ಕೇರಳದಿಂದ ಬರುವವರ ಮೇಲೆ ನಿಗಾ ವಹಿಸಲು ಸೂಚನೆ
ಮೈಸೂರು

ಕೇರಳದಿಂದ ಬರುವವರ ಮೇಲೆ ನಿಗಾ ವಹಿಸಲು ಸೂಚನೆ

July 15, 2021

ಹೆಚ್.ಡಿ.ಕೋಟೆ, ಜು.14(ಮಂಜು)-ಕೇರಳ ಗಡಿ ಭಾಗವಾದ ತಾಲೂಕಿನ ಬಾವಲಿ ಚೆಕ್‍ಪೆÇಸ್ಟ್‍ಗೆ ಇಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಹೆಚ್. ಪ್ರಸಾದ್ ಭೇಟಿ ನೀಡಿ, ಪರಿಶೀಲಿಸಿದರು.

ಈ ವೇಳೆ ಚೆಕ್‍ಪೋಸ್ಟ್‍ನಲ್ಲಿದ್ದ ಸಿಬ್ಬಂದಿ ಯಿಂದ ಕೋವಿಡ್ ಕಟ್ಟೆಚ್ಚರದ ಬಗ್ಗೆ ಮಾಹಿತಿ ಪಡೆದರಲ್ಲದೆ, ಕೇರಳ ಹಾಗೂ ರಾಜ್ಯದ ಬಸ್ ಸಂಚಾರ ಆರಂಭಗೊಂಡಿದ್ದು, 72 ಗಂಟೆಯೊಳಗಿನ ಕೋವಿಟ್ ಟೆಸ್ಟ್ ನೆಗೆಟಿವ್ ವರದಿ ಇರುವ ಪ್ರಯಾಣಿಕರಿಗೆ ಮಾತ್ರ ಜಿಲ್ಲೆ ಪ್ರವೇಶಿಸಲು ಅವಕಾಶ ನೀಡಲು ತಿಳಿಸಿದರು. ಪ್ರತಿ ವಾಹನಗಳ ಮೇಲೂ ನಿಗಾ ಇಡುವಂತೆ ಹಾಗೂ ಪ್ರಯಾಣಿಕರಿಗೆ ಕೋವಿಡ್ ತಪಾಸಣೆ ನಡೆಸುವಂತೆ ಸೂಚಿಸಿದರು. ಜ್ವರ, ಕೆಮ್ಮು, ನೆಗಡಿ ಇತರೆ ರೋಗ ಲಕ್ಷಣ ವಿರುವವರಿಗೆ ಜಿಲ್ಲಾ ಪ್ರವೇಶ ನಿರಾಕರಿಸಿ ವಾಪಸ್ ಕಳುಹಿಸಲು ನಿರ್ದೇಶಿಸಿದರು.

`ಮೈಸೂರುಮಿತ್ರ’ದೊಂದಿಗೆ ಮಾತನಾಡಿದ ಡಾ.ಕೆ.ಹೆಚ್.ಪ್ರಸಾದ್, ಕೇರಳದಲ್ಲಿ ಕೊರೊನಾ ಹಾಗೂ ಝೀಕಾ ವೈರಸ್ ಹೆಚ್ಚಾ ಗಿದ್ದು, ಜಿಲ್ಲಾ ಗಡಿಯಲ್ಲಿ ಕಟ್ಟೆಚ್ಚರ ವಹಿಸಲಾ ಗಿದೆ. ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯ ವರೆಗೆ ವಾಹನ ಸಂಚಾರಕ್ಕೆ ಅವಕಾಶವಿದ್ದು, ಪ್ರತಿಯೊಂದು ವಾಹನದ ಮೇಲೂ ಹದ್ದಿನ ಕಣ್ಣಿಡಲಾಗಿದೆ. ಚೆಕ್‍ಪೋಸ್ಟ್ ಕೌಂಟರ್‍ನಲ್ಲಿ ಪೊಲೀಸ್, ಅರಣ್ಯ ಸಿಬ್ಬಂದಿ ಇದ್ದು ಕೇರಳದಿಂದ ಬರುವವರನ್ನು ಪರಿಶೀಲಿಸ ಲಾಗುತ್ತಿದೆ. ಗಡಿಭಾಗದ ಜನರು ಆತಂಕ ಪಡುವ ಅಗತ್ಯ ಇಲ್ಲ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ರವಿಕುಮಾರ್, ಗೋವಿಂದ್, ಕೋವಿಡ್ ನಿಯಂತ್ರಣ ಕಾರ್ಯ ಪಡೆ ಸದಸ್ಯ ಉಮೇಶ್, ಡಿ.ಬಿ ಕುಪ್ಪೆ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ, ಆಶಾ ಕಾರ್ಯಕರ್ತರಿದ್ದರು.

Translate »