿ ಡಾ.ನಾಗಲಕ್ಷ್ಮಿ, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಪ್ರಸೂತಿ ತಜ್ಞೆ ಡಾ. ಚಂದ್ರಕಲಾ, ಭಾರತ್ ಮಾತಾ ಸೇವಾ ಟ್ರಸ್ಟ್ ಅಧ್ಯಕ್ಷೆ ನವೀನಾ ರಂಗಶೆಟ್ಟಿ, ಸ್ಮಾರ್ಟ್ ಲೇಡಿಸ್ ಕ್ಲಬ್ ಅಧ್ಯಕ್ಷೆ ಸ್ಮಿತಾ ಜಯಂತ್, ಗೌರವಾಧ್ಯಕ್ಷೆ ಸುನೀತಾ ರವಿಶಂಕರ್, ಭವಾನಿ ರಮೇಶ್, ಸುನೀತಾ ರಾಮೇಗೌಡ, ಭಾಗ್ಯಮ್ಮ, ಶಿಲ್ಪಾ ರಾಜಶೇಖರ್, ಪೂರ್ಣಿಮಾ, ದ್ರಾಕ್ಷಾಯಿಣಿ, ಕುಮಾರಮ್ಮ, ರೂಪಾ, ಅರ್ಕೇ ಶ್ವರ ಸೇವಾ ಸಮಿತಿ ಅಧ್ಯಕ್ಷೆ ಶಾರದಮ್ಮ, ಪುರಸಭೆ ಸದಸ್ಯ ನಟರಾಜು ಹಾಜರಿದ್ದರು.

Translate »