ತಿಂಗಳ ಅಂತ್ಯದಲ್ಲಿ ‘ನಂದಿನಿ’ ಹಾಲಿನ ದರ ಏರಿಕೆ?
ಮೈಸೂರು

ತಿಂಗಳ ಅಂತ್ಯದಲ್ಲಿ ‘ನಂದಿನಿ’ ಹಾಲಿನ ದರ ಏರಿಕೆ?

March 14, 2022

ಬೆಂಗಳೂರು, ಮಾ.೧೩- ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ‘ನಂದಿನಿ’ ಹಾಲಿನ ದರ ಹೆಚ್ಚಳ ಮಾಡುವ ಸಿದ್ಧತೆ ನಡೆಸಿದ್ದು, ಮಾರ್ಚ್ ಅಂತ್ಯ ದೊಳಗೆ ದರ ಪರಿಷ್ಕರಣೆಯಾಗುವ ಸಾಧ್ಯತೆ ಇದೆ. ಪ್ರತಿ ಲೀಟರ್‌ಗೆ ೩ ರೂ. ಹೆಚ್ಚಳ ಮಾಡುವಂತೆ ಜಿಲ್ಲಾ ಹಾಲು ಒಕ್ಕೂಟಗಳು ಈಗಾಗಲೇ ಮನವಿ ಮಾಡಿ ದ್ದವು. ಆದರೆ, ಕೋವಿಡ್ ಮೂರನೇ ಅಲೆ, ಮತ್ತೊಮ್ಮೆ ಲಾಕ್‌ಡೌನ್ ಪ್ರಸ್ತಾಪ ದಿಂದ ಸಾರ್ವಜನಿಕರು ಸಂಕಷ್ಟದಲ್ಲಿ ಸಿಲುಕಿದ್ದರಿಂದ ಆ ಸಂದರ್ಭದಲ್ಲಿ ದರ ಹೆಚ್ಚಳ ಮಾಡುವುದು ಸರಿಯಲ್ಲ ಎಂಬ ಕಾರಣಕ್ಕೆ ಮುಂದೂಡಲಾಗಿತ್ತು.

ಈ ಮಧ್ಯೆ ದರ ಹೆಚ್ಚಳ ಮಾಡುವಂತೆ ಒಕ್ಕೂಟಗಳು ಕೆಎಂಎಫ್ ಮೇಲೆ ನಿರಂ ತರ ಒತ್ತಡ ಹಾಕುತ್ತಿವೆ. ಈ ಎಲ್ಲಾ ಕಾರಣ ಗಳಿಂದ ಮುಂಬರುವ ಕೆಎಂಎಫ್ ಸಾಮಾನ್ಯ ಸಭೆಯಲ್ಲಿ ದರ ಹೆಚ್ಚಳದ ಬಗ್ಗೆ ನಿರ್ಧ ರಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ.

ಮುಖ್ಯಮಂತ್ರಿ ಬಳಿಗೆ ನಿಯೋಗ ತೆರಳು ತ್ತೇವೆ: ಹಾಲಿನ ದರ ೩ ವರ್ಷಗಳಿಂದ ಹೆಚ್ಚಾ ಗಿಲ್ಲ. ಹೀಗಾದರೆ ಒಕ್ಕೂಟಗಳು ತೀವ್ರ ನಷ್ಟಕ್ಕೆ ಒಳಲಾಗುತ್ತವೆ. ಎಲ್ಲಾ ದರಗಳೂ ಏರು ತ್ತಿರುವಾಗ ರೈತನಿಗೆ ನ್ಯಾಯಯುತವಾದ ಬೆಲೆ ನೀಡಬೇಕಾದರೆ ದರ ಹೆಚ್ಚಳ ಮಾಡ ಬೇಕಾಗಿರುವುದು
ಅನಿವಾರ್ಯ. ಸರ್ಕಾರಕ್ಕೆ ಮತ್ತು ಕೆಎಂಎಫ್‌ಗೆ ಈಗಾಗಲೇ ದರ ಹೆಚ್ಚಳ ಮಾಡುವಂತೆ ಮೂರು ಬಾರಿ ಮನವಿ ಸಲ್ಲಿಸಿದ್ದೇವೆ. ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರೊಂದಿಗೆ ಶೀಘ್ರದಲ್ಲಿಯೇ ಎಲ್ಲಾ ಒಕ್ಕೂಟಗಳ ಅಧ್ಯಕ್ಷರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ದರ ಪರಿಷ್ಕರಣೆಗೆ ಮತ್ತೊಮ್ಮೆ ಮನವಿ ಮಾಡುತ್ತೇವೆ ಎಂದು ಬಮೂಲ್ ಅಧ್ಯಕ್ಷ ನರಸಿಂಹಮೂರ್ತಿ ತಿಳಿಸಿದರು.

ಬಮೂಲ್ ವತಿಯಿಂದ ಸದ್ಯ ಪ್ರತಿ ಲೀಟರ್ ಹಾಲು ಖರೀದಿಗೆ ರೈತರಿಗೆ ೨೪.೫ ರೂ.ನಿಂದ ೨೬ರೂ.ವರೆಗೆ (ಹಾಲಿನ ಕೊಬ್ಬಿನಾಂಶದ ಆಧಾರದ ಮೇಲೆ ದರ ವ್ಯತ್ಯಾಸ) ಕೊಡಲಾಗುತ್ತಿದೆ. ಏ.೧ರಿಂದ ರೈತರಿಗೆ ನೀಡುತ್ತಿರುವ ದರದಲ್ಲಿ ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ. ಅದರೆ, ಎಷ್ಟು ಹೆಚ್ಚಳ ಮಾಡಬೇಕು ಎಂಬುದನ್ನು ಸಭೆ ನಡೆಸಿ ತೀರ್ಮಾನಿಸಲಾಗುವುದು. ಪ್ರತಿ ಲೀಟರ್ ಹಾಲಿಗೆ ಕನಿಷ್ಠ ೩ ರೂಪಾಯಿಯಾದರೂ ಗ್ರಾಹಕರಿಗೆ ಹೆಚ್ಚಳ ಮಾಡಿದರೆ ಮಾತ್ರ ಒಕ್ಕೂಟಗಳು ಉಳಿಯುತ್ತವೆ. ಆದರೆ, ಸರ್ಕಾರ ಈ ಬಗ್ಗೆ ಗಮನವಹಿಸುತ್ತಿಲ್ಲ ಎಂದು ನರಸಿಂಹಮೂರ್ತಿ ಹೇಳಿದರು.

Translate »