ಮತ್ತೆ ಮುನ್ನೆಲೆಗೆ ೪ ಡಿಸಿಎಂ ಚರ್ಚೆ
ಮೈಸೂರು

ಮತ್ತೆ ಮುನ್ನೆಲೆಗೆ ೪ ಡಿಸಿಎಂ ಚರ್ಚೆ

March 14, 2022

ಬೆಂಗಳೂರು, ಮಾ.೧೩- ರಾಜ್ಯದಲ್ಲಿ ೪ ಉಪಮುಖ್ಯ ಮಂತ್ರಿಗಳ ರಚನೆಯ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ನಾಲ್ಕು ಸಮುದಾಯಗಳಿಗೆ, ೪ ಪ್ರಾಂತ್ಯಗಳಿAದ ಪಟ್ಟ ಕಟ್ಟಲು ರಾಜ್ಯದಿಂದ ಕೇಂದ್ರದ ವರಿಷ್ಠರಿಗೆ ಒತ್ತಡ ಹಾಕಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ನಾಲ್ವರು ಡಿಸಿಎಂಗಳು ಸಾಥ್ ಕೊಡಲು ಹೊಸ ಸೂತ್ರ ರೆಡಿಯಾಗುತ್ತಿದ್ದು, ಈ ಹೊಸ ಸೂತ್ರಕ್ಕೆ ಹೈಕಮಾಂಡ್ ಅಸ್ತು ಅನ್ನುತ್ತದಾ ಎಂಬುದನ್ನು ಕಾದು ನೋಡಬೇಕಿದೆ.

ರಾಜ್ಯ ಬಿಜೆಪಿಯಲ್ಲಿ ಪರ್ಯಾಯ ನಾಯಕತ್ವದ ವ್ಯವಸ್ಥೆ ಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಬೊಮ್ಮಾಯಿ ಅವರಿಗೆ ಮತ್ತಷ್ಟು ರಾಜಕೀಯ ಬಲ ಹೆಚ್ಚಿಸುವ ಬಗ್ಗೆ ಹಾಗೂ ನಾಯ ಕತ್ವದ ಕೊರತೆ ನೀಗಿಸಲು ಕೇಂದ್ರದ ವರಿಷ್ಠ ಮಂಡಳಿ ಬಳಿ ರಾಜ್ಯ ಮೂಲದ ಕೆಲ ಮುಖಂಡರಿAದ ಡಿಸಿಎಂಗಳ ರಚನೆ ಪ್ರಸ್ತಾಪ ಮಾಡಲಾಗುತ್ತಿದೆ.
೪ ಸಮುದಾಯಗಳಿಗೆ ಡಿಸಿಎಂ ಪಟ್ಟ ಕೊಡುವ ಬಗ್ಗೆ ಒತ್ತಡ ಹೇರಲಾಗುತ್ತಿದೆ. ಹಳೇ ಮೈಸೂರು, ಕರಾವಳಿ ಕರ್ನಾಟಕ, ಮುಂಬೈ ಕರ್ನಾಟಕ ಮತ್ತು ಹೈ-ಕಾ ಭಾಗಕ್ಕೆ ಡಿಸಿಎಂ ಕೊಡಲು ಸಲಹೆ ನೀಡಲಾಗುತ್ತಿದೆ. ಅಲ್ಲದೆ ಲಿಂಗಾಯತ, ಒಕ್ಕಲಿಗ, ಹಿಂದುಳಿದ ವರ್ಗ ಮತ್ತು ಎಸ್ಸಿ-ಎಸ್ಟಿ ಸಮುದಾಯಗಳಿಗೆ ಸ್ಥಾನ ನೀಡಲು ಕೂಡ ಸಲಹೆ ನೀಡಲಾಗುತ್ತಿದೆ ಎಂಬ ಮಾಹಿತಿ ತಿಳಿಸಿದೆ.
ರಾಜ್ಯಕ್ಕೆ ೨ ತಂಡ ಆಗಮನ: ೧೮ ಜನರನ್ನೊಳಗೊಂಡ ಬಿಜೆಪಿಯ ೨ ತಂಡಗಳು ರಾಜ್ಯಕ್ಕೆ ಆಗಮಿಸಿವೆ. ಈ ತಂಡ ಶಾಸಕರು, ಮುಖಂಡರು, ಸಂಘದ ಪ್ರಮುಖರನ್ನು ಭೇಟಿ ಆಗಲಿದೆ. ರಾಜ್ಯ ಸರ್ಕಾರದ ಕಾರ್ಯವೈಖರಿ ಏನು? ಸರ್ಕಾರದಲ್ಲಿ ಯಾರು ಏನು ಮಾಡ್ತಿದ್ದಾರೆ..?, ಸಚಿವರ ಕಾರ್ಯ ನಿರ್ವಹಣೆ ಹೇಗಿದೆ..?, ಯಾವ ಇಲಾಖೆ ಮುಂದು.., ಯಾವುದು ಹಿಂದೆ..?, ಸಚಿವರ ಸುತ್ತ ಇರುವ ಜನರ್ಯಾರು..? ಸಚಿವರ ಆಡಳಿತದ ಬಗ್ಗೆ ಜನರ ಅನಿಸಿಕೆ ಹೇಗಿದೆ..?, ಪಕ್ಷದ ಪದಾಧಿಕಾರಿಗಳು, ರಾಜ್ಯಾಧ್ಯಕ್ಷರ ಕಾರ್ಯವೈಖರಿ ಬಗ್ಗೆಯೂ ಮಾಹಿತಿ ಕಲೆ ಹಾಕಲಿದೆ. ಶೀಘ್ರದಲ್ಲೇ ತಂಡದಿAದ ಹೈಕ ಮಾಂಡ್‌ಗೆ ಸಂಪೂರ್ಣ ವರದಿ ಸಲ್ಲಿಕೆಯಾಗಲಿದ್ದು, ಈ ತಂಡಗಳ ವರದಿ ಮೇಲೆ ರಾಜ್ಯದ ಬಗ್ಗೆ ಹೈಕಮಾಂಡ್ ನಿರ್ಧಾರ ಮಾಡಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಮೋದಿ ಹೆಸರಿಂದ ೨೦೨೩ರಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ

ಬೆಂಗಳೂರು, ಮಾ.೧೩- ಮೋದಿ ನಾಮಬಲ, ಅಭಿವೃದ್ಧಿ ಕಾರ್ಯಕ್ರಮಗಳ ಬಲ ಹಾಗೂ ಸಂಘಟನೆಯ ಬಲದಿಂದ ರಾಜ್ಯದಲ್ಲಿ ೨೦೨೩ರಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಪಂಚರಾಜ್ಯ ಚುನಾವಣೆಯಲ್ಲಿ ಉಸ್ತುವಾರಿಗಳಾಗಿ ಜವಾಬ್ದಾರಿ ವಹಿಸಿದ್ದ ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ಬಿಜೆಪಿ ರಾಷ್ಟಿçÃಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಮತ್ತು ಕೇಂದ್ರ ಸಚಿವೆ ಕು. ಶೋಭಾ ಕರಂದ್ಲಾಜೆ ಅವರಿಗೆ ಇಂದು ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಒಗ್ಗಟ್ಟಿನ ಮಂತ್ರ, ಶ್ರಮದಿಂದ ರಾಜ್ಯದಲ್ಲೂ ೨೪ ಗಂಟೆ ನಿರಂತರ ದುಡಿದು ಬಿಜೆಪಿಗೆ ಗೆಲುವು ತರಬೇಕಿದೆ. ಯೋಜನಾಬದ್ಧ ಚುನಾವಣೆ ಮಾಡೋಣ. ಒಟ್ಟಾಗಿ ನಿಲ್ಲೋಣ. ಒಂದುಗೂಡಿ ಗೆಲುವು ತರೋಣ ಎಂದರು.

