ಪುರಸಭೆಯಲ್ಲಿ ಸ್ಮರಣೆ ವೇಳೆ ಬಾಬೂಜಿಗೆ ಅವಮಾನ
ಮೈಸೂರು

ಪುರಸಭೆಯಲ್ಲಿ ಸ್ಮರಣೆ ವೇಳೆ ಬಾಬೂಜಿಗೆ ಅವಮಾನ

July 8, 2021

ತಿ.ನರಸೀಪುರ, ಜು.7(ಎಸ್‍ಕೆ)- ರಾಷ್ಟ್ರ ನಾಯಕ ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನರಾಂ ಪುಣ್ಯ ಸ್ಮರಣೆಯಂದು ಪುರಸಭೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಾಬೂಜಿಗೆ ಅಪ ಮಾನ ಮಾಡಿದ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಡಾ. ಬಾಬು ಜಗಜೀವನರಾಂ ಸಂಘಟನೆಯ ಒಕ್ಕೂಟದ ಸದಸ್ಯರು ಇಂದು ಪುರಸಭೆ ಮುಂದೆ ಪ್ರತಿಭಟನೆ ನಡೆಸಿದರು.

ಪುರಸಭಾ ಸದಸ್ಯ ಆರ್.ಅರ್ಜುನ್ ನೇತೃತ್ವ ದಲ್ಲಿ ಪುರಸಭೆ ಮುಂದೆ ಜಮಾವಣೆ ಗೊಂಡ ವಿವಿಧ ಗ್ರಾಮಗಳ ಸಮಾಜದ ಸದಸ್ಯರು ಬಾಬೂಜಿಯವರಿಗೆ ಅಪಮಾನ ಮಾಡಿದವರ ಮೇಲೆ ಶಿಸ್ತು ಕ್ರಮ ಜರು ಗಿಸಲು ಮುಂದಾಗದಿರುವುದಕ್ಕೆ ತೀವ್ರ ವಾಗಿ ಆಕ್ರೋಶ ವ್ಯಕ್ತಪಡಿಸಿದರು.

ಮಂಗಳವಾರ ಪುರಸಭೆ ಕಚೇರಿಯಲ್ಲಿ ನಡೆದ ಬಾಬು ಜಗಜೀವನರಾಂ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಬಾಬೂಜಿ ಯವರ ಭಾವಚಿತ್ರದ ಕೆಳಭಾಗದಲ್ಲಿ ಪೆÇರಕೆ ಇಟ್ಟು ಅಗೌರವ ತೋರಲಾಗಿದೆ ಎಂದು ಆರೋಪಿಸಿ ಸಂಘಟನೆಯ ಸದಸ್ಯರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಸ್ಥಳಕ್ಕಾಗಮಿಸಿದ್ದ ತಹಶೀಲ್ದಾರ್ ಡಿ.ನಾಗೇಶ್ ಪ್ರತಿಭಟನಾ ನಿರತರಿಂದ ಮನವಿ ಸ್ವೀಕರಿಸಿ 24 ಗಂಟೆಯೊಳಗೆ ತಪ್ಪಿತಸ್ಥರ ವಿರುದ್ದ ಕ್ರಮ ಜರುಗಿಸುವ ಭರವಸೆ ನೀಡಿದ್ದರು.ಆದರೆ ಇಂದು 12 ಗಂಟೆಯಾದರೂ ತಹಶೀಲ್ದಾರ್ ಯಾವುದೇ ಕ್ರಮಕ್ಕೆ ಮುಂದಾಗದಿದ್ದರಿಂದ ಕೆರಳಿದ ಸಂಘಟನೆಯ ಮುಖ್ಯಸ್ಥರು ಹೆಚ್ಚಿನ ಸಂಖ್ಯೆ ಯಲ್ಲಿ ಜಮಾವಣೆಗೊಂಡು ತಹಶೀಲ್ದಾರ್ ಹಾಗೂ ಮುಖ್ಯಾಧಿಕಾರಿಗಳ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಪುರಸಭಾ ಸದಸ್ಯ ಆರ್.ಅರ್ಜುನ್, ಪುರಸಭೆಯಲ್ಲಿ ಕೆಲವೇ ಮಂದಿ ಅಧಿಕಾರಿಗಳು, ಸದಸ್ಯ ರನ್ನು ಆಹ್ವಾನಿಸದೇ ತಾವೇ ಸುಪ್ರೀಂ ಎಂದುಕೊಂಡು ತಮಗಿಷ್ಟ ಬಂದ ರೀತಿಯಲ್ಲಿ ಬಾಬೂಜಿಯವರ ಸ್ಮರಣೆ ಮಾಡುವ ನೆಪದಲ್ಲಿ ಮಹಾನ್ ವ್ಯಕ್ತಿಗೆ ಅಪ ಮಾನ ಮಾಡಿದ್ದಾರೆ ಎಂದು ಕಿಡಿಕಾರಿದರು.

