ಬೇಬಿ ಬೆಟ್ಟದ ಗಣಿಗಳ ಪರಿಶೀಲಿಸಿದ ಸುಮಲತಾ
ಮಂಡ್ಯ

ಬೇಬಿ ಬೆಟ್ಟದ ಗಣಿಗಳ ಪರಿಶೀಲಿಸಿದ ಸುಮಲತಾ

July 15, 2021

ಪಾಂಡವಪುರ, ಜು. 14- ತುಂತುರು ಮಳೆಯ ನಡುವೆಯೇ ಸಂಸದೆ ಸುಮಲತಾ ಅವರು ಬೇಬಿ ಬೆಟ್ಟದ ಕೆಲವು ಕಲ್ಲು ಗಣಿಗಳು ಹಾಗೂ 4 ಕ್ರಷರ್‍ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗಣಿ ಮಾಲೀಕರು, ಕಾರ್ಮಿಕರು ಹಾಗೂ ಗ್ರಾಮಸ್ಥರೊಂದಿಗೆ ಗಣಿಗಾರಿಕೆ ಬಗ್ಗೆ ಕೆಲ ವಿವರಗಳನ್ನು ಪಡೆದರು. ಸುಮ ಲತಾ ಆವರು ಭೇಟಿ ನೀಡಿದ ಕೆಲ ಕ್ವಾರಿಗಳ ಬಗ್ಗೆ ಅಧಿಕಾರಿಗಳಿಂದ ಸಮರ್ಪಕ ವಾದ ಮಾಹಿತಿಯೇ ಅವರಿಗೆ ದೊರೆಯ ಲಿಲ್ಲ. ಕ್ವಾರಿ ಯಾರದು ಎಂದು ಸಂಸದೆ ಪ್ರಶ್ನಿಸಿದಾಗ, ಉತ್ತರಿಸಲು ತಡವರಿಸಿದ ಅಧಿಕಾರಿಗಳು, ಅದರ ಬಗ್ಗೆ ನಮಗೆ ಮಾಹಿತಿ ಇಲ್ಲ ಎಂದು ಹೇಳಿದಾಗ ಸಂಸದೆ ಗರಂ ಆದರು. ಬಹುತೇಕ ಎಲ್ಲಾ ಕ್ವಾರಿಗಳದ್ದು ಒಂದೇ ಕಥೆಯಾಗಿತ್ತು. ಬೇಬಿಬೆಟ್ಟದಲ್ಲಿರುವ ಎಸ್‍ಎಲ್‍ವಿ ಸ್ಟೋನ್ ಕ್ರಷರ್, ಎಸ್‍ಟಿಜಿ ಸ್ಟೋನ್ ಕ್ರಷರ್, ಸಿದ್ದಲಿಂಗೇಶ್ವರ ಸ್ಟೋನ್ ಕ್ರಷರ್, ಆಶೀರ್ವಾದ್ ಸ್ಟೋನ್ ಕ್ರಷರ್, ಎಸ್‍ಟಿಜಿ ಸ್ಟೋನ್ ಕ್ರಷರ್‍ಗೆ ಸುಮಲತಾ ಭೇಟಿ ನೀಡಿದಾಗ, ನೀವು ರಾಜಕೀಯ ಉದ್ದೇಶದಿಂದ ಇಲ್ಲಿಗೆ ಮಾತ್ರ ಭೇಟಿ ನೀಡಿದ್ದೀರಿ. ಕಾಂಗ್ರೆಸ್ ಮುಖಂಡ ರಾದ ಹೆಚ್. ಕೃಷ್ಣೇಗೌಡ, ನಾಗಣ್ಣಗೌಡ, ಬಿ. ರೇವಣ್ಣ ಮುಂತಾದವರ ಕ್ರಷರ್‍ಗಳಿಗೆ ಏಕೆ ಭೇಟಿ ನೀಡುತ್ತಿಲ್ಲ ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿ ದಾಗ ಸಂಸದೆ ಜೊತೆಗಿದ್ದ ರೈತ ಸಂಘದ ಕಾರ್ಯಕರ್ತರು ಹಾಗೂ ಕ್ವಾರಿ ಮಾಲೀಕರ ನಡುವೆ ಮಾತಿನ ಚಕಮಕಿ ನಡೆಯಿತು. ಕ್ರಷರ್ ಮಾಲೀಕ ರಾದ ರವಿ ಭೋಜೇಗೌಡ, ನಟರಾಜು ಮತ್ತಿತರರು, ನಾವು ಸರ್ಕಾರಕ್ಕೆ ರಾಜಧನ ಕಟ್ಟಿ ಕ್ರಷರ್ ನಡೆಸುತ್ತಿದ್ದೇವೆ. ಕೆಆರ್‍ಎಸ್‍ಗೆ ಧಕ್ಕೆಯಾಗುವುದಾ ದರೆ, ನಮ್ಮ ಕ್ರಷರ್‍ಗಳನ್ನು ಸ್ಥಳಾಂತರ ಮಾಡುತ್ತೇವೆ. ಹೀಗಾಗಿ ಗಣಿಗಾರಿಕೆ ಯಿಂದ ಅಣೆಕಟ್ಟೆಗೆ ಅಪಾಯವಿದೆಯೇ, ಇಲ್ಲವೇ ಎಂಬುದರ ಬಗ್ಗೆ ತಜ್ಞರಿಂದ ಪರಿಶೀಲನೆ ನಡೆಸಿ, ಟ್ರಯಲ್ ಬ್ಲಾಸ್ಟಿಂಗ್ ಮಾಡಿಸಿ ಸ್ಪಷ್ಟವಾದ ಮಾಹಿತಿ ಕೊಟ್ಟರೆ ಯಾವುದೇ ರೀತಿಯ ಅನುಮಾನಗಳು ಇರುವುದಿಲ್ಲ. ಆದ್ದರಿಂದ ತಮಗೆ ಸ್ಪಷ್ಟ ಮಾಹಿತಿ ನೀಡಿ ಎಂದು ಮನವಿ ಮಾಡಿದರು.

