ಸಾಹುಕಾರಹುಂಡಿ ಡೈರಿ ಅಧ್ಯಕ್ಷರಾಗಿ ಬಿ.ರಮೇಶ್ ಆಯ್ಕೆ
ಮೈಸೂರು

ಸಾಹುಕಾರಹುಂಡಿ ಡೈರಿ ಅಧ್ಯಕ್ಷರಾಗಿ ಬಿ.ರಮೇಶ್ ಆಯ್ಕೆ

April 12, 2021

ಮೈಸೂರು,ಏ.11(ಎಂಟಿವೈ)- ಮೈಸೂರು ತಾಲೂಕು ಸಾಹುಕಾರಹುಂಡಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಬಿ.ರಮೇಶ್, ಉಪಾಧ್ಯಕ್ಷೆಯಾಗಿ ಸಣ್ಣಮ್ಮ ಅವಿರೋಧ ವಾಗಿ ಆಯ್ಕೆಯಾಗಿದ್ದು, ನೂತನ ಪದಾಧಿ ಕಾರಿಗಳನ್ನು ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ರಾಜ್ಯ ಅಪೆಕ್ಸ್ ಬ್ಯಾಂಕ್ ಉಪಾ ಧ್ಯಕ್ಷ ಜಿ.ಡಿ.ಹರೀಶ್‍ಗೌಡ ಅಭಿನಂದಿಸಿದ್ದಾರೆ.

ಸಾಹುಕಾರಹುಂಡಿ ಹಾಲು ಉತ್ಪಾದಕರ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಪ್ರತಿಸ್ಪರ್ಧಿಗಳು ಇಲ್ಲದ ಕಾರಣ ಅಧ್ಯಕ್ಷರಾಗಿ ಬಿ.ರಮೇಶ್, ಉಪಾಧ್ಯಕ್ಷೆಯಾಗಿ ಸಣ್ಣಮ್ಮ ಅವಿರೋಧ ವಾಗಿ ಆಯ್ಕೆಯಾದರು. ಬಳಿಕ ನಡೆದ ಸರಳ ಸಮಾರಂಭದಲ್ಲಿ ಹೊಸ ಪದಾಧಿಕಾರಿ ಗಳನ್ನು ರಾಜ್ಯ ಅಪೆಕ್ಸ್ ಬ್ಯಾಂಕ್ ಉಪಾಧ್ಯಕ್ಷ ಜಿ.ಡಿ.ಹರೀಶ್‍ಗೌಡ ಅಭಿನಂದಿಸಿದರು. ಇದೇ ವೇಳೆ ಮಾತನಾಡಿದ ಅವರು, ಗ್ರಾಮೀಣ ಭಾಗದ ಮಹಿಳೆಯರು ಹೈನು ಗಾರಿಕೆ, ಗುಡಿಕೈಗಾರಿಕೆಗಳನ್ನು ಆರಂಭಿಸಿ ಸ್ವಾವಲಂಬಿಗಳಾಗಿ ರೂಪುಗೊಳ್ಳಬೇಕು. ಎಂಸಿಡಿಸಿಸಿ ಬ್ಯಾಂಕ್ ವತಿಯಿಂದ ಮಹಿಳಾ ಸಂಘಗಳಿಗೆ 5 ಲಕ್ಷದವರೆಗೆ ಬಡ್ಡಿ ರಹಿತ ಸಾಲವನ್ನು ನೀಡಲಾಗುತ್ತಿದೆ. 10 ಲಕ್ಷದವ ರೆಗೆ ಶೇ.4 ಬಡ್ಡಿ ದರದಲ್ಲಿ ಸಾಲ ನೀಡು ತ್ತೇವೆ. ಮಹಿಳಾ ಸಂಘಗಳು ಸಾಲ ಪಡೆದು ಆರ್ಥಿಕವಾಗಿ ಸ್ವಾವಲಂಬಿಗಳಾಗುವಂತೆ ಸಲಹೆ ನೀಡಿದ ಅವರು, ಸಾಹುಕಾರಹುಂಡಿ ಗ್ರಾಮದಲ್ಲಿ ನೂತನ ಹಾಲಿನ ಡೈರಿ ನಿರ್ಮಾಣಕ್ಕೆ ಕೆಎಂಎಫ್‍ನಿಂದ ಹಾಗೂ ಶಾಸಕರ ಅನುದಾನದಿಂದಲೂ ಧನ ಸಹಾಯ ಕೊಡಿಸಲು ಪ್ರಯತ್ನಿಸುತ್ತೇನೆ ಕಟ್ಟಡ ನಿರ್ಮಾಣಕ್ಕೆ ನಿವೇಶನಕ್ಕೆ ಸಂಬಂಧ ಪಟ್ಟ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಲು ಹೇಳಿದ ಅವರು, ಕಟ್ಟಡದ ಕಾಮಗಾರಿ ಆರು ತಿಂಗಳಲ್ಲಿಯೇ ಪೂರ್ಣಗೊಳಿಸಬೇಕು. ಯಾವುದೇ ಕಾರಣಕ್ಕೂ ಕಾಮಗಾರಿ ಅರ್ಧಕ್ಕೆ ನಿಲ್ಲಬಾರದು ಎಂದು ಸಲಹೆ ನೀಡಿದರು.

ಸಮಾರಂಭದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರುಗಳಾದ ಬೋರಮ್ಮ, ಗೌರಿ, ಸಾವಿತ್ರಮ್ಮ, ಸಿದ್ದೇಗೌಡ, ಶಿವಣ್ಣ, ಮಹಾಲಕ್ಷ್ಮಿ, ಸಿದ್ದೇಗೌಡ, ನಾಗಮ್ಮ, ಲಕ್ಷ್ಮಿ ಉಪಸ್ಥಿತರಿದ್ದರು. ಚುನಾವಣಾಧಿಕಾರಿ ಯಾಗಿ ವಸೀಂಪಾಷ ಕಾರ್ಯನಿರ್ವಹಿಸಿ ದರು. ಕಾರ್ಯದರ್ಶಿ ನಾರಾಯಣ, ಬೋಗಾದಿ ಸ್ವಾಮಿ, ಪುಟ್ಟೇಗೌಡ, ಗಿರಿಗೌಡ, ಲಕ್ಷ್ಮಣ್, ರಾಮಚಂದ್ರ, ಆರಿಫ್‍ಪಾಷ, ಕಾರ್ತಿಕ್, ಧೀರು, ನಂಜುಂಡೇಗೌಡ ಉಪಸ್ಥಿತರಿದ್ದರು.

Translate »