ಬಾಬೂಜಿಯವರಿಗೆ ಅಪಮಾನ ಮಾಡಿ ರುವವರನ್ನು ತಕ್ಷಣವೇ ಅಮಾನತು ಮಾಡುವ ಮೂಲಕ ಸಮಾಜದ ಆತ್ಮ ಗೌರವ ಕಾಪಾಡುವ ಕೆಲಸವಾಗಬೇಕು ಎಂದರು.

ಈ ವೇಳೆ ಸ್ಥಳಕ್ಕಾಗಮಿಸಿದ ನೂತನ ಮುಖ್ಯಾಧಿಕಾರಿ ಗಿರೀಶ್ ಘಟನೆಗೆ ಸಂಬಂ ಧಿಸಿದಂತೆ ಅಧಿಕಾರಿಗಳಿಗೆ ನೋಟಿಸ್ ನೀಡಿ ವಿವರಣೆ ನೀಡುವಂತೆ ಕೇಳಲಾಗಿದೆ. ತಪ್ಪು ಮಾಡಿದ್ದರೆ ಖಂಡಿತ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ. ಆದರೆ ಸಮಯಾ ವಕಾಶ ಬೇಕಾಗುತ್ತದೆ ಎಂದರು. ಆದರೆ ಇದ ಕ್ಕೊಪ್ಪದ ಪ್ರತಿಭಟನಾ ನಿರತರು ಈಗಿಂದೀ ಗಲೇ ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿಗಳು ಬರುವವ ರೆಗೂ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಪಟ್ಟು ಹಿಡಿದರು. ಪ್ರತಿಭಟನೆಯ ವಿಷಯವನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವು ದೆಂದು ಮುಖ್ಯಾಧಿಕಾರಿ ಅಲ್ಲಿಂದ ನಿರ್ಗಮಿಸಿ ದರು. ಆದರೆ ಪ್ರತಿಭಟನಾನಿರತರು ಮಾತ್ರ ತಮ್ಮ ಧರಣಿಯನ್ನು ಮುಂದುವರೆಸಿದ್ದಾರೆ.

ಪುರಸಭಾ ಸದಸ್ಯರಾದ ಮಂಜುನಾಥ್, ಸಿ.ಪ್ರಕಾಶ್ ಬಾಬು, ಜಗಜೀವನ ರಾಮ್ ಸಂಘದ ಅಧ್ಯಕ್ಷ ಮಲಿಯರು ಶಂಕರ್, ಉಪಾಧ್ಯಕ್ಷ ಗೋವಿಂದರಾಜು, ಖಜಾಂಚಿ ಬಿ.ಎಲ್.ಮಹದೇವ್, ಕಾರ್ಯ ದರ್ಶಿ ಪುಟ್ಟಸ್ವಾಮಿ, ಮುಖಂಡರಾದ ಸಿ.ಡಿ.ವೆಂಕ ಟೇಶ್, ವಿಶ್ವ, ಶಿವಣ್ಣ, ರವಿ, ಚೇತನ್, ಲಿಂಗರಾಜು, ಭಾಸ್ಕರ್, ನಂಜುಂಡ, ಹೊಸಳ್ಳಿ ಮಾದೇಶ್ ಮತ್ತಿತರಿದ್ದರು.

Translate »