ದಲೈ ಲಾಮಾ ಹುಟ್ಟುಹಬ್ಬ: ದಿನಸಿ ಕಿಟ್ ವಿತರಣೆ
ಮೈಸೂರು

ದಲೈ ಲಾಮಾ ಹುಟ್ಟುಹಬ್ಬ: ದಿನಸಿ ಕಿಟ್ ವಿತರಣೆ

July 8, 2021

ಬೆಟ್ಟದಪುರ, ಜು. 7 (ಶಿವದೇವ್)- ಟಿಬೇಟಿಯನ್ ಧರ್ಮಗುರು ದಲೈಲಾಮಾ ಅವರ 86ನೇ ಹುಟ್ಟುಹಬ್ಬದ ಪ್ರಯುಕ್ತ ಶ್ರೀ ಅಕ್ಕಮಹಾದೇವಿ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಎಡ್ವರ್ಡ್ ಫೌಂಡೇಶನ್ ವತಿಯಿಂದ ಬಡವರಿಗೆ ದಿನಸಿ ಕಿಟ್ ವಿತರಿಸಲಾಯಿತು.
ಈ ವೇಳೆ ಜಿಲ್ಲಾ ಹೆಚ್ಚುವರಿ ಪೆÇಲೀಸ್ ಅಧೀಕ್ಷಕ ಶಿವಕುಮಾರ್ ಮಾತನಾಡಿ, ದಲೈಲಾಮಾ ಅವರ ಹುಟ್ಟುಹಬ್ಬವನ್ನು ಬಡವರ ಹಸಿವನ್ನು ನೀಗಿಸುವ ಮೂಲಕ ಆಚರಿಸುತ್ತಿರುವುದು ಸಂತೋಷ ತಂದಿದೆ ಎಂದರು. ಎಡ್ವರ್ಡ್ ಫೌಂಡೇಷನ್ ಅಧ್ಯಕ್ಷ ರಾಜೇಂದ್ರ ವೀರು, ಎಡ್ವರ್ಡ್ ಮುಖ್ಯಸ್ಥೆ ತೆಂಜಿನ್ನ ಚೂಯಿಗ, ಬೆಟ್ಟದಪುರದ ಪೆÇೀಲಿಸ್ ಇಲಾಖೆಯ ಉಪ ನಿರೀಕ್ಷಕ ಬಿ.ಕೆ.ಮಹೇಶ್ ಕುಮಾರ್, ವೃತ್ತ ನಿರೀಕ್ಷಕ ಪ್ರದೀಪ್, ಉಪನಿರೀಕ್ಷಕ ಬಿ ಕೆ ಮಹೇಶ್, ನಮೋ ಮಲ್ಲೇಶ್, ಬಿ.ವಿ. ಮಂಜುನಾಥ್, ಎಎಸ್‍ಐಗಳಾದ ಕುಮಾರ್, ಸೋಮಶೇಖರ್, ಮುಖ್ಯಪೇದೆಗಳಾದ ಭಾಸ್ಕರ್, ದಿಲೀಪ್, ಅಶೋಕ್, ರಾಜೇಶ್, ರಘು, ಮಂಜುನಾಥ್, ಅರುಣ್, ಗಣೇಶ್ ಮತ್ತಿತರರು ಹಾಜರಿದ್ದರು.

Translate »