ಜನ ಹಿಂದುತ್ವ ಒಪ್ಪಿದ್ದಾರೆ: ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಸಾಧನೆ ನರೇಂದ್ರ ಮೋದಿ ಅವರ ನಾಯಕತ್ವಕ್ಕೆ ಲಭಿಸಿದ ಗೆಲುವು. ೨೦೨೪ರ ಸೆಮಿಫೈನಲ್ ಚುನಾವಣೆಯ ಸಾಧನೆ ಇದು.
ಉತ್ತರ ಪ್ರದೇಶದಲ್ಲಿ ಮೋದಿಜಿ, ಯೋಗಿ ಅವರ ನಾಯಕತ್ವವನ್ನು ಜನರು ಒಪ್ಪಿಕೊಂಡಿ ದ್ದಾರೆ. ಜನರು ರಾಷ್ಟಿçÃಯವಾದ, ಹಿಂದುತ್ವವನ್ನು ಒಪ್ಪಿಕೊಂಡಿದ್ದಾರೆ. ಉತ್ತರಾಖಂಡ ದಲ್ಲಿ ಅಭಿವೃದ್ಧಿಗೆ ಗೆಲುವು ಸಿಕ್ಕಿದೆ. ಗೋವಾ ಚುನಾವಣೆ ಅತ್ಯಂತ ಸಂಕೀರ್ಣವಾದುದು. ಕಾರ್ಯಕರ್ತರನ್ನು ಒಗ್ಗೂಡಿಸಿ ಜಯ ತಂದು ನೀಡಲಾಯಿತು. ಪಂಜಾಬ್ ಪಕ್ಷದ ನೆಲೆಗಟ್ಟನ್ನು ಗಟ್ಟಿಗೊಳಿಸಲಾಗಿದೆ. ೪ ರಾಜ್ಯಗಳಲ್ಲಿ ಅಭೂತಪೂರ್ವವಾದ ಜಯವನ್ನು ಬಿಜೆಪಿ ಸಾಧಿಸಿ ದಾಖಲೆ ಮಾಡಿದೆ. ನಮ್ಮ ನಾಯಕರಾದ ಪ್ರಧಾನಿ ಮೋದಿಜಿ ಅವರ ಶಕ್ತಿ ಜಗತ್ತಿಗೇ ಪರಿಚಯವಾಗಿದೆ ಎಂದು ಬಣ ್ಣಸಿದರು.
ಕನಕಪುರ ಕಾಂಗ್ರೆಸ್: ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್‌ಕುಮಾರ್ ಕಟೀಲ್ ಮಾತನಾಡಿ, ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಗೆಲುವು ಸಾಧಿಸಲಿದೆ. ರಾಷ್ಟಿçÃಯ ನಾಯಕತ್ವ ಕರ್ನಾಟಕದ ಕಾರ್ಯಕರ್ತರ ಮೇಲೆ ವಿಶ್ವಾಸ ಹೊಂದಿದೆ.

ಬೊಮ್ಮಾಯಿಯವರದು ಅದ್ಭುತ ಬಜೆಟ್: ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ ಮಾತನಾಡಿ, ಕರ್ನಾಟಕದಲ್ಲಿ ಅದ್ಭುತ ಬಜೆಟ್ ಅನ್ನು ಬೊಮ್ಮಾಯಿ ಅವರು ನೀಡಿದ್ದಾರೆ. ಮನೆಗೆ ದಾಖಲೆಪತ್ರ ತಲುಪಿಸುವ ಕಂದಾಯ ಇಲಾಖೆಯ ಕೆಲಸ ಆರಂಭವಾಗಿದೆ. ಯಡಿಯೂರಪ್ಪ, ಬೊಮ್ಮಾಯಿ ಅವರ ಕಾಲದ ಉತ್ತಮ ಕಾರ್ಯಗಳನ್ನು ಜನರಿಗೆ ತಲುಪಿಸಬೇಕಿದೆ. ಆ ಮೂಲಕ ಕರ್ನಾಟಕದಲ್ಲೂ ಗೆಲುವು ಸಾಧ್ಯವಾಗಬೇಕು ಎಂದರು.

Translate »