ತುರ್ತು ಸೇವೆಗಾಗಿ 112 ದೂರವಾಣಿಗೆ ಡಯಲ್ ಮಾಡಿ ಅಭಿಯಾನಕ್ಕೆ ಚಾಲನೆ
ಮೈಸೂರು

ತುರ್ತು ಸೇವೆಗಾಗಿ 112 ದೂರವಾಣಿಗೆ ಡಯಲ್ ಮಾಡಿ ಅಭಿಯಾನಕ್ಕೆ ಚಾಲನೆ

July 8, 2021

ನಂಜನಗೂಡು, ಜು.7 (ರವಿ)- ನಂಜನಗೂಡಿನ ಪಟ್ಟಣ ಮತ್ತು ಗ್ರಾಮಾಂ ತರ ಪೆÇಲೀಸ್ ಇಲಾಖೆ ಹುಲ್ಲಹಳ್ಳಿ ವೃತ್ತದಲ್ಲಿ `ತುರ್ತು ಸೇವೆಗಾಗಿ 112 ದೂರ ವಾಣಿಗೆ ಡಯಲ್ ಮಾಡಿ’ ಅಭಿಯಾನಕ್ಕೆ ನಂಜನಗೂಡಿನ ನ್ಯಾಯಾಧೀಶರಾದ ಗಣಪತಿ ಪ್ರಶಾಂತ್ ಮತ್ತು ಉಪ ವಿಭಾ ಗದ ಡಿವೈಎಸ್‍ಪಿ ಗೋವಿಂದರಾಜು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.

ನ್ಯಾಯಾಧೀಶ ಗಣಪತಿ ಪ್ರಶಾಂತ್ ಮಾತನಾಡಿ, ಸಾರ್ವಜನಿಕರು ಪ್ರಜ್ಞಾವಂತ ರಾಗಬೇಕು, ಮಾಧ್ಯಮದವರು ಹೆಚ್ಚು ಪ್ರಚಾರ ಕೊಟ್ಟು ಜನತೆಗೆ ತಿಳುವಳಿಕೆ ನೀಡುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದು ಕರೆ ನೀಡಿದರು.

ಉಪವಿಭಾಗದ ಡಿವೈಎಸ್‍ಪಿ ಗೋವಿಂದ ರಾಜು ಮಾತನಾಡಿ, ಈತನಕ ಪೆÇಲೀಸ್ ಇಲಾಖೆಗೆ 100- 101-102 ದೂರವಾಣಿಗೆ ಡಯಲ್ ಮಾಡುತ್ತಿದ್ದು, ಇಂದಿನ ದಿನಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ತಿದ್ದುಪಡಿ ಮಾಡಿ ನೂತನ ನಂಬರ್ 112ಕ್ಕೆ ಡಯಲ್ ಮಾಡಲು ಕೋರಿದೆ. ಇದರಿಂದ ಅಹಿತಕರ ಘಟನೆಗಳು, ಅಪಘಾತ, ಜಗಳ, ಮುಂತಾದವುಗಳ ಸ್ಥಳಕ್ಕೆ ಕೇವಲ 10-20 ನಿಮಿಷದಲ್ಲಿ ತಲುಪಿ ಸಾರ್ವಜನಿಕರ ಕುಂದುಕೊರತೆ ಮತ್ತು ಸಮಸ್ಯೆಯನ್ನು ನಿವಾರಣೆ ಮಾಡುವುದಾಗಿ ತಿಳಿಸಿದರು.
ಪಿಎಸ್‍ಐ ವಿಜಯರಾಜ್, ಪೆÇಲೀಸ್ ಸಿಬ್ಬಂದಿ ಹಾಜರಿದ್ದರು.

Translate »