ಕೈಕುಳಿಗೆ ಅವಕಾಶ ನೀಡಿ: ಸಂಸದೆ ಸುಮಲತಾ ಬೇಬಿ ಬೆಟ್ಟಕ್ಕೆ ಭೇಟಿ ನೀಡುವ ಮಾರ್ಗಮಧ್ಯೆ ಕಾವೇರಿಪುರ ಗ್ರಾಮದಲ್ಲಿ ಬೋವಿ ಜನಾಂಗದ ಕಲ್ಲು ಕುಟಿಕ ಕಾರ್ಮಿಕರ ಪರವಾಗಿ ತಾಪಂ ಸದಸ್ಯ ಅಲ್ಪಳ್ಳಿ ಗೋವಿಂದಯ್ಯ ಅವರು ಸುಮಲತಾ ಅವರನ್ನು ಭೇಟಿ ಮಾಡಿ, ಕಾವೇರಿಪುರದ ಬೋವಿ ಜನಾಂಗದವರು ತಲೆಮಾರುಗಳಿಂದ ಕೈಕುಳಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದೇವೆ. ಕೆಆರ್‍ಎಸ್ ಅಣೆಕಟ್ಟೆ ನಿರ್ಮಾಣ ಕಾರ್ಯದಲ್ಲೂ ಕೂಡ ನಮ್ಮ ಜನಾಂಗದವರು ತೊಡಗಿಸಿಕೊಂಡಿದ್ದರು. ಇದರಿಂದಾಗಿ ನಮ್ಮ ಹೊಟ್ಟೆ ಮೇಲೆ ಹೊಡೆಯದೇ ಕೈಕುಳಿಗೆ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.

Translate »