ಹುಣಸೂರಲ್ಲಿ ಬಾಬು ಜಗಜೀವನ ರಾಂ ಪುಣ್ಯಸ್ಮರಣೆ
ಮೈಸೂರು

ಹುಣಸೂರಲ್ಲಿ ಬಾಬು ಜಗಜೀವನ ರಾಂ ಪುಣ್ಯಸ್ಮರಣೆ

July 8, 2021

ಹುಣಸೂರು, ಜು.7(ಕೆಕೆ)- ಬಾಬು ಜಗಜೀವನ್ ರಾಂ ಅವರು ದೇಶದ ಬಡ ಜನರ ಹಸಿವನ್ನು ನೀಗಿಸಲು ಹಸಿರು ಕ್ರಾಂತಿ ಯನ್ನೇ ಮಾಡಿದ ಮಹಾ ಪುರುಷ ಎಂದು ಶಾಸಕ ಹೆಚ್.ಪಿ.ಮಂಜುನಾಥ್ ತಿಳಿಸಿದರು.

ನಗರದ ಸಮಾಜ ಕಲ್ಯಾಣ ಇಲಾಖೆ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಬಾಬು ಜಗಜೀವನ್ ರಾಂ ಅವರ 36ನೇ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಮಹಾತ್ಮರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಗೌರವ ಸಲ್ಲಿಸಿ ನಂತರ ಮಾತನಾಡಿದ ಅವರು, ದೇಶದಲ್ಲಿ ಆಹಾರ ಸಮಸ್ಯೆ ಎದುರಾದ ಸಂದರ್ಭದಲ್ಲಿ ಕೃಷಿ ಕ್ಷೇತ್ರವನ್ನು ಹಸಿರೀ ಕರಣಗೊಳಿಸಿ ಅಹಾರ ಸಮಸ್ಯೆಯನ್ನು ನೀಗಿಸುವ ಮೂಲಕ ಅಧುನಿಕ ಕೃಷಿ ಪದ್ಧತಿ ಯನ್ನು ಜಾರಿಗೆ ತಂದ ಕೀರ್ತಿ ಬಾಬೂಜಿ ಅವರಿಗೆ ಸಲ್ಲುತ್ತದೆ ಎಂದರು.

ಅಲ್ಲದೆ ಬಾಬೂಜಿಯವರು ತಮ್ಮ ಅಧಿಕಾರಾವದಿಯಲ್ಲಿ ಕೃಷಿ, ರೈಲ್ವೆ, ಕಾರ್ಮಿಕ ಶಿಕ್ಷಣ, ಸೆರಿದಂತೆ ಹಲವಾರು ಖಾತೆಗಳಲ್ಲಿ ಕೆಲಸ ಮಾಡಿ, ಎಲ್ಲಾ ಇಲಾಖೆಗಳ ಲ್ಲಿಯೂ ಕ್ರಾಂತಿಕಾರಿ ಬದಲಾವಣೆಯನ್ನು ಮಾಡಿದರು. ಇವರು ನೀಡಿದ ಯೋಜನೆಗಳು ನಮ್ಮನ್ನು ಇಂದಿಗೂ ರಕ್ಷಿಸುತ್ತಿವೆ ಎಂದರು.
ಬಹು ದಿನಗಳ ಬೇಡಿಕೆಯಂತೆ ತಾಲೂಕಿ ನಲ್ಲಿ ಅದಿವಾಸಿಗಳ ನಾಯಕ ಬಿರ್ಸಾ ಮುಂಡಾ, ವಾಲ್ಮೀಕಿ ಸಮುದಾಯ ಭವನಗಳ ನಿರ್ಮಾಣಕ್ಕೆ ಸ್ಥಳ ಗುರುತಿಸಲಾಗಿದ್ದು, ತಲಾ ಒಂದೊಂದು ಕೋಟಿ ಹಣ ಬಂದಿದ್ದು, ಸದ್ಯದಲ್ಲೇ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು ಎಂದರು.
ಕಾರ್ಯಕ್ರಮದ ಮೊದಲಿಗೆ ನಾಡ ಹಬ್ಬಗಳ ಅಚರಣಾ ಸಮಿತಿಯ ಸದಸ್ಯ ರಾದ ಎಸ್.ಜಯರಾಮ್, ಮಹನೀಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಜ್ಯೋತಿ ಬೆಳಗುವ ಮೂಲಕ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಬಸವರಾಜು, ಬಿಇಒ ಸಂತೋಷ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇ ಶಕ ಮೋಹನ್, ನಗರಸಭಾಧ್ಯಕ್ಷೆ ಶ್ರೀಮತಿ ಅನುಷಾ ರಾಘು, ಉಪಾಧ್ಯಕ್ಷ ದೇವನಾಯ್ಕ, ನಿಂಗರಾಜ ಮಲ್ಲಾಡಿ, ಶಿವಣ್ಣ, ಜೆ.ಮಹದೇವು, ಬಲ್ಲೇನಹಳ್ಳಿ ಕೆಂಪರಾಜು, ಡಿ.ಕುಮಾರ್, ಬಸವಲಿಂಗಯ್ಯ, ಅಸ್ವಾಳ್ ಕೆಂಪೇಗೌಡ, ರಾಯನ ಹಳ್ಳಿ ಸ್ವಾಮಿ, ಕಿರಂಗೂರ್ ಸ್ವಾಮಿ ಸೇರಿ ದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.

Translate »